ತಮ್ಮ ಕರ್ತವ್ಯದ ಬಗ್ಗೆ ಕಿಂಚಿತ್ತು ಯೋಚಿಸದೆ ಖಾಸಗಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಸಂಸ್ಕೃತ ಪಾಠಶಾಲೆಯಲ್ಲಿ ಸರಿಯಾದ ಸಮಯವನ್ನು ನೀಡುತ್ತಿಲ್ಲ. ಸರ್ಕಾರದ ವತಿಯಿಂದ ವೇತನವನ್ನು ಸರಿಯಾಗಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಆಗಿದ್ದಾಂಗೆ ರಜೆಗಳನ್ನು ತೆಗೆದುಕೊಂಡರೂ ವೇತನವನ್ನು ತಡೆಯಿಡಿದಿರುವುದಿಲ್ಲ. ಇದಕ್ಕೆ ಉದಾಹರಣೆಯಂತೆ ಹಲವಾರು ಭಾರಿ ಊರಿನ ಸಾರ್ವಜನಿಕರು ತಮ್ಮ ಗಮನಕ್ಕೆ ತಂದಿರುತ್ತಾರೆ. ಆಗಿದ್ದರೂ ವೀರೇಶ್ ಹಿರೇಮಠರವರ ಬಗ್ಗೆ ಯಾವುದೇ ಸರಿಯಾದ ಕ್ರಮ ಜಗುಗಿಸಿರುವುದಿಲ್ಲ. 3ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗೆ ದೈಹಿಕವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂಧಿಸಿದ ಕಾರಣ ವಿದ್ಯಾರ್ಥಿಯು ಮನನೊಂದು ಅನಾಹುತ ಉಂಟಾದರೆ ಅದಕ್ಕೆ ಯಾರು ಹೊಣೆ ಕೂಡಲೇ ಆ ಶಿಕ್ಷಕನ್ನು ಕೂಡಲೆ ಹುದ್ದೆಯಿಂದ ಅನಾಮತುಗೊಳಿಸಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಂಡರು.

ಇಂತಹ ಹಲವಾರು ಭಾರಿ ಈ ತರಹದ ಘಟನೆಗಳು ಸಂಭವಿಸಿರುತ್ತವೆ. ಆದ್ದರಿಂದ ತಾವುಗಳು ವೀರೇಶ್ ಹಿರೇಮಠ ಇವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ತಮ್ಮಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ವತಿಯಿಂದ ವಿನಂತಿಸಿಕೊಳ್ಳುತ್ತಿದ್ದೇವೆ.
ಈ ಸಂಧರ್ಭದಲ್ಲಿ ಕರವೇ ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಮುತ್ತಯ್ಯ, ಚಳ್ಳಕೆರೆ ನಗರ ಘಟಕದ ಮಹಿಳಾ ಅಧ್ಯಕ್ಷರು ಅನುಸೂಯಮ್ಮ, ಚಳ್ಳಕೆರೆ ನಗರ ಘಟಕದ ವಿದ್ಯಾರ್ಥಿ ಘಟಕದ ಅಧ್ಯಕ್ಷ ಪುನಿತ್, ಸೊಶಿಯಲ್ ಮೀಡಿಯಾ ಜಿಲ್ಲಾಧ್ಯಕ್ಷರು ಅರುಣ್‌ಕುಮಾರ್, ಚಳ್ಳಕೆರೆ ನಗರ ಯುವ ಘಟಕದ ಪ್ರಧಾನಕಾರ್ಯದರ್ಶಿ ಗಣೇಶ್, ಹೋಬಳಿ ಅಧ್ಯಕ್ಷ ಕೆ.ಜಿ. ಮಂಜಣ್ಣ, ಉಪಾಧ್ಯಕ್ಷ ಕೆ ಪಿ ನಾಗರಾಜ್, ನಗರ ಘಟಕ ಅದ್ಯಕ್ಷ ತಿಪ್ಪೇಸ್ವಾಮಿ, ನಗರ ಉಪಾಧ್ಯಕ್ಷ ಮಂಜುನಾಥ ಗ್ರಾಮ ಘಟಕ ಅಧ್ಯಕ್ಷರಾದ ಶಿವರಾಜ, ತಿಪ್ಪಮ್ಮ, ಚಿನ್ನಮಲ್ಲಯ್ಯ, ಇನ್ನಿತರರು ಇದ್ದರು.