LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರೇರಣ ಇಂಡಿಯನ್ ಗ್ಯಾಸ್ ಕಂಪನಿ ವಿರುದ್ಧ ದೂರು

ನಾಯಕನಹಟ್ಟಿ : ಪಟ್ಟಣದಲ್ಲಿ ಪ್ರೇರಣ ಇಂಡಿಯನ್ ಗ್ಯಾಸ್ ಗ್ರಾಮೀಣ ವಿತರಕರು ಅಕ್ರಮವಾಗಿ ಸಿಲಿಂಡರ್ ಗಳನ್ನು  ಮಾರಿಕೊಳ್ಳುತ್ತಿದ್ದಾರೆ, ಗ್ರಾಹಕರೊಂದಿಗೆ  ಸೌಜನ್ಯತೆಯಿಂದ ವರ್ತಿಸದೆ ಬೇಜವಾಬ್ದಾರಿತನದಿಂದ, ದುರಹಂಕಾರದಿಂದ ವರ್ತಿಸುತ್ತಾರೆ. ನಿಗದಿತ ಬೆಲೆ ಗಿಂತ ನೂರು ರೂಪಾಯಿ  ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ವಿತರಣೆ ಮಾಡುತ್ತಾರೆ. ನಂತರ ವಿತರಕರು ಸಿಲೆಂಡರ್ ಗಳನ್ನು ತೂಕ ಮಾಡದೆ ಗ್ರಾಹಕರಿಗೆ ವಿತರಿಸುತ್ತಿದ್ದಾರೆ ಎಂದು ಪಟ್ಟಣದ ಕೆಲ ಹಿರಿಯರು, ಮುಖಂಡರು, ಯುವಕರು ಆರೋಪ ಮಾಡಿದ್ದಾರೆ.

 ಇವರು ಗ್ಯಾಸ್ ಸಿಲೆಂಡರ್ ಗಳನ್ನು ಕೊಡುವಾಗ ಬಿಲ್ಲುಗಳನ್ನು ವಿತರಿಸುವುದಿಲ್ಲ . ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ ಮಾಡುವಂತವರಿಗೆ ಕಳ್ಳ ಸಾಗಾಣಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.   ಗ್ರಾಹಕರು ಹಾಗೂ  ವಿತರಕರ ಹತ್ತಿರ ಸರಿಯಾದ ಸಮನ್ವಯ ಕೊರತೆ ಎದ್ದು ಕಾಣುತ್ತದೆ. ವಿತರಕರ ಹತ್ತಿರ ಕೆಲಸ ಮಾಡುವಂತಹ ಕೆಲಸಗಾರರಿಗೆ ಯಾವುದೇ ಜೀವವಿಮೆ ಇರುವುದಿಲ್ಲ.  ಕಾರ್ಮಿಕ ಇಲಾಖೆಯ ನಿಯಮಾನುಸಾರ  ನಿಗದಿತ ವೇತನ ನೀಡುತ್ತಿಲ್ಲ. ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ದುಡಿಸಿಕೊಳ್ಳುತ್ತಿದ್ದಾರೆ. ಇನ್ನು ಅನೇಕ ಅಕ್ರಮಗಳಿಂದ ಕೂಡಿದ ಪ್ರೇರಣ ಇಂಡಿಯನ್ ಗ್ಯಾಸ್ ಗ್ರಾಮೀಣ ವಿತರಕರ ವಿರುದ್ಧ ಇಂಡಿಯನ್ ಗ್ಯಾಸ್( ಪ್ರೈ) ಕಂಪನಿ ಬೆಂಗಳೂರಿನ ವ್ಯವಸ್ಥಾಪಕರಾದ  ಭರತ್ ಚಂದ್ರ ರವರಿಗೆ ಮನವಿ ಪತ್ರ ನೀಡಿದರು.



ಈ  ಸಂದರ್ಭದಲ್ಲಿ ನಾಯಕನಹಟ್ಟಿ ಹೋಬಳಿ ಅಧ್ಯಕ್ಷ  ಡಾ. ನಾಗರಾಜ್ ಮೀಸೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ,  ಮಂಜುನಾಥ್ ಗೌರವಾಧ್ಯಕ್ಷರು ,  ಸಿಎಸ್ ರಾಘವೇಂದ್ರ ಕೆಎ ಮಂಜುನಾಥ್ ನಗರ ಕಾರ್ಯದರ್ಶಿ. ಯುವ  ಮುಖಂಡರಾದ ಟಿ,ಬಸವರಾಜ್,  ಬಿಟಿ ಶಿವಕುಮಾರ್. ಹಾಗೂ  ಕಾಲೋನಿಯ ಹಿರಿಯರಾದ   ತಿಪ್ಪೇಸ್ವಾಮಿ( ಕಾಜಾ)  ಕೆಡಿ ತಿಮ್ಮಣ್ಣ, ಎಸ್ ಬಾಬು, ಪ್ರದೀಪ, ಕೃಷ್ಣಮೂರ್ತಿ, ಮಾರಜ್ಜ,ಮತ್ತಿತರರು ಹಾಜರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST