LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪೌರ ಕಾರ್ಮಿಕರ ದಿನಾಚರಣೆ

ನಾಯಕನಹಟ್ಟಿ : ಪೌರ ಕಾರ್ಮಿಕರು ಸಂತೋಷದಿಂದ ಇದ್ದರೆ ನಮ್ಮ ಪಟ್ಟಣದ ನಿವಾಸಿಗಳು ಆರೋಗ್ಯಕರ ಜೀವನ ನಡೆಸಬಹುದು ಎಂದು ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಮಂಜುಳಶ್ರೀಕಾಂತ್ ಹೇಳಿದ್ದಾರೆ.

ಪಟ್ಟಣದ ಪಟ್ಟಣ ಪಂಚಾಯಿತಿ ಸಂಭಾಗಣ ಕಾರ್ಯಾಲಯದಲ್ಲಿ ಪೌರ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದ ಪ್ರಯುಕ್ತ ದೀಪ ಬೆಳಗಿಸುವುದರ ಮೂಲಕ ನಂತರ ಮಾತನಾಡಿದ ಅವರು ಪಟ್ಟಣವನ್ನು ಸ್ವಚ್ಛವಾಗಿಸುವುದರಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರ ಸ್ವಚ್ಛತೆ ಕಾರ್ಯದ ಮೂಲಕ ಜನರ ಆರೋಗ್ಯವನ್ನು ಹಾಗೂ ಪಟ್ಟಣದ ಪರಿಸರವನ್ನು ಸಂರಕ್ಷಿಸುವಲ್ಲಿ ಪೌರಕಾರ್ಮಿಕರ ಪಾತ್ರ ತುಂಬ ಮುಖ್ಯ. ಪೌರ ಕಾರ್ಮಿಕರು ಪ್ರತಿ ವಾರ್ಡ್ಗಳಿಗೆ ಕಣ್ಣುಗಳಿದ್ದಂತೆ, ಅವರು ಸ್ವಚ್ಛತೆ ಕಾಪಾಡಿದರೆ ಮಾತ್ರ ನಮ್ಮ ಪಟ್ಟಣ ಸುಂದರವಾಗಿ ಕಾಣಲು ಸಾಧ್ಯ ಎಂದು ಹೇಳಿದರು.

ಪಟ್ಟಣ ಪಂಚಾಯಿತಿಯ 9ನೇ ವಾರ್ಡ್ನ ಸದಸ್ಯರಾದ ಜೆ.ಆರ್.ರವಿಕುಮಾರ್ ಮಾತನಾಡಿ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಅದೇ ರೀತಿ ನಿಮ್ಮ ಕುಟುಂಬದ ಉಳಿದ ಸದಸ್ಯರ ಆರೋಗ್ಯದ ಕುರಿತು ಕಾಳಜಿವಹಿಸಬೇಕು. ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಿ ದುಡಿಯಬೇಕೆಂದಿಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡಿ, ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಹೊಂದುವAತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು. ವೈದ್ಯರು ರೋಗ ಬಂದ ಮೇಲೆ ಚಿಕಿತ್ಸೆ ನೀಡಿದರೆ, ಪೌರಕಾರ್ಮಿಕರ ಪರಿಸರವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ರೋಗಗಳನ್ನು ಹರಡದಂತೆ ನೈರ್ಮಲ್ಯ ಕಾಪಾಡುವ ಪಟ್ಟಣಗಳ ವೈದ್ಯರಿದ್ದಂತೆ ಎಂದು ಹೇಳಿದರು. ದೇಶದ ಭದ್ರತೆ ಸೇವೆಗೆ ಸೈನಿಕರು ಚಳಿ, ಗಾಳಿ, ಮಳೆ, ಬಿಸಿಲೆನ್ನದೇ ಗುಂಡಿಗು ಎದೆ ಕೊಟ್ಟು ನಿಂತು ತಮ್ಮ ಪ್ರಾಣವನ್ನು ಲೆಕ್ಕಿಸದೆ ಯುದ್ಧ ಮಾಡುತ್ತಾರೆ. ಹಾಗೇ ನಮ್ಮ ಪೌರ ಕಾರ್ಮಿಕರೂ ಸಹ ಪ್ರತಿಯೊಬ್ಬ ನಾಗರೀಕನಿಗೆ ಹಾಗೇ ನಮ್ಮ ರೋಗ ಖಾಯಿಲೆಗಳು ಅನಾರೋಗ್ಯಕ್ಕೆ ತುತ್ತಾಗದಂತೆ ಕೆಲಸ ಮಾಡುತ್ತಾರೆ. ತನ್ನ ಕುಟುಂಬದ ಬಗ್ಗೆ ಕಿಚ್ಚಿಂತೂ ಯೋಚನೆ ಮಾಡದೇ ನಮ್ಮ ಪಟ್ಟಣವನ್ನು ಸ್ವಚ್ಛಗೊಳಿಸುತ್ತಾರೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ದುಡಿಯುವ ಕಾರ್ಮಿಕರು ತಮ್ಮ ಆರೋಗ್ಯದ ಮೇಲೆ ಹೆಚ್ಚು ಗಮನಹರಿಸಿ ಎಂದು ಮನವಿ ಮಾಡಿಕೊಂಡರು.



ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್ ಮಾತನಾಡಿ ಸಾರ್ವಜನಿಕರ ಸ್ಥಳದ ಸ್ವಚ್ಛತೆಗಾಗಿ ಬಿಡುವಿಲ್ಲದೇ ನಿರಂತರ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಸೇವೆ ಹಾಗೂ ಅವರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪೌರಕಾರ್ಮಿಕರು ಬೆಳಿಗ್ಗಿನ ಜಾವದಲ್ಲಿ 5 ಘಂಟೆಗೆ ಆಗಮಿಸಿ ತಮ್ಮ ಪಟ್ಟಣವನ್ನು ಸ್ವಚ್ಛಗೊಳಿಸುತ್ತಾರೆ. ಪ್ರತಿಯೊಬ್ಬ ಪೌರ ಕಾರ್ಮಿಕರು 700ರೂ. ಕೊಟ್ಟು ವಿಮೆ ಮಾಡಿಸಿಕೊಳ್ಳಬೇಕು, ನಿಮಗೂ ನಿಮ್ಮ ಮಕ್ಕಳಿಗೂ ಅನುಕೂಲವಾಗುತ್ತದೆ. ಪೌರಕಾರ್ಮಿಕರು ದುಷ್ಚಟಗಳಿಂದ ದೂರಉಳಿದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸದೇ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉನ್ನತ ಸ್ಥಾನ ಕೊಡಿಸಲು ಪ್ರಯತ್ನಿಸಬೇಕು. ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣರವರ ಹತ್ತಿರ ಮಾತನಾಡಿ ಅತೀ ಶೀಘ್ರದಲ್ಲಿ ಮನೆಯನ್ನು ಕೊಡುವಂತಹ ಕೆಲಸ ಮಾಡುತ್ತೇವೆ ಇದಕ್ಕೆ ನಮ್ಮ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಕೈ ಜೋಡಿಸಬೇಕು. ಕಾವಲು ಬಸವೇಶ್ವರ ನಗರದಲ್ಲಿ ಆಶ್ರಯ ಯೋಜನೆಯಲ್ಲಿ ನಿವೇಶನವನ್ನು ಕೊಡುವಂತಹ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಪೌರಕಾರ್ಮಿಕರ ದಿನಾಚರಣೆಯಂದು ಕೆಲವು ಪಟ್ಟಣ ಪಂಚಾಯಿತಿ ಸದಸ್ಯರು ಗೈರು ಹಾಜರಾಗಿರುವುದರಿಂದ ಪೌರ ಕಾರ್ಮಿಕರು ಸದಸ್ಯರುಗಳ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಶ್ರೀಕಾAತ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್, ಪ.ಪಂ. 9ನೇ ವಾರ್ಡ್ನ ಸದಸ್ಯರಾದ ಜೆ.ಆರ್.ರವಿಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯೆ ಗುರುಶಾಂತಮ್ಮ, ಕಂದಾಯ ವಸೂಲಿಗಾರರಾದ ಸಂದೀಪ್, ನಾಗರತ್ನಮ್ಮ ಸಂಘಟಕರು, ಪೌರಕಾರ್ಮಿಕರ ಅಧ್ಯಕ್ಷರಾದ ಮಂಜುನಾಥ, ಪೌರಕಾರ್ಮಿಕ ಸಿಬ್ಬಂದಿ ವರ್ಗದವರು ಇದ್ದರು. ಹಾಗೂ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು. ಮತ್ತು ಮಿಕ್ಷರ್ ವಿತರಣೆ ಮಾಡಲಾಯಿತು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST