LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅರುಣ.ಬಿ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ.

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬಾಬು ಆಚಾರಿ ಇವರ ಮಗನಾದ ಅರುಣ.ಬಿ ಅವರು ಪ್ರಾಥಮಿಕ, ಮಾಧ್ಯಮಿಕ, ಪದವಿ, ಹಾಗೂ ಸ್ನಾತಕೋತ್ತರ ಪದವಿಗಳನ್ನು ಸೊರಬ ಹಾಗೂ ಸಾಗರದಲ್ಲಿ ಅಭ್ಯಾಸ ಮಾಡಿ, ಉನ್ನತ ವಿದ್ಯಾಭ್ಯಾಸ ಹಾಗೂ ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದು ಶಿಕ್ಷಣ ಸಂಸ್ಥೆಗಳಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.



ಹೋರಾಟದ ಬದುಕಿನ ಜಂಜಾಟದಲ್ಲಿ ಪಟ್ಟುಬಿಡದೆ ತಮ್ಮ ಉನ್ನತ ವ್ಯಾಸಂಗವನ್ನು ಮುಂದುವರಿಸಿ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಹಿರಿಯ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ರವೀಂದ್ರ ಕುಮಾರ್, ಬಿ ಇವರ ಮಾರ್ಗದರ್ಶನದಲ್ಲಿ "ಎಂಪವರ್ಮೆಂಟ್ ಆಫ್ ವಿಮನ್ ಥ ಗಾರ್ಮೆಂಟ್ ಇಂಡಸ್ಟ್ರೀಸ್ ಇನ್ ಕರ್ನಾಟಕ: ಎ ಸ್ಟಡಿ ಆಫ್ ಸೆಲೆಕ್ಟಡ್ ಯೂನಿಟ್ಸ್ " ಎಂಬ ಶೀರ್ಷಿಕೆಯ ಅಡಿಯಲ್ಲಿ ಬೆಂಗಳೂರು ನಗರದ ಆಯ್ದ ಗಾರ್ಮೆಂಟ್ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ಸ್ಥಿತಿ-ಗತಿಗಳು ಹಾಗೂ ಅವರ ಸಬಲೀಕರಣದ ಬಗ್ಗೆ ಸಂಶೋಧನೆ ನಡೆಸಿ ಮಹಾಪಂಬಂಧವನ್ನು ತುಮಕೂರುವಿಶ್ವವಿದ್ಯಾನಿಲಯದಲ್ಲಿ ಮಂಡಿಸಿದ್ದಾರೆ‌. ತುಮಕೂರು ವಿಶ್ವವಿದ್ಯಾನಿಲಯದ 18 ನೇ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಅವರು ಪಿಎಚ್.ಡಿ. ಪದವಿ ಪ್ರಧಾನ ಮಾಡಿದರು. ಬಂಧುಮಿತ್ರರರು, ಕುಟುಂಬಸ್ಥರು, ಸ್ನೇಹಿತರು, ಅಧ್ಯಾಪಕರು, ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST