LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಡಿಶ್ ವಜ್ರಣ್ಣ ಇನ್ನಿಲ್ಲ

ಸಿರುಗುಪ್ಪ : ಕೇಬಲ್ ಟಿ.ವಿ.ಯನ್ನು ಪ್ರಥಮದಿಂದಲೇ ಕಟ್ಟಿ ಬೆಳಸಿ, ಸುಮಾರು ಎರೆಡು ದಶಕಗಳಿಗೂ ಕಾಲ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರ ಕೇಂದ್ರದಲ್ಲಿ ಕೇಬಲ್ ಟಿ.ವಿ ನಡೆಸಿ ಉತ್ತರ ಕರ್ನಾಟಕ ಕೇಬಲ್ ಟಿ.ವಿ. ಆಪರೇಟರುಗಳ ಕ್ಷೇಮಾಭಿವೃದ್ಧಿ ಸಂಘ ಕಟ್ಟಿ ಉ.ಕ.ಕೇ.ಆ.ಸಂಘಧ ರಾಜ್ಯಾಧ್ಯಕ್ಷರಾಗಿ ಅಂದಿನ ದಿನಗಳಲ್ಲಿ ನ್ಯಾಯಯುತವಾಗಿ ಪೇ ಚಾನೆಲ್ ಗಳ ನಡೆಗೆ ಕಾರಣರಾದ ಜಿ.ಜಿ. ಕೃಪಾಕರ (ವಜ್ರಣ್ಣ) (ಅಂದಾಜು 80 ವರ್ಷ) ಗುರುವಾರ ತಡ ಸಂಜೆ ವೇಳೆ ಹೈದರಾಬಾದಿನಲ್ಲಿ ನಿಧನರಾಗಿದ್ದಾರೆ. ಶುಕ್ರವಾರ ಸಿರುಗುಪ್ಪ ‌ನಗರಕ್ಕೆ‌ ಅವರ ಪಾರ್ಥೀವ ಶರೀರ ತರಲಾಗಿದೆ. ನಗರದ ಸಿ.ಎಸ್.ಐ. ಚರ್ಚ್ (ಪ್ರಾರ್ಥನಾಲಯ) ವನ್ನು ಕಟ್ಟಿ ಬೆಳೆಸಲು ಅವರು ಗಣನೀಯ ಸೇವೆ ಸಲ್ಲಿಸಿದ್ದರು.



ಪತ್ನಿ, ಮೂರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳು ಮತ್ತು ಮಿತ್ರರನ್ನು ಶ್ರೀಯುತರು ಅಗಲಿದ್ದಾರೆ. ಸಾವಿನ ಸುದ್ದಿ ಹರಡುತ್ತಿದ್ದಂತೆ ಅನೇಕರು ದಿಗ್ಭ್ರಮೆ ವ್ಯಕ್ತ ಪಡಿಸಿ ಸಾಂತ್ವನ ತಿಳಿಸಿದ್ದಾರೆ. ಸದಾಶಿವನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇವರ ಅಂತಿಮ ಕ್ರಿಯೆಗಳು ಕ್ರಿಶ್ಚಿಯನ್ ಸಂಪ್ರದಾಯದಂತೆ ಶನಿವಾರ ಬೆಳಿಗ್ಗೆ ಸಿರುಗುಪ್ಪ ನಗರದಲ್ಲಿ ನಡೆಯಲಿದೆ. ಅನೇಕರು ಮೃತರ ಸಾವಿಗೆ ಅತೀವ ಕಂಬನಿ ಮಿಡಿದಿದ್ದಾರೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ