
ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ದಾಖಲಾದ ರೋಗಿಗಳ ಆರೋಗ್ಯ ವಿಚಾರಿಸಿ, ಎಲ್ಲ ಚಿಕಿತ್ಸಾ ಸೌಲಭ್ಯಗಳು ಉಚಿತವಾಗಿ ಲಭ್ಯವಿದ್ದು, ಈಗಾಗಲೆ ಜಿಲ್ಲಾ ಆಸ್ಪ ತ್ರೆ, ತಾಲೂಕ ಆಸ್ಪತ್ರೆ ಸೇರಿದಂತೆ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷದಿಗಳ ದಾಸ್ತಾನು ಇಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ತಿಳಿಸಿದರು.
ನಿರಂತರ ಮಳೆಯ ಹಿನ್ನಲೆಯಲ್ಲಿ ಮನೆಯ ಸುತ್ತ ಮುತ್ತ ನೀರು ನಿಲ್ಲುವ ಸಾಧ್ಯತೆಗಳು ಇದ್ದು ಸ್ವಚ್ಛತೆ ಕಾಪಾಡಿ ಕೊಳ್ಳಬೇಕು. ವೈರಸ್‌ಗಳು ಸಾಮಾನ್ಯ ಅಥವಾ ಶೀತ ತಾಪಮಾನದಲ್ಲಿಯೂ ಸಹ ಗುಣಿಸುವುದರಿಂದ, ಪೌಷ್ಟಿಕಯುಕ್ತ ಬಿಸಿಯಾದ ಆಹಾರವನ್ನು ಸೇವಿಸುವ ಮೂಲಕ ವೈರಲ್ ಜ್ವರ ಬರುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ವೈರಲ್ ಕಾಯಿಲೆಗಳನ್ನು ಎದುರಿಸಲು ಆರೋಗ್ಯಕರ ಜೀವಸತ್ವಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದರೊಂದಿಗೆ ಕುದಿಸಿ ಆರಿಸಿ ಸೊಸಿದ ನೀರು ತಪ್ಪದೆ ಸೇವಿಸಲು ವಿನಂತಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ ಎನ್ ಬಸರೆಡ್ಡಿ, ಶುಶ್ರೂಷಣಾ ಅಧೀಕ್ಷಕರು ವಿಮಲಾ, ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.