ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಗುರು ಪೂರ್ಣಿಮಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂಗಳ ಮತ್ತು ಭಾರತದ ಮೇಲೆ ನಡೆಯುತ್ತಿರುವ ಆಘಾತಗಳನ್ನು ಗಮನಿಸಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಹಿಂದೂ ಧರ್ಮದ ಮೇಲೆ ವಿವಿಧ ರೀತಿಯ ಆಯಾಮಗಳಲ್ಲಿ ಆಕ್ರಮಣಗಳು ನಡೆಯುತ್ತಿದೆ. ಲವ್ ಜಿಹಾದ್, ಮತಾಂತರ, ಗೋ ಹತ್ಯೆ, ಜನಸಂಖ್ಯಾ ಜಿಹಾದ್ ಇವೆಲ್ಲವುಗಳಿಂದ ಭವಿಷ್ಯದಲ್ಲಿ ಹಿಂದೂ ಸಮಾಜ ಅನೇಕ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಇಂದು ಸಮಾಜ ಕೇವಲ ಸಕಾಮ ಭಕ್ತಿಯನ್ನು ಮಾಡುತ್ತಿದೆ, ಆದರೆ ಇಂದು ಎಲ್ಲಾ ಹಿಂದೂಗಳು ಶಕ್ತಿಯ ಉಪಾಸನೆಯನ್ನು ಮಾಡಬೇಕಾಗಿದೆ ಎಂದರು.

ಲೋಕಮಾನ್ಯ ಬಾಲಗಂಗಾಧರ ತಿಲಕ್, ಸಂಗೊಳ್ಳಿ ರಾಯಣ್ಣ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವರಂತೆ ಶಕ್ತಿಯ ಉಪಾಸನೆಯನ್ನು ಮಾಡಬೇಕಾಗಿದೆ. ಬಾಹ್ಯ ಶತ್ರುಗಳನ್ನು ನಾವು ಸುಲಭವಾಗಿ ಎದುರಿಸಬಹುದು. ಆಂತರಿಕ ಶತ್ರುಗಳನ್ನ ಎದುರಿಸುವುದು ತುಂಬಾ ಕಠಿಣ. ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮ ಸೇನೆ, ಭಜರಂಗದಳ ಸಂಘಟನೆಗ¼ಭೀ ಸಮಸ್ಯೆಯನ್ನು ಎದುರಿಸುತ್ತಿವೆ. ಈ ಎಲ್ಲ ಸಂಘಟನೆಗಳಿಗೆ ಮಾರ್ಗದರ್ಶನ ಮತ್ತು ಪ್ರೇರಣೆ ಗುರುವಿನ ಸ್ಥಾನದಲ್ಲಿದ್ದು ಸನಾತನ ಸಂಸ್ಥೆಯು ಮಾಡುತ್ತಿದೆ. ಇಂತಹ ಸರ್ವ ಶ್ರೇಷ್ಠವಾದಂತಹ ಸನಾತನ ಸಂಸ್ಥೆಯ ಜೊತೆಗೆ ಗುರುಗಳ ಮಾರ್ಗದರ್ಶನದಲ್ಲಿ ಹಿಂದೂ ಸಂಘಟನೆಗಳು ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೆ ಬಹುಬೇಗ ಹಿಂದೂ ರಾಷ್ಟ್ರವನ್ನು ಸಾಕಾರ ಮಾಡಬಹುದು ಎಂದರು.
ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ್ ಗೌಡ ಮಾತನಾಡಿ, ಪ್ರಭು ಶ್ರೀರಾಮನು ರಾವಣನ ವಿರುದ್ಧ ವಾನರ ಸೇನೆಯ ಸಂಘಟನೆ ನಿರ್ಮಿಸಿದನು. ಛತ್ರಪತಿ ಶಿವಾಜಿ ಮಹಾರಾಜ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಇಸ್ಲಾಮೀ ಸುಲ್ತಾನರ ವಿರುದ್ಧ ಸಾಮಾನ್ಯ ಮಾವಳೆಗಳ ಸಂಘಟನೆಯನ್ನು ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಈ ಸಂಘಟನೆಯು ಧರ್ಮಕ್ಕಾಗಿ ತ್ಯಾಗ ಮಾಡುವ ಪ್ರೇರಣಾದಾಯಿ ವಿಚಾರದ ಮೇಲೆ ಆಗಿತ್ತು. ಇಂತಹ ನಿಸ್ವಾರ್ಥ ಸಂಘಟನೆ ನಿರ್ಮಾಣವಾದಾಗಲೇ ನಿಜವಾದ ಅರ್ಥದಲ್ಲಿ ರಾಮರಾಜ್ಯ ಮತ್ತು ಹಿಂದವೀ ಸ್ವರಾಜ್ಯ ಸಾಕಾರಗೊಳ್ಳುತ್ತದೆ. ಪ್ರಸ್ತುತ ಕಾಲದಲ್ಲಿಯೂ ಇಂತಹ ಸಂಘಟನೆಯ ಆವಶ್ಯಕತೆಯಿರುವುದರಿಂದ ಪ್ರಭು ಶ್ರೀರಾಮನಂತೆ ಆರ್ಯ ಸಂಘಟನೆ ನಿರ್ಮಿಸಲು ಕಟಿಬದ್ಧರಾಗೋಣ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾಯಕ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಮಂಡ್ಯದಲ್ಲಿ ಮತಾಂಧರು ಗೋಹತ್ಯೆ ಮಾಡುತ್ತಿರುವಾಗ ಹಿಂದೂಗಳು ಗೋರಕ್ಷಣೆ ಮಾಡಲು ಮುಂದಾದರೆ ಪೊಲೀಸರು ಗೋರಕ್ಷಕರನ್ನೇ ಬಂಧಿಸಿದರು. ವಕ್ಫ್ ಕಾನೂನಿನ ವಿರುದ್ಧ ಪಶ್ಚಿಮ ಬಂಗಾಳದ ರ‍್ಷಿದಾಬಾದ್‌ನಲ್ಲಿ ಮತಾಂಧರು ಗಲಭೆಗಳನ್ನು ನಡೆಸಿದರು.

ಇದರಲ್ಲಿ ಪೊಲೀಸರ ಮೇಲೂ ಆಕ್ರಮಣ ಮಾಡಲಾಯಿತು. ಹಾಗೆಯೇ ಹಿಂದೂಗಳ ಮನೆಗಳು, ಅಂಗಡಿಗಳನ್ನು ಸುಡಲಾಯಿತು. ಉತ್ತರಪ್ರದೇಶ, ರಾಜಸ್ಥಾನ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಮತಾಂಧರು ಕಲ್ಲು ತೂರಿ ಹಿಂಸಾಚಾರ ನಡೆಸಿದರು. ಭಾರತದ ಮೇಲೆ ಆಂತರಿಕ ಮತ್ತು ಬಾಹ್ಯ ಶತ್ರುಗಳಿಂದ ನಡೆಯುತ್ತಿರುವ ಆಕ್ರಮಣಗಳು ಕೇವಲ ವಿಸ್ತರಣಾವಾದಕ್ಕಾಗಿ ಅಲ್ಲ, ಬದಲಾಗಿ ಹಿಂದೂ ಧರ್ಮವನ್ನು ನಾಶಪಡಿಸಲು ನಡೆಯುತ್ತಿವೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು `ದೇಶ' ಕೇಳಿ ಗುಂಡು ಹಾರಿಸದೆ, `ಧರ್ಮ' ಕೇಳಿ ಗುಂಡು ಹಾರಿಸಿದರು. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರದAತಹ ಅನೇಕ ಸಮಸ್ಯೆಗಳು ಇವೆ. ಇದೆಲ್ಲವನ್ನು ನೋಡಿದಾಗ ಹಿಂದೆ ಪ್ರಭು ಶ್ರೀರಾಮರ ಕಾಲದಲ್ಲಿ, ಶಿವಾಜಿ ಮಹಾರಾಜರ ಕಾಲದಲ್ಲಿ, ಹಕ್ಕ ಬುಕ್ಕರ ಕಾಲದಲ್ಲಿ ಇದೇ ರೀತಿ ಧರ್ಮ ಸಂಕಟಗಳು ಎದುರಾಗಿದ್ದವು. ಈ ಎಲ್ಲ ಸಂದರ್ಭಗಳಲ್ಲಿಯೂ ಅವರು ಗುರುಗಳ ಮಾರ್ಗದರ್ಶನ ಪಡೆದು ಧರ್ಮ ಸಂಸ್ಥಾಪನೆಯ ಕಾರ್ಯ ಮಾಡಿದ್ದಾರೆ. ಗುರುಶಿಷ್ಯ ಪರಂಪರೆಗೆ ಹಿಂದಿನಿಂದಲೂ ಮಹತ್ವವಿದೆ. ಈಗ ನಾವೂ ಸಹ ಇಂದಿನ ಗುರು ಪೂರ್ಣಿಮೆಯ ದಿನ ಧರ್ಮ ಸಂಸ್ಥಾಪನೆಗಾಗಿ ಸಂಘಟಿತರಾಗಲು ಸಂಕಲ್ಪ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ 1 ಸಾವಿರಕ್ಕೂ ಅಧಿಕ ಹಿಂದೂಗಳಿಂದ ಧರ್ಮ ರಕ್ಷಣೆಗಾಗಿ ಮಹಾ ಸಂಕಲ್ಪ ನಡೆಯಿತು. ಸನಾತನ ಸಂಸ್ಥೆಯ ಸಂತರಾದ ಪೂಜ್ಯನೀಯ ರಮಾನಂದ ಗೌಡ, ಭಾ ಜ ಪ ಮುಖಂಡರಾದ ಉಮೇಶ್ ಶೆಟ್ಟಿ, ಎಮ್ ಎಲ್ ಶಿವಕುಮಾರ್ ಸೇರಿದಂತೆ 1000ಕ್ಕೂ ಅಧಿಕ ಮಂದಿ ರಾಷ್ಟ್ರನಿಷ್ಠರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೇ ಗೋರಕ್ಷಣೆಯನ್ನು ಮಾಡುವ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕರಾದ ಪುನೀತ್ ಕೆರೆಹಳ್ಳಿ ಇವರಿಗೆ ಸತ್ಕರಿಸಿ ಗೌರವಿಸಲಾಯಿತು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದರು.