ಈ ಘಟನೆ ನಡೆದು 8 ತಿಂಗಳು ಕಳೆದರೂ ಇದರ ಬಗ್ಗೆ ಕ್ರಮಕೈಗೊಳ್ಳದ ಮುಖ್ಯಕಾರ್ಯನಿರ್ವಹಾಧಿಕಾರಿಗಳಾದ ಗಂಗಾಧರ್ ಅವರನ್ನು ಅಮಾನತ್ತುಗೊಳಿಸಬೇಕು ಈ ಘಟನೆ ಸಾಮಾಜಿಕ ಜಾಲತಾಣ ಮತ್ತು ಪತ್ರಿಕೆ ಹಾಗೂ ಟಿ.ವಿ. ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ರಾಜ್ಯದ ಮೂಲೆ-ಮೂಲೆಗಳಿಂದ ನಮ್ಮ ಸಂಘಟನೆಗೆ ಕರೆ ಮಾಡಿ ಮಾತನಾಡಿ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಇದನ್ನು ಹಗುರವಾಗಿ ಪರಿಗಣಿಸದೇ ತಕ್ಷಣ ಇವನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಡಾ. ವಾಸುದೇವ ಮೇಟಿ ಬಣ) ನಾಯಕನಹಟ್ಟಿ ಹೋಬಳಿ ಘಟಕ ಆಗ್ರಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ನಾಯಕನಹಟ್ಟಿ ಹೋಬಳಿಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಡಾ. ವಾಸುದೇವ ಮೇಟಿ ಬಣ)ದ ಹೋಬಳಿ ಅಧ್ಯಕ್ಷ ಡಾ.ನಾಗರಾಜ್ ಮೀಸೆ, ಹೋಬಳಿ ಕಾರ್ಯದರ್ಶಿ ಕೆ.ಎಂ.ಮಂಜುನಾಥ, ಹೋಬಳಿ ಉಪಾಧ್ಯಕ್ಷ ಸಿ.ಎಸ್.ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷ ಪಟೇಲ್ ಮಲ್ಲಿಕಾರ್ಜುನ, ಎಸ್.ಎಂ.ಬಸವರಾಜ್ ಮಲ್ಲೂರಹಳ್ಳಿ, ಸಂಜೀವಿನಿ ಪ್ರಸನ್ನ, ಸಂಜೀವಿನಿ ಶಶಿ, ಓಬಯ್ಯನಹಟ್ಟಿ ಗ್ರಾಮ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ದಾಸರಮುತ್ತೇನಹಳ್ಳಿ ಗ್ರಾ.ಘ.ಅಧ್ಯಕ್ಷ ಪಾಪಣ್ಣ, ಜಿಲ್ಲಾ ಕಾರ್ಯದರ್ಶಿ ನವೀನ್ ಮದಕರಿ, ಕೆಆರ್‌ಎಸ್ ಪಾರ್ಟಿ ಮುಖಂಡ ಬಾಲರಾಜ್ ದೇವರಹಳ್ಳಿ ಚಳ್ಳಕೆರೆ, ಹಾಗೂ ಇನ್ನೂ ಇತರರು ಇದ್ದರು.