LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಎಸ್.ಎಲ್.ಆರ್.ಕಂಪನಿಯಿಂದ ನಾಡಕಛೇರಿ ಸುತ್ತಲೂ ಕಾಂಪೌಂಡ್ ನಿರ್ಮಾಣ

ಮರಿಯಮ್ಮನಹಳ್ಳಿ : ಎಸ್.ಎಲ್.ಆರ್. ಮೆಟಾಲಿಕ್ಸ್ ಸಿ.ಎಸ್.ಆರ್. ಯೋಜನೆಯಡಿಯಲ್ಲಿ ಮರಿಯಮ್ಮನಹಳ್ಳಿ ಮತ್ತು ಕಂಪನಿಯ ಸುತ್ತಮುತ್ತಲ ಹಳ್ಳಿಗಳ ಅಭಿವೃದ್ಧಿಗಾಗಿಯೇ ಮೀಸಲಾಗಿರುತ್ತದೆ ಎಂದು ಎಸ್‌.ಎಲ್‌.ಆರ್. ಕಂಪನಿ ಅಧಿಕಾರಿಗಳಾದ ಧನಂಜಯ್ ಕುಮಾರ್ ಹೇಳಿದರು.

 ಅವರು ಪಟ್ಟಣದ ನಾಡ ಕಾರ್ಯಾಲಯದ ಸುತ್ತಲೂ 9 ಲಕ್ಷದ ವೆಚ್ಚದ ಕಾಂಪೌಂಡ್ ವಾಲ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.  ಕಾಂಪೌಂಡ್ ನಿರ್ಮಾಣ ದಿಂದ ಕಚೇರಿ ಆವರಣದಲ್ಲಿ ಪ್ರಾಣಿಗಳ ಹಾವಳಿ ಮತ್ತು ಸುತ್ತಮುತ್ತಲಿನ ಜನರಿಂದ ಆಗುವ ತೊಂದರೆಗಳು ಈ ಗೋಡೆ ನಿರ್ಮಾಣದಿಂದ ಕಡಿಮೆಯಾಗುತ್ತದೆ ಎನ್ನುವ ಭರವಸೆ ಇದೆ ಎಂದರು.



ನಂತರ ಕಂದಾಯ ನಿರೀಕ್ಷಕರಾದ ಶರಿಫ್ ಮಾತನಾಡಿ, ಎಸ್.ಎಲ್.ಆರ್. ಮೆಟಾಲಿಕ್ಸ್ ತನ್ನ ವ್ಯಾಪ್ತಿಯ ಹಳ್ಳಿಗಳಲ್ಲಿ ಶಿಕ್ಷಣಕ್ಕಾಗಿ ವಿದ್ಯಾರ್ಥಿ ಮಿತ್ರ, ರೈತ ಮಿತ್ರ ಸಾಮಾಜಿಕ ಮಿತ್ರ ಮತ್ತು ಆರೋಗ್ಯ ಮಿತ್ರ ಯೋಜನೆಗಳ ಅಡಿಯಲ್ಲಿ  ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದೆ. ಸ್ಥಳೀಯವಾಗಿ ಯುವಕ ಯುವತಿಯರಿಗೆ ಉದ್ಯೋಗ ಅವಕಾಶಗಳನ್ನ ನೀಡುತ್ತಾ ಬರುತ್ತಿದೆ, ಹಾಗೂ ಇನ್ನಿತರ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬರಬೇಕು, ಇನ್ನೊಷ್ಟು ಸಾಮಾಜಿಕ ಕೆಲಸಗಳನ್ನ ಮಾಡಲಿ ನಮ್ಮ ಸಹಕಾರ ಇರುತ್ತದೆ ಎಂದರು.

ಈ ಸಂದರ್ಭದಲ್ಲಿ, ಎಸ್.ಎಲ್.ಆರ್ ಮೆಟಾಲಿಕ್ಸ್ ಕಂಪನಿಯ ಅಧಿಕಾರಿಗಳಾದ ಧನಂಜಯ, ಶೇಷ ಸಾಯಿ, ಮಲ್ಲಿಕಾರ್ಜುನ.ಕೆ., ಮಾರುತಿ ಗೋಸಿ, ಡಣಾಪುರ ಗ್ರಾ.ಪಂ ಸದಸ್ಯರಾದ ಗಾಳೇಶ್, ಅಯ್ಯನಹಳ್ಳಿ ಗ್ರಾಮದ ಮುಖಂಡರಾದ ಅಂಬರೀಶ್, ನಾಡಕಛೇರಿ ಸಿಬ್ಬಂದಿಗಳಾದ ಮನೋಜ್, ಕೊಟ್ರೇಶ್, ಕರಿಬಸಪ್ಪ, ರಂಗಪ್ಪ, ಗುರುಸ್ವಾಮಿ ಸತೀಶ್ ಹಾಗೂ ಪಟ್ಟಣದ ಮುಖಂಡರು ಭಾಗಿಯಾಗಿದ್ದರು.

 

 
ಎಸ್.ಎಲ್.ಆರ್ ಮೆಟಾಲಿಕ್ಸ್ ಕಂಪನಿಯಿಂದ ನಾಡಕಚೇರಿಯ ಕಾಂಪೌಂಡ್ ನ್ನು 9 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿಕೊಡುತ್ತಿರುವುದು ನಮಗೆ ಸಂತಸ ತಂದಿದೆ.

ಶ್ರೀನಿವಾಸ್ ಶ್ರೀಧರ್,    ಮರಿಯಮ್ಮನಹಳ್ಳಿ ಉಪತಹಶೀಲ್ದಾರ್

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ