LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

“ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ನೀವು” – ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ ಉಪನ್ಯಾಸ

ದಾವಣಗೆರೆ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ  ಉದ್ಯೋಗ ಕೋಶದ ವತಿಯಿಂದ ಇಂದು “ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ನೀವು” ಎಂಬ ಶೀರ್ಷಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಉದ್ಯೋಗ ಅಧಿಕಾರಿ ಶ್ರೀ ರಾಮಚಂದ್ರ  ರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜೀವನದ ಕುರಿತು ಅಮೂಲ್ಯ ಮಾರ್ಗದರ್ಶನ ನೀಡಿದರು.

 

“ಇಂದಿನ ಯುಗದಲ್ಲಿ ಸ್ಪರ್ಧೆಯೇ ಯಶಸ್ಸಿನ ಪಾದಸೋಪಾನವಾಗಿದೆ. ಸರ್ಕಾರಿ ಉದ್ಯೋಗವಾಗಲಿ, ಖಾಸಗಿ ಕ್ಷೇತ್ರವಾಗಲಿ, ಎಲ್ಲೆಡೆ ಶ್ರಮ ಮತ್ತು ಶಿಸ್ತು ಅನಿವಾರ್ಯ. ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯಕ್ಕಿಂತಲೂ ಹೆಚ್ಚು ಅವರ ಮನೋಬಲ, ದೃಢನಿಶ್ಚಯ ಮತ್ತು ಸಮಯ ನಿರ್ವಹಣೆಯ ಪರೀಕ್ಷೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನದ ಗುರಿಯನ್ನು ನಿಗದಿಪಡಿಸಿ ಅದಕ್ಕಾಗಿ ದಿನನಿತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಯಶಸ್ಸು ತಕ್ಷಣ ಬರುವುದಿಲ್ಲ, ಆದರೆ ನಿರಂತರ ಪ್ರಯತ್ನ ಮಾಡಿದರೆ ಅದು ಖಚಿತವಾಗಿ ಸಿಗುತ್ತದೆ,” ಎಂದು ಅವರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.



ಕಾರ್ಯಕ್ರಮದ ಆಯೋಜಕ ಹಾಗೂ  ಕಾಲೇಜಿನ.  ಪ್ಲೇಸ್ಮೆಂಟ್ ಅಧಿಕಾರಿ ಶ್ರೀ ವೆಂಕಟೇಶ್ ಬಾಬು ಅವರು ಮಾತನಾಡಿ  “ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಉದ್ಯೋಗ ಜೀವನಕ್ಕೆ ಅಗತ್ಯವಾದ ಸಾಮಾನ್ಯ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳು ಜೀವನದ ಹೊಸ ಬಾಗಿಲು ತೆರೆಸುವ ಕೀಲಿಯಂತಿವೆ. ಕಾಲೇಜು ಕಡೆಯಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದಾಗಿದೆ,” ಎಂದು ಹೇಳಿದರು.



ತರಬೇತಿ ಕಾರ್ಯಕ್ರಮ ಆಯೋಜಕರಾದ  ಡಾ  ರೆಹಮಾನ್ ರವರು ಮಾತನಾಡುತ್ತಾ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ವತಿಯಿಂದ ಸ್ಪರ್ಧಾತ್ಮಕ ಪರಿಕ್ಷೆಯ ತರಬೇತಿಯನ್ನು ಆಂತರಿಕ ಸಂಪನ್ಮೂಲಗಳ ಬಳಕೆಯಿಂದ ಆಯೋಜಿಸಲಾಗಿದೆ ವಿದ್ಯಾರ್ಥಿಗಳ ಉತ್ತಮ ಪ್ರತಿಕ್ರಿಯೆ ಹೇಳುತ್ತಿದ್ದಾರೆ ವಿದ್ಯಾರ್ಥಿಗಳು ಹೊರಗಡೆ ಹೆಚ್ಚು ಹಣ ವ್ಯಯಿಸದೆ ಕಾಲೇಜಿನಲ್ಲಿಯೇ ಪದವಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಸಹಾಯವಾಗುತ್ತದೆ ಇದನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದರು

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಬಸವರಾಜ್ ತಹಸೀಲ್ದಾರ ರವರು ವಹಿಸಿದ್ದರು. ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST