ನಾಯಕನಹಟ್ಟಿ : ಜಿಲ್ಲೆಯ ಜನಶಕ್ತಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಟ್ರೇಡ್ ಯೂನಿಯನ್ (ರಿ)., ವತಿಯಿಂದ ನಾಗರಾಜ್ ಸಂಸ್ಥಾಪಕ ರಾಜ್ಯಾಧ್ಯಕ್ಷರ ಆದೇಶದಂತೆ ಹಾಗೂ ವರ್ಕಿಂಗ್ ರಾಜ್ಯ ಕಾರ್ಯಧ್ಯಕ್ಷರಾದ ಎನ್.ಎಸ್.ಸುವರ್ಣಮ್ಮ ಇವರ ನೇತೃತ್ವದಲ್ಲಿ ನೂತನವಾಗಿ ಆಯ್ಕೆಯಾಗಿರುವ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ್, ಎಸ್ ಸಿ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಜಯಣ್ಣ ಇವರ ಅಧ್ಯಕ್ಷತೆಯಲ್ಲಿ ತಾಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆಯನ್ನು ನಡೆಸಲಾಯಿತು.
ಈ ಸಭೆಯಲ್ಲಿ ಎಂ.ತಿಪ್ಪೇಸ್ವಾಮಿ ಕಣಿವೆ ಮಾರಮ್ಮ ಅಧ್ಯಕ್ಷರು ಚಿತ್ರದುರ್ಗ, ಹಿರೇಹಳ್ಳಿ ದುರ್ಗೇಶ್, ಸುನಿಲ್, ತಿಪ್ಪೇಸ್ವಾಮಿ, ಪಾಂಡುರಂಗಪ್ಪ, ಗ್ರಾಮ ಪಂಚಾಯತಿ ಸದಸ್ಯ ಪ್ರತಾಪ್, ಹನುಮಂತನಹಳ್ಳಿ ಚಂದ್ರಯ್ಯ, ಮಂಜುನಾಥ್, ಹಾಲೇಶ್, ಕೊಡಗನಹಳ್ಳಿ ಮಂಜುನಾಥ್, ಜನಾರ್ದನ, ನಿರಂಜನ ಮೂರ್ತಿ ಜಿ. ಹೊಸಳ್ಳಿ ತಿಪ್ಪೇಸ್ವಾಮಿ ಕೋಟಪ್ಪ ಮಹಿಳಾ ಘಟಕದ ಪದಾಧಿಕಾರಿಗಳಾದ ರತ್ತಮ್ಮ ಮತ್ತು ಚೌಡಮ್ಮ ದೊಣ್ಣ ಹಳ್ಳಿ ಇನ್ನು ಹೆಚ್ಚಿನ ಪದಾಧಿಕಾರಿಗಳು ಭಾಗವಹಿಸಿದ್ದರು.