LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪೈಪ್ ಅಳವಡಿಕೆಗೆ ಬೆಳೆ ನಾಶ, ಪರಿಹಾರಕ್ಕೆ ರೈತರ ಒತ್ತಾಯ

ಅರಕೇರಾ : ಕೆರೆಗಳಿಗೆ ನೀರು ತುಂಬಿಸುವ ಸರ್ಕಾರ ಯೋಜನೆಯ ಅಡಿಯಲ್ಲಿ ರೈತರ ಜಮೀನುಗಳಲ್ಲಿ ಅಕ್ರಮವಾಗಿ ಪೈಪ್ ಲೈನ್ ಮಾಡುತ್ತಿದ್ದು ಬೆಳೆ ಹಾನಿಯಾಗುತ್ತಿದೆ ಇದರಿಂದ ರೈತರಿಗೆ ತೊಂದರೆ ಉಂಟಾಗಿದೆ ಎಂದು ಚಂದ್ರಕಾಂತ ಶೆಟ್ಟಿ ಆಕ್ರೋಶ ಹೊರ ಹಾಕಿದರು.

 

ಸ್ಥಳೀಯ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮೊದಲನೇ ಹಂತದಲ್ಲಿ ತಾಲ್ಲೂಕಿನಲ್ಲಿ ಸುಮಾರು 14 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಆದರೆ ಕೆಬಿಜೆಎನ್ಎಲ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾನೂನು ನಿಯಮವನ್ನು ಪಾಲಿಸದೆ ಏಕಾಏಕಿ ರೈತರ ಹೊಲದಲ್ಲಿ ಪೈಪ್ ಲೈನ್ ಹಾಕಲು ಮುಂದಾಗಿದ್ದಾರೆ. ಯೋಜನೆಗೆ ಸಂಭವಿಸಿದಂತೆ ಸರ್ಕಾರದ ಆದೇಶದ ಅನ್ವಯ ಸರ್ವೇ ಕಾರ್ಯ ಮಾಡಬೇಕು. ಇಲಾಖೆಯ ಅಧಿಕಾರಿಗಳು ರೈತರ ಒಪ್ಪಿಗೆ ಪಡೆಯಬೇಕು. ಆದರೆ ಯಾವ ನಿಯಮಗಳನ್ನು ಪಾಲಿಸದೆ ಗುತ್ತಿಗೆದಾರರ ಹಣದ ಆಮಿಷಕ್ಕೆ ಒಳಗಾಗಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಸದ್ಯ ಮುಂಗಾರು ಹಂಗಾಮಿನಲ್ಲಿ ಉತ್ತಮ  ಮಳೆಯಾಗಿದೆ ಬೆಳೆಗಳು ಸಹ ಒಳ್ಳೆಯ ಸ್ಥಿತಿಗೆ ಬಂದಿವೆ. ಇಂತಹ ಸಮಯದಲ್ಲಿ ಪೈಪ್ ಲೈನ್ ನೆಪದಲ್ಲಿ ಹೊಲ ಹಾಗೂ ಬೆಳೆ ಎರಡು ಹಾಳಾಗುತ್ತಿವೆ. ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿ ಎಂದು ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.



ಸರ್ವೇ ನಂಬರ್ 25 ರ ನಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಶೆಟ್ಟಿ ಕೆರೆ ಇದ್ದು ಈಗ ಆ ಕೆರೆಗೆ ನೀರು ತುಂಬಿಸುವ ಯೋಜನೆಗೆ ಪೈಪ್ ಲೈನ್ ಪ್ರಕ್ರಿಯೆ ಅಕ್ರಮವಾಗಿ ನಡೆಯುತ್ತಿದೆ. ಆದರೆ 15 ಎಕರೆ ಪ್ರದೇಶದಲ್ಲಿ ಬೆಳೆದ ಹತ್ತಿ ಬೆಳೆ ನಾಶವಾಗುತ್ತಿದೆ. ಅದಕ್ಕೆ ಪರಿಹಾರ ನೀಡಿ ಎಂಬುದು ನಮ್ಮ ಬೇಡಿಕೆ ಇದೆ ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಇದೇ ರೀತಿ ನಿರ್ಲಕ್ಷ್ಯ ವಹಿಸಿದಲ್ಲಿ ರೈತರಿಂದ ಕಾನೂನಿನ ಮೊರೆ ಹೋಗುತ್ತೇವೆ ಎಂದು ತಿಳಿಸಿದರು.

ಈ ವೇಳೆ ಚಂದ್ರಶೇಖರ ಶೆಟ್ಟಿ ಹಾಗೂ ಸಾಮಾಜಿಕ ಹೋರಾಟಗಾರ ಶರಣು ಹೂಗಾರ ಸೇರಿದಂತೆ ಇತರರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST