ವಿಜಯನಗರ : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಪ್ರಥಮ ಗ್ರಾಮವಾಗಿ ಹನಸಿ ಗ್ರಾ.ಪಂ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮವನ್ನು ದಿನದ 24 ಗಂಟೆ ನಿರಂತರ ನೀರು ಸರಬರಾಜು ಗ್ರಾಮವೆಂದು ಜಿ.ಪಂ ಸಿ ಇ ಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ ಅವರು ಜೆ ಜೆ ಎಂ ಯೋಜನೆಯ ನಳಕ್ಕೆ ನೀರು ಬಿಡುವ ಮೂಲಕ ಸಾಂಕೇತಿಕವಾಗಿ ಕಳೆದ ಗುರುವಾರ ಘೋಷಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ಕಾರ್ಯಾಲಯಗಳು ವಿಶ್ವಬ್ಯಾಂಕ್ ನೆರವು ಹಾಗೂ ಫೀಡ್ ಬ್ಯಾಕ್ ಪೌಂಡೇಶನ್ ಸಹಯೋಗದೊಂದಿಗೆ ಜೆ ಜೆ ಎಂ ಯೋಜನೆಯ ನಳಗಳಿಗೆ 24 ಗಂಟೆ ನಿರಂತರ ನೀರು ಒದಗಿಸುವ ವಿನೂತನ ಕಾರ್ಯವಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ 06 ಗ್ರಾಮಗಳನ್ನು 24/7 ನೀರು ಸರಬರಾಜು ಗ್ರಾಮಗಳನ್ನಾಗಿ ಘೋಷಿಸಲಾಗಿದೆ.

ಇದೇ ವೇಳೆ 24/7 ನೀರು ಸರಬರಾಜಿನ ಸಮರ್ಪಕ ಬಳಕೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
24/7 ನೀರು ಸರಬರಾಜಿನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಬೈಲಾವನ್ನು ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಹನಸಿ ಗ್ರಾ.ಪಂ ಅಧ್ಯಕ್ಷರಾದ ಎ.ಎಂ ಗಂಗಾಧರಯ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರಾದ ದೀಪಾ.ಎಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ್.ಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹಗರಿಬೊಮ್ಮನಹಳ್ಳಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೆ.ಬಸವರೆಡ್ಡಿ, ಕಿರಿಯ ಅಭಿಯಂತರರಾದ ನಂದೀಶ್, ಪಿಡಿಒ ಉಮೇಶ್.ಬಿ, ಗ್ರಾ.ಪಂ ಉಪಾಧ್ಯಕ್ಷರಾದ ಜೆ.ನಿಂಗವ್ವ, ಡಿಟಿಎಸ್ ಯು ಸಿಬ್ಬಂದಿ ಮಂಜುನಾಥ, ಬಸವರಾಜ, ಸಿದ್ದಲಿಂಗ, ಫೀಡ್ ಬ್ಯಾಕ್ ಫೌಂಡೇಶನ್ ನ ಜಿಲ್ಲಾ ಸಂಯೋಜಕ ಅಭಿಷೇಕ್ ಸೇರಿದಂತೆ VWSC ಸಮಿತಿ ಪದಾಧಿಕಾರೋಗಳು, ಗ್ರಾಪಂ ಸರ್ವ ಸದಸ್ಯರು, ಗ್ರಾಮದ ಮುಖಂಡರು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಸಾರ್ವಜನಿಕರು ಮತ್ತು ಇತರರು ಉಪಸ್ಥಿತರಿದ್ದರು.
———