LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೊಸಪೇಟೆಯಲ್ಲಿ ಕ್ರಿಕೆಟ್ ಟೂರ್ನಮೆಂಟ್

ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿಲ್ಲಿ ದಸರಾ ಹಬ್ಬದ ಪ್ರಯುಕ್ತ ವಿನಾಯಕ ನಗರ ಬಡಾವಣೆ ಸಂಕ್ಲಾಪುರ ಏರಿಯಾದಲ್ಲಿ ಡಿಎವಿ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿತ್ತು, ಈ ಟೂರ್ನಮೆಂಟಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿದ್ದು ಪವರ್ ಹೀಟರ್ಸ್, ಗೇಮ್ ಚೇಂಜರ್ಸ್, ಸಹರ ಬಾಯ್ಸ್, ಈಗಲ್ ಬಾಯ್ಸ್, ರಾಯಣ್ಣ ಬಾಯ್ಸ್, ವೀರ ಕನ್ನಡಿಗ ಮತ್ತು ಬಾಲ್ ಬರ್ನರ್ಸ್ 7 ತಂಡಗಳ ಪೈಕಿ ಚೀಟಿ ಎತ್ತುವ ಮೂಲಕ ಸಹರ ಬಾಯ್ಸ್ ನೇರವಾಗಿ ಸೆಮಿ ಫೈನಲ್ ತಲುಪಿದ್ದು , ಉಳಿದ 6 ತಂಡಗಳು ನಾಕ್ ಔಟ್ ಮ್ಯಾಚ್ಗಳನ್ನು ಆಡಿ ಸೆಮಿ ಫೈನಲ್ ತಲುಪಿದ್ದವು.

 

ಸಹಾರ ಬಾಯ್ಸ್ ವಿರುದ್ಧ ರಾಯಣ್ಣ ಬಾಯ್ಸ್ ಮತ್ತು ಈಗಲ್ ಬಾಯ್ಸ್ ವಿರುದ್ಧ ಬಾಲ್ ಬರ್ನರ್ಸ್ ತಂಡಗಳು ಜಯವನ್ನು ಗಳಿಸಿ ಫೈನಲ್ ಗೆ ತಲುಪಿದ್ದು,  ಟಾರ್ಗೆದ್ದು ಮೊದಲನೇ ಬ್ಯಾಟಿಂಗ್ ಮಾಡಿದ ರಾಯಣ್ಣ ಬಾಯ್ಸ್ ಎಂಟು ವಿಕೆಟ್ ಗಳ ನಷ್ಟಕ್ಕೆ 8 ಓವರ್ ಗಳಿಗೆ 41 ರನ್ನುಗಳ ಟಾರ್ಗೆಟ್ ಬಾಲ್ಬರ್ಗ ತಂಡಕ್ಕೆ ನೀಡಿದರು ಬಾಲ್ ಬರ್ನರ್ ತಂಡದ ಆಟಗಾರರು ಉತ್ತಮ ಬ್ಯಾಟಿಂಗ್ ಆಡಿ ಇನ್ನು ಎರಡು ಓವರ್ ಬಾಕಿ ಇದ್ದಂತೆ ಎಂಟು ವಿಕೆಟ್ಗಳ ಜಯಗಳಿಸಿದರು. ಬಾಲ್ ಬರ್ನರ್ಸ್ ತಂಡವಾಗಿ ರೀತಿ ಇದೆ.



ಗುಜ್ಜಲ ಆಕಾಶ್‌ , ಉಮಾ ಮಹೇಶ್ ಜಿ, ಸೊಹೈಲ್ ಹೆಚ್, ವೆಂಕಟ್, ಎಸ್ ಎಮ್ ಡಿ ಸೋಹೈಲ್ , ಪ್ರಶಾಂತ್ ಅಂಜು , ಶಶಾಂಕ್ ಕಿಚ್ಚಿಡಿ, ಕೃಷ್ಣ, ನಂದನ್, ನಿಂಗ, ರಾಹುಲ್, ಲಿಖಿತ್, ಕುಶಾಲ್ ಈ ಹಿಂದೆ ನಡೆದ ನಾಲ್ಕು ಪಾಯಿಂಟ್ ಟೂರ್ನಮೆಂಟ್ ಗಳಲ್ಲಿ ಸೋತಿದ್ದ ವಾಲ್ ಬರ್ನರ್ ತಂಡವು ಚಚಲ ಟ್ರೋಫಿಯನ್ನು ಗೆದ್ದಿದ್ದು ಏರಿಯಾದ ಜನತೆಗೆ ಸಂತೋಷವನ್ನು ತಂದಿದೆ, ಬಾಲ್ ಬನ್ನೂರ್ ತಂಡದ ಆಟಗಾರರಿಗೆ ವಿನಾಯಕ  ನಗರದ ಕ್ಷೇಮಭಿವೃದ್ಧಿ ಸಂಘ ಮತ್ತು ವಿನಾಯಕ ನಗರದ ಸರಸ್ವತಿ ಮಹಿಳಾ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಉಳಿದ ಪದಾಧಿಕಾರಿಗಳು ಮತ್ತು ಸಂಘದ ಎಲ್ಲಾ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST