LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯೂರಿಯಾ ಗೊಬ್ಬರಕ್ಕಾಗಿ ಡಾ.ನಾಗರಾಜ್ ಮೀಸೆ ಆಕ್ರೋಶ

ನಾಯಕನಹಟ್ಟಿ: ನಾಯಕನಹಟ್ಟಿ ಪಟ್ಟಣದ ಸುತ್ತಮುತ್ತಲಿನ ರೈತರಿಗೆ ಯೂರಿಯಾ ಗೊಬ್ಬರದ ಕೊರತೆಯ ಬಗ್ಗೆ  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ( ಡಾ. ವಾಸುದೇವ ಮೇಟಿ )ಬಣ ನಾಯಕನಹಟ್ಟಿ ಹೋಬಳಿ ಘಟಕ  ಅಧ್ಯಕ್ಷ ಡಾ. ನಾಗರಾಜ್ ಮೀಸೆ ಹಾಗೂ ಪದಾಧಿಕಾರಿಗಳು ನಾಡಕಚೇರಿ ಉಪ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸುವ ಮುಖಾಂತರ ಪ್ರತಿಭಟನೆಯನ್ನು ಮಾಡಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಅವರು,  ನಾಯಕನಹಟ್ಟಿ ಸುತ್ತಮುತ್ತಲಿನ ಬಡ ರೈತರು ತಮ್ಮ ಜಮೀನುಗಳಿಗೆ  ಸಾಲ ಸೋಲ ಮಾಡಿ ಬೆಳೆಗಳನ್ನು ಇಟ್ಟು ಇವರಿಗೆ ಗೊಬ್ಬರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.  ಪಟ್ಟಣದಲ್ಲಿರುವ ಗೊಬ್ಬರದ ಅಂಗಡಿಗಳಿಗೆ ಅಲೆದಾಡಿ ಯೂರಿಯಾ  ಗೊಬ್ಬರ ಸಿಗದೇ ಸುಸ್ತಾಗಿ  ಸರ್ಕಾರಕ್ಕೆ ಕೃಷಿ ಮಂತ್ರಿಗಳಿಗೆ ಸ್ಥಳೀಯ ಶಾಸಕರಿಗೆ ಮತ್ತು  ಕೃಷಿ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ.  ರೈತರಿಗೆ ಸರಿಯಾದ ಸಮಯಕ್ಕೆ ಬೆಳೆದ ಬೆಳೆಗಳಿಗೆ ಗೊಬ್ಬರ ಕೊಡದಿದ್ದರೆ ಇಳುವರಿ ಕುಂಟಿತಗೊಂಡು ರೈತ ಸಾಲಗಾರನಾಗಿ ಸಾಯುವಂತ ಪರಿಸ್ಥಿತಿ ಎದುರಾಗಬಹುದು.  ಇದಕ್ಕೆ ನೇರವಾಗಿ ಸರ್ಕಾರ ಮತ್ತು ಅಧಿಕಾರಿಗಳೇ ನೇರ ಹೊಣೆ ಯಾಗುತ್ತಾರೆ ಎಂದರು.

ಈ ಕ್ಷೇತ್ರದ ಶಾಸಕರಾದಂತಹ ಎನ್ ವೈ ಗೋಪಾಲಕೃಷ್ಣರವರು ಮಧ್ಯಪ್ರವೇಶಿಸಿ ರೈತರಿಗೆ ಆಗುವಂತಹ ಅನಾನುಕೂಲಗಳನ್ನು ಪರಿಶೀಲಿಸಿ,  ತಕ್ಷಣದಿಂದಲೇ ಗೊಬ್ಬರ ವಿತರಣೆ ಯಾಗುವಂತೆ ನೋಡಿಕೊಳ್ಳಬೇಕು.  ಶಾಸಕರು ರೈತರ ಸ್ಥಿತಿಗತಿಗಳನ್ನು ಅರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದರು.

ರೈತರಿಗೆ ನೇರವಾಗಿ ಸಮಯಕ್ಕೆ ಸರಿಯಾಗಿ ಗೊಬ್ಬರ ವಿತರಣೆ ಮಾಡದೆ  ಹೋದರೆ ನಾಡಕಚೇರಿಯ ಬಳಿ ಸರ್ಕಾರದ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ರೈತರಿಗೆ ಸಮರ್ಪಕವಾಗಿ ಗೊಬ್ಬರ ಸಿಗುವವರೆಗೂ  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ( ಡಾ. ವಾಸುದೇವ ಮೇಟಿ) ಬಣ ಧರಣಿ ಮಾಡಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ  ಓ. ಮಂಜುನಾಥ್ ಗೌಡಗೆರೆ ಗೌರವಾಧ್ಯಕ್ಷರು ,  ಕೆಎಂ ಮಂಜುನಾಥ್ ಕಾರ್ಯದರ್ಶಿ,  ಸಿ ಎಸ್ ರಾಘವೇಂದ್ರ,  ಸಂಜೀವಿನಿ ಪ್ರಸನ್ ಕುಮಾರ್ ಮಲ್ಲೂರಹಳ್ಳಿ,  ಬಸವರಾಜ್ ಮಾದೇವಪುರ,  ಜಿಲ್ಲಾ ಕಾರ್ಯದರ್ಶಿ ನವೀನ್ ಮದಕರಿ,  ತಿಪ್ಪೇಸ್ವಾಮಿ ದಲಿತ ಮುಖಂಡರು ನಾಯಕನಹಟ್ಟಿ,  ತಿಪ್ಪೇಸ್ವಾಮಿ , ತಿಪ್ಪಣ್ಣ , ಸೂರಯ್ಯ, ಮಂಜಣ್ಣ , ಮಹಾಂತೇಶ್ ,  ಓಬಯ್ಯ. ಬೋರಣ್ಣ ಸೇರಿದಂತೆ  ಇನ್ನು ಅನೇಕ ಸುತ್ತಮುತ್ತಲಿನ ರೈತ ಮುಖಂಡರು ನೊಂದ ರೈತರು ಭಾಗವಹಿಸಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST