LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭವಿಷ್ಯ ರೂಪಿಸುವ ಶಕ್ತಿಯಾಗಿ ವಾಣಿಜ್ಯ ಶಿಕ್ಷಣ: ಡಾ. ವೆಂಕಟೇಶ್ ಬಾಬು

 ದಾವಣಗೆರೆ : ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್, ದಾವಣಗೆರೆಯಲ್ಲಿ "Commerce for a Better Future" ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಎಸ್ ವೆಂಕಟೇಶ್ ಬಾಬು ಭಾಗವಹಿಸಿದರು.



ಅವರು ಮಾತನಾಡುತ್ತಾ, “ಇಂದಿನ ವಾಣಿಜ್ಯ ಶಿಕ್ಷಣವು ಕೇವಲ ಲೆಕ್ಕವೊಂದರೊಳಗೆ ಸೀಮಿತವಲ್ಲ, ಅದು ಉದ್ಯೋಗ, ಉದ್ಯಮ ಮತ್ತು ಆರ್ಥಿಕ ಸ್ಥೈರ್ಯವನ್ನು ರೂಪಿಸುವ ಶಕ್ತಿ ಹೊಂದಿದೆ. ಪಠ್ಯಾಂಶದ ಜತೆಗೆ ನೈಪುಣ್ಯಾಭಿವೃದ್ಧಿ, ಡಿಜಿಟಲ್ ಹಣಕಾಸು, ಸ್ಟಾರ್ಟಪ್ ಕಲ್ಪನೆಗಳು, ಮತ್ತು CSR ಅಂಶಗಳನ್ನು ಯುವಕರು ಅರ್ಥಮಾಡಿಕೊಳ್ಳಬೇಕು" ಎಂದು ವಿವರಿಸಿದರು.

 

 “ಆಧುನಿಕ ಕಾರ್ಪೊರೇಟ್ ಲೋಕದಲ್ಲಿ ಸ್ಪರ್ಧಾತ್ಮಕತೆಯ ನಡುವೆಯೂ ಮೌಲ್ಯಾಧಾರಿತ ಶಿಕ್ಷಣ ಹಾಗೂ ಸುದೀರ್ಘ ದೃಷ್ಟಿಕೋನವೇ ಯಶಸ್ಸಿಗೆ ಹಾದಿ ನೀಡುತ್ತದೆ. ವಿದ್ಯಾರ್ಥಿಗಳು ತಾವು ಆಯ್ದ ಕ್ಷೇತ್ರದಲ್ಲಿ ಮುಂದಾಗಬೇಕಾದರೆ ಸೃಜನಶೀಲತೆ, ಸಂವಹನ ಕೌಶಲ್ಯ ಹಾಗೂ ತಂತ್ರಜ್ಞಾನ ಜ್ಞಾನ ಅತಿ ಅಗತ್ಯ” ಎಂದು ತಿಳಿಸಿದರು.

ವಿದ್ಯಾರ್ಥಿಗಳು ವಾಣಿಜ್ಯ ಶಾಸ್ತ್ರದ ಸುದೀರ್ಘ ಅಧ್ಯಯನದಿಂದ ಕಾರ್ಪೋರೇಟ್ ಜಗತ್ತಿನಲ್ಲಿ ಉದ್ಯಮ ಪಡೆದು ಸ್ವತಂತ್ರ ವಾಗಿ ಬಾಳಬಹುದು ಎಂದು ಹೇಳಿದರು. ಉದ್ಯೋಗ ಪಡೆಯುವುದು ಅಷ್ಟೇ ಅಲ್ಲದೆ ಉದ್ಯಮಗಳನ್ನು ಆರಂಭಿಸಿ ನಾಲ್ಕಾರು ಜನರಿಗೆ ಉದ್ಯೋಗವನ್ನು ನೀಡುವಂತಾಗಬೇಕು ಎಂದು ಪ್ರೇರಪಿಸಿದರು.



ಈ ಉಪನ್ಯಾಸದಿಂದ ವಿದ್ಯಾರ್ಥಿಗಳಿಗೆ ವಾಣಿಜ್ಯ ಕ್ಷೇತ್ರದ ಅಗಾಧ ಸಾಧ್ಯತೆಗಳ ಕುರಿತಾಗಿ ಸ್ಪಷ್ಟ ಚಿತ್ರಣ ಸಿಕ್ಕಿತು. ಸಂವಾದ ಹಾಗೂ ಪ್ರಶ್ನೋತ್ತರ  ಮೂಲಕ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಉಂಟುಮಾಡಿತು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST