LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡೆರಿವೇಟಿವ್ ಮಾರುಕಟ್ಟೆ – ಭವಿಷ್ಯದ ಆರ್ಥಿಕ ಸಾಧನೆಯ ದಾರಿ

ವಿಶೇಷ ಉಪನ್ಯಾಸ ಸರಣಿಯಲ್ಲಿ ಡಾ. ಶಿವಕುಮಾರ್ ಬಿ ಅಭಿಪ್ರಾಯ

 ದಾವಣಗೆರೆ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆಯ ಪಿಜಿ ಕಾಮರ್ಸ್ ವಿಭಾಗ ಮತ್ತು IQAC ಘಟಕದ ಸಹಯೋಗದಲ್ಲಿ "ಭಾರತದಲ್ಲಿ ಡೆರವೆಟಿವ್ ಮಾರುಕಟ್ಟೆ" ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಡಾ. ಶಿವಕುಮಾರ್ ಬಿ, ಅಸೋಸಿಯೇಟ್ ಪ್ರಾಧ್ಯಾಪಕ, ಸರ್ಕಾರಿ ಕಲಾ ಕಾಲೇಜು ಚಿತ್ರದುರ್ಗ ಇವರು ತಮ್ಮ  ಗಂಭೀರ ಮತ್ತು ಆಳವಾದ ಜ್ಞಾನದಿಂದ ಡೆರಿವೇಟಿವ್ ಮಾರುಕಟ್ಟೆಯ ತತ್ವಗಳು, ಶ್ರೇಣಿಗಳು ಮತ್ತು ಭಾರತದಲ್ಲಿ ಅದರ ಪ್ರಸ್ತುತ ಸ್ಥಿತಿಗತಿಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗಿಸುವ ರೀತಿಯಲ್ಲಿ ವಿವರಿಸಿದರು. ಅವರು ಮಾತನಾಡುತ್ತಾ, "ಡೆರಿವೇಟಿವ್ ಮಾರುಕಟ್ಟೆ ಭವಿಷ್ಯದ ಆರ್ಥಿಕ ನಿಯಂತ್ರಣಕ್ಕೆ ದಾರಿ ಮಾಡಿಕೊಡುವ ಶಕ್ತಿಯಾಗಿದೆ. ಯುವ ಹೂಡಿಕೆದಾರರು ಇದರ ಪರಿಪೂರ್ಣ ಅರಿವನ್ನು ಹೊಂದಿದರೆ, ಮುನ್ನಡೆ ಸಾಧ್ಯ" ಎಂದು  ಹೇಳಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಬಿ.ಸಿ. ತಹಶೀಲ್ದಾರ್ ವಹಿಸಿದ್ದರು. IQAC ಸಂಯೋಜಕ ಡಾ. ಗುರುರಾಜ್ ಜೆ.ಪಿ, ಉಪಸ್ಥಿತರಿದ್ದರು.

ಡಾ. ಆರ್ ಸಿ ನಾಗರಾಜ ರವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು

ಪ್ರೊ. ಸುನಿತಾ ಕೆ.ಬಿ, ಪ್ರೊ. ರಾಜ್ ಮೋಹನ್ ಎನ್.ಆರ್, ಪ್ರೊ. ಶಂಬುಲಿಂಗಪ್ಪ ಎಫ್.ಎನ್, ಮತ್ತು ಪ್ರೊ. ಯಶೋಧಾ ಆರ್ ಉಪಸ್ಥಿತರಿದ್ದರು.

 ಪ್ರೊ. ವೆಂಕಟೇಶ್ ಬಾಬು ಎಸ್ ಧನ್ಯವಾದ ಹೇಳಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST