ಪಟ್ಟಣದ ಕೆಆರ್‌ಎಸ್ ಪಾರ್ಟಿಯ ಚಳ್ಳಕೆರೆ ಇವರ ಸಹಯೋಗದೊಂದಿಗೆ ಶುಕ್ರವಾರ ನಾಡಕಛೇರಿ ಅವವ್ಯಸ್ಥೆಯ ಬಗ್ಗೆ ಹಾಗೂ ಅಧಿಕಾರದ ನಿರ್ಲಕ್ಷö್ಯದ ಬಗ್ಗೆ ಪ್ರತಿಭಟನೆ ಮಾಡಲಾಯಿತು. ನಾಡಕಛೇರಿ ಕೊಠಡಿ ಕಾಲಿ ಇದ್ದರು ಸಮೇತ ಖಾಸಗಿ ಕೊಠಡಿಯನ್ನು ಸ್ವಂತ ಹಣದಿಂದ ಬಾಡಿಗೆ ಪಡೆದು ಖಾಸಗಿ ಕೊಠಡಿಯಲ್ಲಿ ಸರ್ಕಾರಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಉಪ ತಹಶೀಲ್ದಾರ್ ಶಕುಂತಲ ಮೇಡಂ ರವರನ್ನು ವಿಚಾರಿಸಿದಾಗ ಖಾಸಗಿ ಕೊಠಡಿ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ ಎಂದು ಹೇಳುತ್ತಿದ್ದಾರೆ. ನಾಯಕನಹಟ್ಟಿ ಸುತ್ತ-ಮುತ್ತಲಿನ ರೈತರಿಗೆ, ನಾಗರಿಕರಿಗೆ, ಸಾರ್ವಜನಿಕರಿಗೆ ಹಾಗೂ ವಿಶೇಷ ಚೇತನರಿಗೆ ತುಂಬಾ ಅನಾನುಕೂಲವಾಗುತ್ತಿದೆ. ನಾಗರಿಕರು, ಸಾರ್ವಜನಿಕರು ನಾಡಕಛೇರಿಗೆ ಆಗಮಿಸಿ ಕಂದಾಯ ನಿರೀಕ್ಷಕರನ್ನು ಕೇಳಿದರೆ ಇವರು ಖಾಸಗಿ ಕೊಠಡಿಯಲ್ಲಿದ್ದಾರೆ, ಅಲ್ಲಿಗೆ ಹೋಗಿ ತಮ್ಮ ಕೆಲಸವನ್ನು ಮಾಡಿಸಿಕೊಳ್ಳಿ ಎಂಬ ಉತ್ತರ ಕೇಳಿ ಬರುತ್ತದೆ. ಇದರಿಂದಾಗಿ ರೈತರಿಗೆ, ನಾಗರೀಕರ, ಸಾರ್ವಜನಿಕರಿಗೆ ತುಂಬಾ ಅಲೆದಾಡುವ ಪರಿಸ್ಥಿತಿ ಬಂದಿದೆ. ಸಾರ್ವಜನಿಕರ ಕುಂದು ಕೊರತೆಗಳನ್ನು ಹಾಲಿಸಬೇಕು ಎಂದು ಆಗ್ರಹಿಸಿದರು. ನಾಯಕನಹಟ್ಟಿ ಹೋಬಳಿ ರೈತರ ಸಂಬAಧಪಟ್ಟAತ ದಾಖಲೆಗಳನ್ನು ಒಂದು ಖಾಸಗಿ ಕೊಠಡಿಯಲ್ಲಿಟ್ಟರೆ ಆ ಖಾಸಗಿ ಕೊಠಡಿಯಲ್ಲಿ ಏನಾದರೂ ಅನಾಹುತ ಆದರೆ ದಾಖಲೆಗಳ ಜವಾಬ್ದಾರಿಯನ್ನು ಯಾವ ಅಧಿಕಾರಿ ಹೊರುತ್ತಾರೆ ಎಂದು ತಿಳಿಸಬೇಕಿದೆ. ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಅನೇಕ ಬಾರಿ ಉಪತಹಶಿಲ್ದಾರ್ ರವರಿಗೂ ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ ಹಾಗೂ ಉಪ ತಹಶೀಲ್ದಾರ್ ರವರನ್ನು ವಿಚಾರಿಸಿದರೆ ಮೇಲಾಧಿಕಾರಿಗಳಿಗೆ ತಮ್ಮ ಮನವಿಯನ್ನು ಕಳಿಸಿದ್ದೇನೆ ಎಂದು ಹೇಳುತ್ತಾರೆ. ಇದುವರೆಗೂ ಯಾವ ಬೆಳವಣಿಗೆ ಆಗುವುದನ್ನು ನೋಡಿದರೆ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ಸ್ವಲ್ಪ ಅನುಮಾನವೇ ಕಾಡುವುದು ಹೆಚ್ಚಾಗುತ್ತದೆ. ಇಲ್ಲಿನ ಅಧಿಕಾರಿ ರಾಜಸ್ವ ನಿರೀಕ್ಷಕರು ಚೇತನ್ ಕುಮಾರ್ ರವರನ್ನು ಕೂಡಲೇ ನಾಡಕಚೇರಿಯಲ್ಲಿ ಕೆಲಸ ನಿರ್ವಹಿಸುವಂತಾಗಬೇಕು ಇಲ್ಲದೆ ಹೋದರೆ ಅವರಿಗೆ ಇಷ್ಟ ಬಂದ ಕಡೆ ವರ್ಗಾವಣೆ ಮಾಡಿಕೊಂಡು ಹೋಗಲಿ ಆದರೆ ಇಲ್ಲಿನ ನಾಗರಿಕರಿಗೆ ಆಗಲಿ ಸಾರ್ವಜನಿಕರಿಗಾಗಲಿ ವಿದ್ಯಾರ್ಥಿಗಳಿಗೆ ಆಗಲಿ ತೊಂದರೆ ಆಗುವುದನ್ನು ತಪ್ಪಿಸಬೇಕೆಂದು ಚಳ್ಳಕೆರೆ ತಹಸಿಲ್ದಾರ್ ರೆಹನ್ ಪಾಷಾ ಸರ್ ಹಾಗೂ ಜಿಲ್ಲಾಧಿಕಾರಿ ಗಳು ವೆಂಕಟೇಶ್ ಸರ್ ರವರು ಗಮನ ಹರಿಸಿ ಇಲ್ಲಿ ಆಗುವಂತ ತೊಂದರೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿಕೊಂಡರು.

ಕೆ.ಆರ್.ಎಸ್. ಪಾರ್ಟಿ ಮಹೇಶ್ ಸಿ ನಗರಂಗೆರೆ ರಾಜ್ಯ ಕಾರ್ಯಕಾರಿ ಸದಸ್ಯರು ಇವರು ಮಾತನಾಡಿ ಸರ್ಕಾರದ ಕೋಠಡಿ ಇದ್ದರೂ ಕೂಡ ಖಾಸಗಿ ಕೊಠಡಿಯಲ್ಲಿ ಕೆಲಸ ನಿರ್ವಹಿಸಲು ಮುಖ್ಯ ಕಾರಣವೇನು ಹಾಗೂ ಖಾಸಗಿ ಕೊಠಡಿಯಲ್ಲಿ ಕಾರ್ಯನಿರ್ವಹಿಸಬಹುದು ಎಂದು ಸರ್ಕಾರದ ಆದೇಶವಿದ್ದರೆ ಆ ಪ್ರತಿಯನ್ನು ನಮಗೆ ಕೊಡಿ ಹಾಗೂ ಇಲ್ಲಿನ ಸುತ್ತಮುತ್ತಿಲ್ಲಿನ ಹಳ್ಳಿಯವರು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ನಾಡಕಚೇರಿಯ ಕೆಲಸಕ್ಕಾಗಿ ಬಂದಿರುತ್ತಾರೆ. ಆದರೆ ಇಲ್ಲಿ ಅಧಿಕಾರಿಗಳು ಸಿಗುವುದೇ ಇಲ್ಲ ಅವರು ಖಾಸಗಿ ಕೊಠಡಿಯನ್ನು ಹುಡುಕಿಕೊಂಡು ಹೋಗುವುದರಲ್ಲಿ ದಿನ ಕಳೆದು ಹೋಗುತ್ತದೆ. ಇವರು ತತ್ತಕ್ಷಣವೇ ಕಚೇರಿಯಲ್ಲಿ ಕೆಲಸ ನಿರ್ವಹಿಸಬೇಕು ಹಾಗೂ ಕೆಲಸವನ್ನು ಸುದೀರ್ಘವಾಗಿ ಸರಾಗವಾಗಿ ರೈತರಿಗೆ ನಾಗರಿಕರಿಗೆ ಕೆಲಸ ಸುಗಮಗೊಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾಂತೇಶ್ ಓ. ಉಪ್ಪಾರಟ್ಟಿ ಬಾಲರಾಜ್ ಪ್ರಧಾನ ಕಾರ್ಯದರ್ಶಿ ಚಳ್ಳಕೆರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಟಿ ಹರೀಶ್, ತಿಪ್ಪೇಸ್ವಾಮಿ, ಬೋರಯ್ಯ. ಮಂಜುನಾಥ್, ತಿಪ್ಪಿರಮ್ಮ. ಓಬಣ್ಣ ತಿಪ್ಪೇಸ್ವಾಮಿ ಇನ್ನೂ ಅನೇಕ ನಾಯಕನಹಟ್ಟಿ ಹೋಬಳಿಯ ಸುತ್ತಮುತ್ತ ಹಳ್ಳಿಯ ಗ್ರಾಮಸ್ಥರು ನಾಗರಿಕರು ಭಾಗವಹಿಸಿದ್ದರು.