LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಕರ್ನಾಟಕ ಆರ್ಟ್ಸ್ ಫೌಂಡೇಷನ್ ವತಿಯಿಂದ ಚಿತ್ರಕಲಾವಿದರ ಕಾಫಿ ಕೂಟ ಯಶಸ್ವಿ ಚರ್ಚೆ

ಬೆಂಗಳೂರು : ಕರ್ನಾಟಕ ಆರ್ಟ್ಸ್ ಫೌಂಡೇಷನ್ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಇವರ ಸಹಕಾರದೊಂದಿಗೆ ಆಯೋಜಿಸಿದ್ದ ಕಲಾ ಕೃತಿ ರಚನೆ ಮತ್ತು ಕಲಾವಿದನ ಬಗ್ಗೆ ಕಾಫಿ ಕೂಟದ ಚರ್ಚೆಯನ್ನು ನಗರದ ಕೆಂಗೇರಿ ಹೋಬಳಿಯ ಭೀಮ ಆರ್ಟ್ ಗ್ಯಾಲರಿ, ಕೆಎಚ್ ಬಿ ಕಾಲೋನಿ, ನೇತಾಜಿ ಬಡಾವಣೆಯಲ್ಲಿ ನಡೆಯಿತು.

 

ಇದರ ಅಂಗವಾಗಿ ರಾಜ್ಯದ ಖ್ಯಾತ ಚಿತ್ರಕಲಾವಿದರು ಹಾಗೂ ಸಮಾಜ ಸೇವಕರು, ಬಹುಮುಖ್ಯ ಪ್ರತಿಭೆ, ಕರ್ನಾಟಕ ಲಲಿತಕಲಾ ಅಕಾಡೆಮಿ ನಿಕಟಪೂರ್ವ ಸದಸ್ಯರಾದ ಶ್ರೀ ಆತ್ಮಾನಂದ ಅವರ ಇತ್ತೀಚಿಗೆ ಹಮ್ಮಿಕೊಂಡಿದ್ದ ನಗರದಲ್ಲಿರುವ ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣ ಆರ್ಟ್ ಗ್ಯಾಲರಿ ಕನ್ನಡ ಭವನದಲ್ಲಿ ಅತ್ಯಂತ ವಿಶಿಷ್ಟವಾದ ಚಿತ್ರಕಲಾ ಪ್ರದರ್ಶನವನ್ನು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದ ಬಗ್ಗೆ ವಿಸ್ತೃತವಾಗಿ ಚರ್ಚಿಸುವ ಮೂಲಕ ಮುಂಬರುವ ದಿನಗಳಲ್ಲಿ ಚಿತ್ರಕಲಾವಿದರ ಹಲವಾರು ರೀತಿಯ ಸಮಸ್ಯೆಗಳು, ಸೌಲಭ್ಯಗಳು, ಕಾನೂನಾತ್ಮಕ ಮತ್ತಿತರರ ಎಲ್ಲಾ ಅಂಶಗಳನ್ನು ಸರ್ಕಾರಗಳು ಪರಿಗಣಿಸಬೇಕಾಗುತ್ತದೆ ಎಂಬುದನ್ನು ಮನವರಿಕೆ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ .. ಕುಮಾರ್ ಅವರಿಗೆ ತಿಳಿಸಲಾಯಿತು.

 news_1783617608_2_897.webp

 

ಸಮಯದಲ್ಲಿ ಎಲ್ಲಾ ಗಣ್ಯ ಅತಿಥಿಗಳು ಹಾಗೂ ಕಲಾವಿದರು, ಕರ್ನಾಟಕ ಆರ್ಟ್ಸ್ ಫೌಂಡೇಷನ್ ಪದಾಧಿಕಾರಿಗಳು ಇನ್ನಿತರರು ಸೇರಿ ನಾಡು ಕಂಡ ಶೇಷ್ಠ ಚಿತ್ರಕಲಾವಿದ ಶ್ರೀ ಕೆ.ಬಿ. ಶಿವಪ್ರಸಾದ್ ರವರಿಗೆ ಕಲಾ ನಮನ ಸಲ್ಲಿಸಲಾಯಿತು.

 

ಇದೇ ವೇಳೆಯಲ್ಲಿ ಖ್ಯಾತ ಅಂತಾರಾಷ್ಟ್ರೀಯ ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ .. ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತು, ಯಶವಂತಪುರ ವಿಧಾನಸಭಾ ಅಧ್ಯಕ್ಷ ಸುದೀಂದ್ರ ಕುಮಾರ್, ಸಂಸ್ಕಾರ ಭಾರತಿ, ಕರ್ನಾಟಕ ದಕ್ಷಿಣ ವಿಭಾಗ ಪ್ರಮುಖರು ರಾಮಸಂದ್ರ, ಕಲಾವಿದರಾದ ಕೆ.ಎಲ್. ಲಿಂಗದೇವರು, ಎಲ್. ಗೌತಮ್, ಅಶೋಕ್ ಕುಮಾರ್, ಆತ್ಮಾನಂದ ಎಚ್., ಕರ್ನಾಟಕ ಆರ್ಟ್ಸ್ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಸರೋಜಾ, ರಂಗಕರ್ಮಿ ಮಲ್ಲಿಕಾರ್ಜುನ್ ಮಹಾಮನೆ, ಬೆಂವಿವಿಯ ನೌಕರ ಗೌರಿಶಂಕರ್, ಸಾಹಿತಿ .ಪಿ. ಕುಮಾರ್ ಕೆಂಗೇರಿ ಮತ್ತು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗೌತಮ್ ಎಸ್, ಖಜಾಂಚಿ ದೀಪಕ್ ಎಚ್., ಸದಸ್ಯ ಶಿವಣ್ಣ, ಅರುಣ್ ಕುಮಾರ್, ಸಂಶೋಧಕರು ಹಾಗೂ ಪತ್ರಕರ್ತ ಡಾ. ಈಶ್ವರ್ ಸಿರಿಗೇರಿ, ಕಲಾವಿದರು ಸೇರಿದಂತೆ ಅಭಿಮಾನಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ