ನಾಯಕನಹಟ್ಟಿ : ಮುಂಬರುವ ರಾಜ್ಯ ಸಚಿವ ಸಂಪುಟದಲ್ಲಿ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಇವರ ಇಬ್ಬರಲ್ಲಿ ಒಬ್ಬರಿಗೆ ಮಂತ್ರಿ ಸ್ಥಾನ ನೀಡುವಂತೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಚಿತ್ರದುರ್ಗ ಜಿಲ್ಲಾ ಸಂಚಾಲಕ ಟಿ.ಬಸವರಾಜ ನಾಯಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಇರುವ 6 ವಿಧಾನಸಭಾ ಕ್ಷೇತ್ರಗಳಲ್ಲಿ 5 ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲುವಿಗೆ ವಾಲ್ಮೀಕಿ ನಾಯಕರ ಕೊಡುಗೆ ಅಪಾರವಾದದ್ದು ಎಂದರು. ಕಾಂಗ್ರೆಸ್ ಪಕ್ಷ 1969ರಲ್ಲಿ ಇಬ್ಬಾಗ ಆಗುವುದಕ್ಕಿಂತ ಮುಂಚೆ ಅವಿಭಾಜ್ಯ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ ಅವರ ಮೊದಲನೇ ಅವಧಿಯಲ್ಲಿ ಚಿತ್ರದುರ್ಗ ಕ್ಷೇತ್ರದ ಶಾಸಕರಾಗಿದ್ದ ಎ.ಭೀಮಪ್ಪ ನಾಯಕ, ಮತ್ತು 2ನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಓ.ಚಿ.ಬೋರಯ್ಯ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಚಿತ್ರದುರ್ಗ ಜಿಲ್ಲೆಗೆ ನಾಯಕ ಜನಾಂಗಕ್ಕೆ ಪ್ರಾತಿನಿಧ್ಯ ನೀಡಿದ್ದರು. ಇದಾದ ನಂತರ ಅಂದಿನಿAದ 1970ರಿಂದ 2026ರ ವರೆಗೆ 55 ವರ್ಷಗಳು ಕಳೆದರೂ ಕಾಂಗ್ರೆಸ್ ಪಕ್ಷದ ಆಳ್ವಿಕೆಯಲ್ಲಿ ನಾಯಕ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎಂದು ಆರೋಪ ಮಾಡಿದರು. ಮದ್ಯ ಕರ್ನಾಟಕ್ಕೆ ಸೇರಿದ ಚಿತ್ರದುರ್ಗ ಜಿಲ್ಲೆಯ 2012ರ ಜನಗಣತಿ ಪ್ರಕಾರ ನಾಯಕ ಜನಸಂಖ್ಯೆ ರಾಯಚೂರಿನಲ್ಲಿ ಶೇಕಡಾ 20%, ಬಳ್ಳಾರಿಯಲ್ಲಿ ಶೇಕಡಾ 18.5% ಹೊರತು ಪಡಿಸಿದರೆ ಚಿತ್ತದುರ್ಗ ಜಿಲ್ಲೆಗೆ ಶೇಕಡಾ 18%ರಷ್ಟು ಜನಸಂಖ್ಯೆಯನ್ನು ಹೊಂದಿದ್ದೇವೆ. ಮೂರನೇ ದೊಡ್ಡಸ್ಥಾನದಲ್ಲಿದ್ದೇವೆ ಎಂದರು.