LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಬದಲಾವಣೆಯೇ ಬದುಕಿನ ದಾರಿಗೆ ಬೆಳಕು: ಡಾ.ಶಿವರಾಜ್ ಕಬ್ಬೂರ

 ದಾವಣಗೆರೆ  : ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (UG & PG Programmes) ವಾಣಿಜ್ಯ ವಿಭಾಗದ ವತಿಯಿಂದ AAHWANA–2K25 ಸ್ವಾಗತ ಕಾರ್ಯಕ್ರಮ  ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ.ಸಿ. ತಹಶೀಲ್ದಾರ್ ಅಧ್ಯಕ್ಷತೆ ವಹಿಸಿದ್ದರು.

 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಶಿವರಾಜ್ ya ಕಬ್ಬೂರ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ,  ಜೀವನದಲ್ಲಿ ಬದಲಾವಣೆ ಅನಿವಾರ್ಯ, ಬದಲಾವಣೆಯೊಂದೇ ಬೆಳವಣಿಗೆಗೆ ದಾರಿ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಲು ಶಿಸ್ತಿನೊಂದಿಗೆ ನಿರಂತರವಾಗಿ ಪರಿಶ್ರಮ ಮಾಡಿದಾಗ ಯಶಸ್ಸು ಖಚಿತ ಎಂದು ತಿಳಿಸಿದರು. ತಂದೆ ತಾಯಿಉರಿಗೆವ್ಗೌರವ್ ಕೊಡುವುದು ಮುಖ್ಯ. ನಿಮ್ಮ ಜೀವನದ ಯೋಜನೆ ನಿಮ್ಮದಾಗಿರಲಿ ಸ್ಪಷ್ಟ ಯೋಜನೆಯೊಂದಿಗೆ  ಜೀವನ ಸಾಗಿಸಿ ಎಂದು ಹೇಳಿದರು.

 

ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲರು ಭಾವನಾತ್ಮಕವಾಗಿ ಮಾತನಾಡಿ, ವಿದ್ಯಾರ್ಥಿ ಜೀವನವೇ ಭವಿಷ್ಯ ಕಟ್ಟುವ ಸುದೀರ್ಘ ಹಾದಿಯ ಮೊದಲ ಹೆಜ್ಜೆ ಎಂದು  ಹೇಳಿದರು. ಕಾಲೇಜು ನೀಡುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

 

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಡಾ. ಯಶೋಧಾ ಆರ್, ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕಿ ಹಾಗೂ M.Com ಸಂಯೋಜಕಿ, ಅವರು ಸುಂದರವಾಗಿ ನಿರ್ವಹಿಸಿ ಹೊಸಬರಿಗೆ ಕಾಲೇಜಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪರಿಚಯ ನೀಡಿದರು.

 

ಈ ಸಂದರ್ಭದಲ್ಲಿ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ವೆಂಕಟೇಶ್ ಬಾಬು ಎಸ್ ಅವರು ಮಾತನಾಡಿ, ಇಂದಿನ ಯುಗದಲ್ಲಿ ಸ್ಕಿಲ್‌ ಡೆವಲಪ್‌ಮೆಂಟ್‌ನ ಮಹತ್ವವನ್ನು ಒತ್ತಿಹೇಳಿದರು. ಪದವಿಯ ಜೊತೆಗೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

 

ಕಾರ್ಯಕ್ರಮದಲ್ಲಿ ಡಾ. ಸುನಿತಾ ಕೆ.ಬಿ.  ಡಾ. ಗುರುರಾಜ್ ಜೆ.ಪಿ. (, ಪ್ರೊ. ರೇಖಾ ಬಿ.ವಿ., ಡಾ. ಶಂಭುಲಿಂಗಪ್ಪ. ಎನ್, ವಿಧ್ಯಾರ್ಥಿಗಳ ಕುರಿತು ಮಾತನಾಡಿದರು.

ಡಾ. ನಿಂಗಪ್ಪ ಟಿ., ಪ್ರೊ. ಚನ್ನಬಸಪ್ಪ ಎಸ್.ಎನ್., ಪ್ರೊ. ಚೈತ್ರಾ ಪಿ., ಪ್ರೊ. ಸುರೇಖಾ ಆರ್., ಪ್ರೊ. ಪ್ರಭು ನಾಯಕ್ ಎಸ್. ಮತ್ತು ಸ್ನಾತಕೋತ್ತರ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.

 

ಕಾರ್ಯಕ್ರಮವನ್ನು 2ನೇ ವರ್ಷದ M.Com ವಿದ್ಯಾರ್ಥಿಗಳು ಆಯೋಜಿಸಿದ್ದು, ಹೊಸಬರಿಗೆ ಹೂಗುಚ್ಛ, ಸ್ವಾಗತ ನೃತ್ಯ ಮತ್ತು ವಿದ್ಯಾರ್ಥಿ ಪ್ರತಿಭೆಗಳ ಪ್ರದರ್ಶನ ಕಾರ್ಯಕ್ರಮಗಳು ಮುಖ್ಯ ಆಕರ್ಷಣೆಯಾಗಿದ್ದವು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ