ವೀರ ಮಾರುತಿ ಸೌಹಾರ್ದ ಸಹಕಾರ ಬ್ಯಾಂಕಿನ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಧ್ವಜವನ್ನು ನಿಗದಿತ ಸಮಯಕ್ಕೆ ಇಳಿಸದೆ ಕಾಟಾಚಾರಕ್ಕೆ ಆಚರಣೆ ಮಾಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾತ್ರಿ ಹತ್ತು ಗಂಟೆಯಾದರೂ ಸಿಬ್ಬಂದಿ ಗಮನಿಸಿಲ್ಲ, ಕೊನೆಗೆ ಸಾರ್ವಜನಿಕರು ಎಚ್ಚರಿಸಿದಾಗ ಜ್ಞಾನೋದಯವಾಗಿ ಓಡೋಡಿ ಬಂದು ನಿಯಮನುಸಾರ ಪಾಲನೆ ಮಾಡದೆ ಅವಸರದಲ್ಲಿ ರಾಷ್ಟ್ರಧ್ವಜವನ್ನು ತಿಳಿಸಲಾಗಿದೆ. ಇಷ್ಟೆಲ್ಲಾ ಗೊತ್ತಿದ್ದರೂ ಈ ಬ್ಯಾಂಕಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕರಿಗೆ ಇದರ ಬಗ್ಗೆ ಮನವರಿಕೆಯಾಗಿಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ.

ರಾಷ್ಟ್ರಧ್ವಜವನ್ನು ಮತ್ತು ಧ್ವಜ ಸಂಹಿತೆ ನಿಯಮವನ್ನು ಕಾಪಾಡಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಆಧ್ಯ ಕರ್ತವ್ಯವಾಗಿದೆ. ಹೀಗಿರುವಾಗ ಈ ಶಾಖೆಯ ವ್ಯವಸ್ಥಾಪಕರನ್ನು ಸಂಪರ್ಕಿಸಿದಾಗ ಹೌದು ತಪ್ಪಾಗಿದೆ ತಡವಾಗಿರಬಹುದು ಅದಕ್ಕೇ ಎನಾಯಿತು. ಅಗೌರವ ತೋರಿಲ್ಲ. ಬೈ ಮಿಸ್ಟೇಕ್ ಆಗಿದೆ. ನಮ್ಮ ಸಿಬ್ಬಂದಿ ಬೇರೆ ಕಡೆ ಹೋಗಿರುವುದರಿಂದ ತಡವಾಗಿ ಇಳಿಸಲಾಗಿದೆ ಎಂದು ಹೀಗೆ ತಮ್ಮನ್ನು ತಾವು ಸಮುಜಾಯಿಸಿಕೊಂಡಿದ್ದಾರೆ.
ರಾಷ್ಟ್ರಧ್ವಜದ ನಿಯಮ : ರಾಷ್ಟ್ರ ಧ್ವಜಕ್ಕೆ ಅದರದ್ದೇ ಆದ ಗೌರವ ಇರುವುದರಿಂದ ಸಂಜೆ ಹೊತ್ತಿನಲ್ಲಿ ಧ್ವಜ ಇಳಿಸುವಾಗ ಯಾವುದೇ ಚ್ಯುತಿ ಬಾರದಂತೆ ಜಾಗ್ರತೆ ವಹಿಸಿ, ಧ್ವಜವನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಹಾರಿಸಬೇಕು. ಧ್ವಜವನ್ನು ನಿಧಾನಕ್ಕೆ ಇಳಿಸಬೇಕು ಎಂಬ ರಾಷ್ಟ್ರಧ್ವಜದ ಮಾನದಂಡಗಳನ್ನು ಗಾಳಿಗೆ ತೂರಿದ್ದಾರೆ.

ಸಾರ್ವಜನಿಕರಿಂದ ತೀವ್ರ ಆಕ್ರೋಶ: ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಾರ್ವಜನಿಕರಿಂದ ಸಹಕಾರ ಸಂಘದ ನಿರ್ಲಕ್ಷಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇವರಿಗೆ ಕಾನೂನು ನಿಯಮಾವಳಿ ಅನ್ವಯ ಆಗಬೇಕು. ಸಹಕಾರಿ ಸಂಘದ ನೋಂದಣಿ ರದ್ದಾಗ ಬೇಕು ಹಾಗೂ ರಾಷ್ಟ್ರ ಧ್ವಜದ ಕಾನೂನು ಮಾನದಂಡಗಳ ಅಡಿಯಲ್ಲಿ ಇವರ ಮೇಲೆ ಮೊಕದ್ದಮೆ ದಾಖಲುಸಬೆಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.