ನಾಯಕನಹಟ್ಟಿ : ದಾವಣಗೆರೆ ಮತ್ತು ಬಾಗಲಕೋಟೆ ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಕೆಪಿಸಿಸಿ ಮಾದ್ಯಮ ವಕ್ತರರಾದ ಬಾಲಕೃಷ್ಣಸ್ವಾಮಿ ಯಾದವ್ ಭವಿಷ್ಯ ನುಡಿದರು.
ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮಕ್ಕೆ ಆಗಮಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ರಾಜ್ಯದ ಜನರ ಭರವಸೆ ಹಿಡೇರಿಸಿದ್ದೇವೆ. ಹಾಗಾಗಿ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ರಾಜ್ಯದ ಬಡ ಹೆಣ್ಣು ಮಕ್ಕಳು ಗೃಹಲಕ್ಷಿö್ಮÃ ಹಣದಿಂದ ಬೈಕ್ ಖರಿದಿ ವ್ಯಾಪಾರ ಆರಂಭ ಸೇರಿದಂತೆ ಅನೇಕರು ಲಾಭ ಪಡೆದಿದ್ದಾರೆ. ರಾಜ್ಯದ ಒಬ್ಬ ಮಹಿಳೆ ಗೃಹಲಕ್ಷಿö್ಮÃ ಯೋಜನೆಯ ಹಣದಿಂದ ಗ್ರಂಥಾಲಯ ಅನೇಕ ವಸ್ತುಗಳನ್ನು ಗೃಹಲಕ್ಷಿö್ಮÃ ಹಣದಿಂದ ಖರಿದಿಸಿದ್ದಾರೆ ಮತ್ತು ಶಿಕ್ಷಣಕ್ಕೆ ಅನುಕೂಲವಾಗಿದೆ. ಬಡವರ ಪರವಾಗಿ ಇರುವ ಸರ್ಕಾರ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬAತೆ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಾ ಬಂದಿದೆ. ಮುಂದೆಯೂ ಬಡವರ ಬಗ್ಗೆ ಕಾಳಜಿ ವಹಿಸಲು ಶ್ರಯೋಬಿವೃದ್ದಿಗಾಗಿ ದುಡಿಯಲು ಈ ಬಾರಿ ದಾವಣಗೆರೆ, ಬಾಗಲಕೋಟೆ ನಡೆಯುವ ಉಪಾಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವಂತೆ ಮನವಿ ಮಾಡಿಕೊಂಡರು. ಈ ರಾಜ್ಯ ಸರ್ಕಾರದ ಆಡಳಿತದಿಂದ ಎಷ್ಟೊ ನೆಮ್ಮದಿಯಿಂದ ಇದ್ದೆವೆ.
ಬಿಜೆಪಿ ಯವರಿಗೆ ಕೇವಲ ಶ್ರೀಮಂತ ಉದ್ಯಮಿಗಳ ಪರವಾಗಿ ಕೆಲಸ ಮಾಡುವುದು ಗೊತ್ತು. ಆದರೆ ಇಂದಿರಾ ಗಾಂಧಿಯಿAದ ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಎಲ್ಲರೂ ಬಡವರ ಪರ ಕೆಲಸ ಮಾಡಿದ್ದಾರೆ. ರಾಜ್ಯದ ಜನ ಎಲ್ಲ್ಲವನ್ನು ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿದೆ. ಎಲ್ಲಾರ ಪರವಾಗಿ ಕಾಂಗ್ರೆಸ್ ಸರ್ಕಾರ ಇದೆ. ಕೇಂದ್ರ ಸರ್ಕಾರ ಯುದ್ಧದ ನೆಪದಲ್ಲಿ ಗ್ಯಾಸ್ ಇಲ್ಲದೆ ಹೊಟೇಲ್‌ಗಳು ಮುಚ್ಚುತ್ತಿವೆ, ಸಣ್ಣಪುಟ್ಟ ವ್ಯಾಪಾರಿಗಳು ಟೆಂಟ್ ಬಂದ್ ಮಾಡಿದ್ದಾರೆ. ದೇಶದ ನಾಗರೀಕರಿಗೆ ಮೂಲ ಸೌಕಾರ್ಯ ಒದಗಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಗ್ಯಾರೆಂಟಿ ಯೋಜನೆಗಳಿಂದ ಬಡವರು ಮತ್ತು ಮದ್ಯಮ ವರ್ಗದ ಜನತೆಗೆ ಅನುಕೂಲವಾಗಿದೆ ಯಾವುದೇ ಮದ್ಯವರ್ತಿಗಳ ಆವಳಿ ಇಲ್ಲದೇ ಗ್ಯಾರೆಂಟಿ ಯೋಜನೆಗಳು ಮನೆ-ಮನೆಗೆ ತಲುಪುತ್ತಿವೆ. ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಬಡ ಮತ್ತು ಮದ್ಯಮವರ್ಗದ ಕೂಲಿ ಕಾರ್ಮಿಕ ಮಹಿಳೆಯರು ಇದನ್ನು ತುಂಬಾ ಸದುಪಯೋಗ ಪಡಿಸಿಕೊಳ್ಳುತ್ತಿದ್ದು ಈ ಯೋಜನೆಯು ಇಡೀ ವಿಶ್ವದ ಗಮನ ಸೆಳೆದಿದೆ. ಮಹಿಳೆಯರು ಶಕ್ತಿ ಯೋಜನೆಯಿಂದ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದು ಪ್ರವಾಸೋದ್ಯಮವು ಹೆಚ್ಚಾಗುತ್ತಿದೆ. ಹಾಗೂ ಸಣ್ಣ-ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪರಗಳನ್ನು ತುಂಬಾ ಲಾಭದಾಯಕವಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.