ಈ ಸೇತುವೆಯ ಒಂದು ಭಾಗದ ಗೋಡೆ ದುಸ್ಥಿತಿಯಲ್ಲಿದ್ದು, ಮುಂದೆ ಆಗಬಹುದಾದ ಅನಾಹುತ ತಪ್ಪಿಸಲು ಮತ್ತು ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸುವ ಮುಂಚಿತವಾಗಿ ಸೇತುವೆ ಕಾಮಗಾರಿ ಕೈಗೊಳ್ಳುವುದು ಅವಶ್ಯವೆಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಂ.06 ಕಾಲುವೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಈ ಕುರಿತು ವರದಿ ಸಲ್ಲಿಸಿರುತ್ತಾರೆ.
ಹಾಗಾಗಿ, ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಹಿತದೃಷ್ಠಿಯಿಂದ ಮೋಟಾರ್ ವಾಹನ ಕಾಯ್ದೆ 1988 ರ ಅಧಿನಿಯಮ 115 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು 1989 ರ ನಿಯಮ 221 ಎ (5) ರನ್ವಯ ಪ್ರದತ್ತವಾದ ಅಧಿಕಾರದಡಿ ಜೂ.20 ರಿಂದ 24 ರವರೆಗೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
Ballari DCಬದಲಿ ಮಾರ್ಗ:ಬಳ್ಳಾರಿಯಿಂದ ಸಿರುಗುಪ್ಪ ಕಡೆಗೆ ಹೋಗುವ ಲಘು ಮತ್ತು ಬಾರಿ ವಾಹನಗಳು ಕಾಮಗಾರಿ ಹತ್ತಿರದ ಕಾಲುವೆಯ ಎಡಭಾಗದ ಸರ್ವೀಸ್ ರಸ್ತೆಯಿಂದ 100 ಮೀ. ಅಂತರದ ಸೇತುವೆ ಮೂಲಕ ಬಲಕ್ಕೆ ತಿರುವು ಪಡೆದುಕೊಂಡು ಸಿರುಗುಪ್ಪ ರಸ್ತೆಯ ಕಡೆಗೆ ಸಂಚಾರ ಮಾಡಬೇಕು.
ಸಿರುಗುಪ್ಪದಿಂದ ಬಳ್ಳಾರಿ ನಗರಕ್ಕೆ ಪ್ರವೇಶಿಸುವ ಭಾರಿ ವಾಹನಗಳು ಹವಂಭಾವಿ ಹೆಚ್‌ಎಲ್‌ಸಿ ವಿತರಣಾ ಕಾಲುವೆಯ ಸೇವಾ ರಸ್ತೆ(ಸಿಸಿ ರಸ್ತೆ) ಮೂಲಕ ತಾಳೂರು ರಸ್ತೆಯ ಮೂಲಕ ಸಂಚರಿಸಬೇಕು.
ಸಿರುಗುಪ್ಪದಿಂದ ಬಳ್ಳಾರಿ ನಗರಕ್ಕೆ ಬರುವ ಲಘು ವಾಹನಗಳು ಹವಂಭಾವಿ ಹೆಚ್‌ಎಲ್‌ಸಿ ವಿತರಣಾ ಕಾಲುವೆಯ ಸೇವಾ ರಸ್ತೆ ಕಿ.ಮೀ 5.10 ರಲ್ಲಿನ ಸೇತುವೆ ಮೂಲಕ ಸಂಚಾರ ಮಾಡಬೇಕು ಎಂದು ಜಿಲ್ಲಾಧಿಕಾರಿವರು ತಿಳಿಸಿದ್ದಾರೆ.
ಕಾಮಗಾರಿ ನಿರ್ಮಾಣದ ಬಗ್ಗೆ ಹಾಗೂ ಸಾರ್ವಜನಿಕರ ಸುರಕ್ಷತೆ ಬಗ್ಗೆ ಸೂಚನಾ ಫಲಕ ಮತ್ತು ಸಂಚಾರ ಬದಲಾವಣೆ ಮಾರ್ಗ ಅಳವಡಿಸಬೇಕು. ಸಂಬಂಧಿಸಿದ ಅಧಿಕಾರಿಗಳು ರಸ್ತೆಯಲ್ಲಿ ಸೂಕ್ತ ಸಂಕೇತಗಳನ್ನು ಹಾಗೂ ಕಾಮಗಾರಿ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳಕಿನ ವ್ಯವಸ್ಥೆ ಅಳವಡಿಸಬೇಕು. ಇತರೆ ಎಲ್ಲಾ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ