
ಈ ವರ್ಷ ರೈತರು ಬಹಳಷ್ಟು ಜನ ಮೆಕ್ಕೆಜೋಳ ನೆತ್ತಿರುತ್ತಾರೆ. ಅದರಂತೆ ಅಧಿಕಾರಿಗಳು ಗಮನಹರಿಸಿ ಒಳ್ಳೆ ಬೀಜವನ್ನು ನೀಡುವಂತೆ ಸೂಚನೆ ನೀಡಬೇಕು. ಅಲ್ಲದೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ರೈತರಿಗೆ ಅನ್ಯಾಯವಾಗದಂತೆ ಗಮನಹರಿಸಬೇಕು. ಕೃಷಿ ಇಲಾಖೆಯವರು ಹೊಸ ಬೀಜಗಳನ್ನು ಕೊಡಬೇಕು, ಹಳೆ ಬೀಜಗಳನ್ನು ವಿತರಣೆ ಮಾಡುವುದರಿಂದ ಇಳುವರಿ ಕಡಿಮೆಯಾಗಿರುತ್ತದೆ. ಇದರಿಂದ ಕೆಲ ರೈತರು ತೊಗರಿ ಬಿತ್ತನೆಯತ್ತ ಮುಖ ಮಾಡಿದ್ದಾರೆ. ಈ ನಿಟ್ಟಿನಲ್ಲಿ ರೈತರಿಗೆ ಗೊಬ್ಬರ ಕಡಿಮೆ ಆಗದಂತೆ ವ್ಯವಸ್ಥೆ ಮಾಡಿಕೊಡಬೇಕು. ಡಿ.ಎ.ಪಿ. ಗೊಬ್ಬರದಲ್ಲಿ ಕಳಪೆ ಕಂಡು ಬಂದಿದ್ದು ಅಧಿಕಾರಿಗಳು ಗಮನಹರಿಸಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕಳಪೆ ಗೊಬ್ಬರ ಕಂಡು ಬಂದಲ್ಲಿ ಸೀಜ್ ಮಾಡಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ನೀವು ಕ್ರಮ ತೆಗೆದುಕೊಳ್ಳಹೋದ ಪಕ್ಷದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಉಗ್ರ ಹೋರಾಟವನ್ನು ಮಾಡಲಾಗುತ್ತದೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬೈಲೂರು ವಿರೇಶ್, ಬಿ .ಶ್ರೀನಿವಾಸ, ಮಾರೆಣ್ಣ, ಕುಮಾರ.ಕೆ, ಶ್ರೀಧರಗಡ್ಡೆ ಕೃಷ್ಣಮೂರ್ತಿ (ಅಕ್ಕಿ ಕೃಷ್ಣ) ಉಪಸ್ಥಿತರಿದ್ದರು.