LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಸಿ ಕ್ಯಾಮೆರಾ ಅಳವಡಿಸುವಂತೆ ಒತ್ತಾಯ.

ಅರಕೇರಾ : ಪಟ್ಟಣದಲ್ಲಿ ‌ಕಳ್ಳತನ‌ ಪ್ರಕರಣ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಂತೆ ಕನ್ನಡ ಸೇನೆ ಕರ್ನಾಟಕ‌ ತಾಲ್ಲೂಕು ಅಧ್ಯಕ್ಷ ಮೈಬೂಬ್ ಬಡಿಗೇರ ಮನವಿ ಸಲ್ಲಿಸಿದರು.

ದೇವದುರ್ಗ ಪೊಲೀಸ್ ಠಾಣೆಯ ಪಿಐ ಮಂಜುನಾಥ ಅವರಿಗೆ ಗುರುವಾರ ಮನವಿ ಸಲ್ಲಿಸಿ ‌ಒತ್ತಾಯಿಸಿದರು. ಅರಕೇರಾ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ‌ಸಿಸಿ ಕ್ಯಾಮೆರಾ ಅಳವಡಿಸಬೇಕು. ರಾತ್ರಿ ವೇಳೆ ‌ ಪೊಲೀಸ್ ಸಿಬ್ಬಂದಿಗಳು ಗಸ್ತು ತಿರುಗುವಿಕೆ ಮಾಡಿದರೆ ಪ್ರಕರಣಗಳನ್ನು ತಡೆಗಟ್ಟಬಹುದು. ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಜನಸಾಮಾನ್ಯರ ಹಿತ ಕಾಪಾಡಬೇಕು. ಎಂದು ಮನವಿ ಪತ್ರ ಸಲ್ಲಿಸಿದರು.



ಈ ವೇಳೆ  ಪ್ರಧಾನ ಕಾರ್ಯದರ್ಶಿ ಜಿ.ಹನ್ಮಂತ್ರಾಯ ನಾಯಕ, ಕಾರ್ಯಾಧ್ಯಕ್ಷ ಮಾರುತಿ ನಾಯಕ, ಯುವ ಘಟಕದ ಅಧ್ಯಕ್ಷ ಬಸವ ಪೂಜಾರಿ, ಉಪಾಧ್ಯಕ್ಷ ಹನುಂತ್ರಾಯ ನಾಯಕ ದೊರೆ, ನಗರ ಘಟಕದ ಅಧ್ಯಕ್ಷ ಶಿವಗೇನಿ ನಾಯಕ‌ ಗುಜ್ಜುಪ್, ಸಂಘಟನಾ ಕಾರ್ಯದರ್ಶಿ ರವಿ ಚವ್ಹಾಣ್ ಸೇರಿದಂತೆ ಪದಾರ್ಥಗಳು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST