ನಾಯಕನಹಟ್ಟಿ : ನಾಯಕನಹಟ್ಟಿಯಿಂದ ಮಲ್ಲೂರಹಳ್ಳಿವರೆಗೆ ನಡೆಯಬೇಕಾಗಿದ್ದ ರಸ್ತೆ ಅಗಲೀಕರಣ ಕಾಮಗಾರಿಗಳು ಕಳೆದ ಸುಮಾರು 1.5 ವರ್ಷಗಳಿಂದ ಸ್ಥಗಿತಗೊಂಡಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಮಗಾರಿ ಅರ್ಧದಲ್ಲೇ ನಿಂತಿರುವುದರಿಂದ ರಸ್ತೆ ಕಿರಿದಾಗಿ, ಅಸಮತಟ್ಟಾಗಿ ಹಾಗೂ ಅಪಾಯಕಾರಿಯಾಗಿ ಪರಿಣಮಿಸಿದೆ.
ಈ ಮಾರ್ಗದಲ್ಲಿ ಪ್ರತಿದಿನ ವಿದ್ಯಾರ್ಥಿಗಳು, ರೈತರು, ವ್ಯಾಪಾರಸ್ಥರು ಹಾಗೂ ಸಾಮಾನ್ಯ ನಾಗರಿಕರು ಸಂಚರಿಸುತ್ತಿದ್ದಾರೆ. ರಸ್ತೆ ದುಸ್ಥಿತಿಯಿಂದಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಹಲವು ರಸ್ತೆ ಅಪಘಾತಗಳು ಸಂಭವಿಸಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ಗುಂಡಿಗಳು ಹಾಗೂ ನೀರು ನಿಲ್ಲುವ ಪರಿಸ್ಥಿತಿಯಿಂದ ವಾಹನ ಸವಾರರು ಜೀವಭೀತಿಯೊಂದಿಗೆ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸುಮಾರು 1.5 ವರ್ಷದಿಂದ ಕಾಮಗಾರಿ ಮುಂದುವರಿಯದಿರುವುದು ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಸಾರ್ವಜನಿಕರ ಜೀವ ಮತ್ತು ಸುರಕ್ಷತೆ ವಿಷಯದಲ್ಲಿ ಇಂತಹ ವಿಳಂಬವನ್ನು ಯಾವುದೇ ರೀತಿಯಲ್ಲೂ ಸಹಿಸಲಾಗುವುದಿಲ್ಲ.
ಆದ್ದರಿಂದ ಸಂಬಂಧಿತ ಇಲಾಖೆ ಮತ್ತು ಸರ್ಕಾರ ತಕ್ಷಣವೇ ಸ್ಪಷ್ಟನೆ ನೀಡಿ, ನಾಯಕನಹಟ್ಟಿಯಿಂದ ಮಲ್ಲೂರಹಳ್ಳಿವರೆಗೆ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪುನರಾರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ನಾವು ಬಲವಾಗಿ ಆಗ್ರಹಿಸುತ್ತೇವೆ. ಅಪಘಾತಗಳನ್ನು ತಡೆಗಟ್ಟಲು ತಾತ್ಕಾಲಿಕ ಸುರಕ್ಷತಾ ಕ್ರಮಗಳನ್ನು ಕೂಡ ತಕ್ಷಣ ಜಾರಿಗೆ ತರಬೇಕು. ಇಲ್ಲವಾದಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿ ಹೋರಾಟದ ರೂಪುರೇಷೆ ಪ್ರಕಟಿಸಲಾಗುವುದು.
ನಾಯಕನಹಟ್ಟಿ ಪಟ್ಟಣದ ಮಲ್ಲೂರಹಳ್ಳಿ ರಸ್ತೆಯ ಅಂಬೇಡ್ಕರ್ ಸರ್ಕಲ್ ನಿಂದ ಮಲ್ಲೂರಹಳ್ಳಿಯ ವರೆಗೆ ಅದಗೆಟ್ಟ ರಸ್ತೆಯ ಹಾಗೂ ಲೋಕೋಪಯೋಗಿ ಇಲಾಖೆಯ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಡಾ. ವಾಸುದೇವ ಮೇಟಿ) ಬಣದ ಹೋಬಳಿ ಅಧ್ಯಕ್ಷ ಡಾ.ನಾಗರಾಜ್ ಮೀಸೆ ಹಾಗೂ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನಾಯಕನಹಟ್ಟಿ ಯುವ ಘಟಕದ ರಾಜ್ಯಾಧ್ಯಕ್ಷ ಪ್ರಸನ್ ಕುಮಾರ್ ಮಲ್ಲೂರಹಳ್ಳಿ. ಹಾಗೂ ಪದಾಧಿಕಾರಿಗಳು.ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ. ವಾಸುದೇವ ಮೇಟಿ ಬಣದ ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ ಮಾತನಾಡಿ ರಸ್ತೆಯ ಸ್ಥಿತಿಗತಿ ನೋಡಿ ಇಲಾಖೆಯ ವಿರುದ್ಧ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಹರಿಹಾಯಿದರು ಮಲ್ಲೂರ ಹಳ್ಳಿಯ ರಸ್ತೆಯು ಸುಮಾರು ಒಂದು ವರ್ಷದ ಹಿಂದೆಯೇ ಸರ್ಕಾರದ ಅನುದಾನ ಬಳಸಿ ಕಳಪೆ ಕಾಮಗಾರಿಯನ್ನು ಮಾಡಿದ್ದರು ರಸ್ತೆಯ ಎಡ ಮತ್ತು ಬಲ ಬರಿ ದಪ್ಪ ಜಲ್ಲಿಗಳನ್ನು ಹಾಕಿ ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಕೆಲಸ ಕಾಮಗಾರಿ ನಡೆದಿರುವುದಿಲ್ಲ ಮುಂಬರುವ ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯೂ ದಿನಾಂಕ 6.3.2026 ಮಹೋತ್ಸವ ಇರುವುದರಿಂದ ರಾಜ್ಯ ರಾಜ್ಯಗಳಿಂದ ಭಕ್ತ ಜನಸಾಗರ ಹರಿದು ಬರುವುದರಿಂದ ರಸ್ತೆಯ ಎರಡು ಕಡೆ ಕಿರಿದು ಹಾಗೂ ತಗ್ಗು ಗುಂಡಿಗಳಿಂದ ತುಂಬಿರುವುದರಿಂದ ಬರುವಂತ ಭಕ್ತಾದಿಗಳಿಗೆ ಅಪಘಾತಗಳ ಬಗ್ಗೆ ಆತಂಕ ಎದುರಾಗಿದೆ.
ಈ ಕಳಪೆ ಕಾಮಗಾರಿಯ ರೂವಾರಿಗಳು ಆದಂತಹ ಲೋಕೋಪಯೋಗಿ ಇಲಾಖೆಯ ಏ ಇ ಇ ಯವರು ನಾಯಕನಹಟ್ಟಿ ಪಟ್ಟಣ ಪಂಚಾಯತಿಯ ಅಧಿಕಾರಿಗಳು ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ಸಾಹೇಬರು ಈ ರಸ್ತೆಯ ಕಡೆ ಗಮನಹರಿಸಿ ಅನೇಕ ಸಾವು ನೋವುಗಳಿಂದ ನೊಂದು ಬೆಂದಂತಹ ಸಾರ್ವಜನಿಕರು ಹಾಗೂ ನಾಗರಿಕರ ಅಳಲನ್ನು ತತ್ತಕ್ಷಣವೇ ಮನಗೊಂಡು ಈ ರಸ್ತೆಯ ಅಭಿವೃದ್ಧಿಯನ್ನು ಅತಿ ಶೀಘ್ರವೇ ಕೈಗೊತ್ತಿಕೊಳ್ಳಬೇಕು ಇಲ್ಲದೆ ಹೋದರೆ ರಸ್ತೆಯನ್ನು ಬಂದ್ ಮಾಡಿ ರಸ್ತೆಯ ಪ್ರತಿಭಟನೆಯನ್ನು ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು ಸಂಜೀವಿನೀ ಜೀವ ರಕ್ಷಕ ಟ್ರಸ್ಟ್ ಯುವ ಘಟಕದ ರಾಜ್ಯಾಧ್ಯಕ್ಷ ಪ್ರಸನ್ ಕುಮಾರ್ ಮಲ್ಲೂರಹಳ್ಳಿ ಮಾತನಾಡಿ ಈ ರಸ್ತೆಯಲ್ಲಿ ಅನೇಕ ಬಾರಿ ದ್ವಿಚಕ್ರ ವಾಹನಗಳು ಹಾಗೂ ಆಟೋಗಳಲ್ಲಿ ಪ್ರಯಾಣಿಸುವಂತಹ ನಾಗರಿಕರು ಸಾರ್ವಜನಿಕರು ಅನೇಕ ಬಾರಿ ಬಿದ್ದು ಸಾವು ನೋವುಗಳಿಂದ ಆಸ್ಪತ್ರೆಗೆ ಸೇರಿಸುವಂತಹ ಪರಿಸ್ಥಿತಿ ಎದುರಾಗಿ ಅನೇಕ ಬಾರಿ ಮನವಿಗಳನ್ನು ಇಲಾಖೆಗೆ ಸಲ್ಲಿಸಿದರು ಸಹ ಯಾರೂ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಶೀಘ್ರವಾಗಿ ಅಧಿಕಾರಿಗಳು ಈ ಮಲ್ಲೂರಹಳ್ಳಿ ರಸ್ತೆಯನ್ನು ಗಮನಿಸಿ ಕಿರಿದಾದ ರಸ್ತೆಯನ್ನು ಅಗಲೀಕರಣ ಮಾಡಿ ಡಾಂಬರ್ ಹಾಕಿ ರಸ್ತೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತೀರೆಂದು ಶಾಸಕರಲ್ಲಿ ಹಾಗೂ ಸಂಬಂಧ ಪಟ್ಟ ಇಲಾಖೆಗೆ ಆಗುವ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಈ ಸಂದರ್ಭದಲ್ಲಿ ದಾಸರ ಮುತ್ತೇನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಪಿ ಪಾಪಣ್ಣ. ಎನ್. ಮಹಾದೇವಪುರ ಗ್ರಾಮ ಘಟಕದ ಅಧ್ಯಕ್ಷ ಬಸಣ್ಣ. ಡ್ರೈವರ್ ನಾಗೇಶ್ ಮಲ್ಲೂರಹಳ್ಳಿ ಹಾಗೂ ವಿದ್ಯಾರ್ಥಿಗಳು ನಾಗರಿಕರು ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ದಾಸರ ಮುತ್ತೇನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಪಿ ಪಾಪಣ್ಣನವರು ಮಲ್ಲೂರ ಹಳ್ಳಿಯ ರಸ್ತೆಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆ ಇರುವುದರಿಂದ ರಸ್ತೆ ಕಿರಿದಾಗಿದ್ದು ರಸ್ತೆಯನ್ನು ಹೊತ್ತುವರಿ ಮಾಡಿ ಶಾಲೆಯನ್ನು ನಿರ್ಮಿಸಿರುತ್ತಾರೆ ಈ ಶಾಲೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಶಾಲೆಯ ಪಕ್ಕದಲ್ಲಿಯೇ ಗಲೀಜು ನೀರು ಹರಿಯುತ್ತಿದ್ದು ಶಾಲೆಯ ಮಕ್ಕಳ ಆರೋಗ್ಯದ ಮೇಲೆ ಹಾಗೂ ಸಾಂಕ್ರಾಮಿಕ ರೋಗಗಳ ಹರಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈ ಶಾಲೆಗೆ ತಿಳುವಳಿಕೆ ಪತ್ರನೀಡಬೇಕು ಹಾಗೂ ಶಾಲೆಯ ವಿಸ್ತೀರ್ಣದ ಬಗ್ಗೆ ಶಾಲೆಯ ಆಡಳಿತ ಮಂಡಳಿಯರ ಅವರನ್ನು ವಿಚಾರಣೆಗೆ ಒಳ ಪಡಿಸಬೇಕಾಗಿ ಕೇಳಿಕೊಳ್ಳುತ್ತೇವೇ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.