LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎನ್ ವೈ ಗೋಪಾಲಕೃಷ್ಣರಿಗೆ ಸಚಿವ ಸ್ಥಾನ ನೀಡಲು ಒತ್ತಾಯ

ನಾಯಕನಹಟ್ಟಿ : ರಾಜ್ಯದ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ರವರು ಮುಂಚೂಣಿಯ ಹೆಸರು ರಾಜ್ಯದಲ್ಲಿಯೇ ಇದೆ, 224 ಕ್ಷೇತ್ರಗಳ ಶಾಸಕರುಗಳಲ್ಲಿ ತಾಳ್ಮೆ ಇರುವ ಏಕೈಕ ವ್ಯಕ್ತಿ, ಸತತ 7 ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ತಮ್ಮದೇ ಆದ ವರ್ಚ್ಚಸ್ಸು ಹೊಂದಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣರವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಗಜ್ಜುಗಾನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಓ.ಕಾಟಯ್ಯ ಒತ್ತಾಯಿಸಿದರು.

 

ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ರಾಜಕೀಯದಲ್ಲಿ ಮೊಳಕಾಲ್ಮೂರು ಶಾಸಕ ಎನ್‌ವೈ.ಗೋಪಾಲಕೃಷ್ಣ ರವರು ಮೊಳಕಾಲ್ಮೂರು ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಕೊಂಡ್ಯೂತ್ತಾರೆ. ಎಲ್ಲಾ ಸಮುದಾಯದವರು ಒಪ್ಪಿರುವಂತಹ ವ್ಯಕ್ತಿಕೂಡ ಆಗಿದ್ದಾರೆ. ಕ್ಷೇತ್ರದ ಜಾತಿಬೇದ ಅನ್ನದೆ ಹಲವು ಬಾರಿ ದಲಿತರ ಮನೆಯಲ್ಲಿ ಊಟ ಸವಿದಿದ್ದಾರೆ. ಅವರ ಕುಟುಂಬದಲ್ಲಾಗಲಿ ರಕ್ತದಲ್ಲಾಗಲಿ ಯಾವುದೇ ಜಾತಿಬೇದ ಇಲ್ಲ. ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಮುಂಬರುವ ರಾಜ್ಯ ಸಚಿವ ಸಂಪುಟ ರಚನೆ ವೇಳೆ 2ನೇ ಅವಧಿಯಲ್ಲಿ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಭರವಸೆ ನೀಡಿದರು. ಸಚಿವ ಸ್ಥಾನವನ್ನು ನಿಭಾಯಿಸುವ ಶಕ್ತಿ ಅವರಲ್ಲಿ ಇದೆ. ಅವರು ಅತ್ಯಂತ ಸರಳ ಸಜ್ಜನಿಕೆ ವ್ಯಕ್ತಿ ಕೂಡ ಆಗಿದ್ದಾರೆ.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಡಿ.ಪಿ.ಸೂರಮ್ಮ, ವಿ.ಟಿ.ಶಂಕರಮೂರ್ತಿ, ಎನ್.ದೇವರಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಕಾಟಯ್ಯ, ಜಾಕೀರ್ ಹುಸೇನ್ ಕೆ.ಡಿ.ಪಿ ಸದಸ್ಯ ಚಳ್ಳಕೆರೆ, ಬೋರನಾಯಕ ಬಕರ್‌ಹುಕಂ ಸದಸ್ಯ, ಮಲ್ಲಯ್ಯ.ಎಂ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮಲ್ಲೂರಹಳ್ಳಿ, ಗುಂತಕೋಲಮನಹಳ್ಳಿ ವಕೀಲ ಮಲ್ಲೇಶ್, ಬಲ್ಲನಾಯಕನಹಟ್ಟಿ ಮಲ್ಲೇಶ್.ಡಿ.ಎನ್, ವಸೀಂ ಅಹಮದ್ ಮಾಡ್ರನ್ ಮೆಡಿಕಲ್ ಸ್ಟೋರ್ ಹಾಗೂ ಇನ್ನೂ ಇತರರು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST