LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಾತಿ ಜನಗಣತಿ ಪರಿಷ್ಕರಣೆ – ವಿಶ್ವಕರ್ಮ/ ವಿಶ್ವಬ್ರಾಹ್ಮಣ ಹೆಸರಿನಲ್ಲಿ ನಮೂದಿಸಲು ಆಗ್ರಹ

ಬೆಂಗಳೂರು : ಕರ್ನಾಟಕ ರಾಜ್ಯ ವಿಶ್ವಬ್ರಾಹ್ಮಣ ಪೀಠಾಧಿಪತಿಗಳು ಹಾಗೂ ಮಠಾಧಿಪತಿಗಳ ಅಭಿವೃದ್ಧಿ ಸಂಘದ ವತಿಯಿಂದ ನಡೆದ ಮಾಧ್ಯಮ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಎಲ್ಲೆಡೆ ಇರುವ ವಿಶ್ವಕರ್ಮ ಸಮುದಾಯದವರು ಜಾತಿ ಜನಗಣತಿ ವೇಳೆ “ವಿಶ್ವಬ್ರಾಹ್ಮಣ” ಅಥವಾ “ವಿಶ್ವಕರ್ಮ” ಎಂದು ಮಾತ್ರ ನಮೂದಿಸಬೇಕೆಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯವಾಗಿ ಈ ಕೆಳಗಿನ ಬೇಡಿಕೆಗಳನ್ನು ಮಂಡಿಸಲಾಯಿತು:

ವಿಶ್ವಕರ್ಮ ಸಮುದಾಯದ 42 ಉಪಜಾತಿಗಳನ್ನು ಬಿಟ್ಟು “ವಿಶ್ವಬ್ರಾಹ್ಮಣ” ಅಥವಾ “ವಿಶ್ವಕರ್ಮ” ಎಂದು ಮಾತ್ರ ನಮೂದಿಸಬೇಕು.

ಈ ಸಮುದಾಯವು ಋಷಿ ಪರಂಪರೆಯಲ್ಲಿ ಬಂದಿರುವ ವಿಶ್ವಕರ್ಮ ಬ್ರಾಹ್ಮಣ ಸಮುದಾಯವಾಗಿದ್ದು, ಇದರ ವಿಶೇಷತೆಗಳನ್ನು ಮಾನ್ಯಗೊಳಿಸಬೇಕು.

ಜನಗಣತಿಯಲ್ಲಿ ನಮ್ಮ ಜನಸಂಖ್ಯೆ ಕೇವಲ 8 ಲಕ್ಷ ಎಂದು ಉಲ್ಲೇಖಿಸಲಾಗಿದೆ; ವಾಸ್ತವದಲ್ಲಿ ಇದು ಸುಮಾರು 45 ಲಕ್ಷದಷ್ಟಿದೆ.

“ಆಚಾರಿ” ಎಂದು ನಮೂದಿಸಬಾರದು; ಸರಿಯಾದ ರೂಪವಾದ “ಆಚಾರ್ಯ” ಎಂದು ನಮೂದಿಸಬೇಕು.

“ಕ್ರಿಶ್ಚಿಯನ್ ವಿಶ್ವಕರ್ಮ” ಎಂಬ ತಪ್ಪಾದ ಉಲ್ಲೇಖವನ್ನು ತೆಗೆದುಹಾಕಬೇಕು; ಮತಾಂತರದ ಕಾರಣಕ್ಕಾಗಿ ನಮ್ಮ ಸಮುದಾಯದ ಹೆಸರು ಬಳಕೆ ಮಾಡಬಾರದು.



ಅಂತಿಮವಾಗಿ ಡಾ. ವಸಂತ ಮುರುಳಿ ಅವರು, ದೇಶದ ಎಲ್ಲೆಡೆ ಇರುವ ವಿಶ್ವಕರ್ಮ ಸಮುದಾಯದವರು ಜಾತಿ ಜನಗಣತಿಯಲ್ಲಿ “ವಿಶ್ವಬ್ರಾಹ್ಮಣ” ಅಥವಾ “ವಿಶ್ವಕರ್ಮ” ಎಂದು ನಮೂದಿಸಬೇಕು ಎಂದು ಕರೆ ನೀಡಿದರು.

 

ಈ ಸಂದರ್ಭದಲ್ಲಿ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು (ಶ್ರೀ ವಿಶ್ವಕರ್ಮ ಜಗದ್ಗುರು ಪೀಠ, ಅರೇಮಾದನಹಳ್ಳಿ, ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಮಠ, ಹಾಸನ), ಪೂಜ್ಯಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು (ಆನೆಗುಂದಿ ಸಂಸ್ಥಾನ, ಕಟಪಾಡಿ), ಪೂಜ್ಯಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು (ದೇವೇಂದ್ರಸ್ವಾಮಿ, ಏಕದಂಡಗಿಮಠ, ಶಹಾಪೂರ), ಪೂಜ್ಯಶ್ರೀ ಮಳಿಯಪ್ಪಯ ಮಹಾಸ್ವಾಮಿಗಳು (ಮಹಾಪುರುಷ, ಬಾಗಲಕೋಟೆ), ಪೂಜ್ಯಶ್ರೀ ರಾಮಚಂದ್ರ ಮಹಾಸ್ವಾಮಿಗಳು (ಶ್ರೀಶೈಲಸ್ವಾಮಿ, ಮೂರುಝಾವದ ಮಠ, ಸಿಂದಗಿ), ಪೂಜ್ಯಶ್ರೀ ನೀಲಕಂಠಚಾರ್ಯ ಮಹಾಸ್ವಾಮಿಗಳು (ಆದಿಲಕ್ಷ್ಮಿ ಮಹಾಸಂಸ್ಥಾನ ಮಠ, ಬೆಂಗಳೂರು), ಪೂಜ್ಯಶ್ರೀ ಜಗನ್ನಾಥ ಮಹಾಸ್ವಾಮಿಗಳು (ಗುರುಲಿಂಗಸ್ವಾಮಿ, ಮಹಾಪುರುಷ, ಮುರನಾಳ ಮಠ), ಪೂಜ್ಯಶ್ರೀ ಮಹೇಂದ್ರ ಮಹಾಸ್ವಾಮಿಗಳು (ಶೇಷೇಂದ್ರಸ್ವಾಮಿ, ಮೂರುಝಾವದ ಮಠ, ವಿಜಯಪುರ), ಪೂಜ್ಯಶ್ರೀ ಸೋಮಲಿಂಗ್ಗಯ್ಯ ಮಹಾಸ್ವಾಮಿಗಳು (ದಾನಲಿಂಗಯ್ಯಸ್ವಾಮಿ, ವಡಿಯರ, ಸವದತ್ತಿ) ಹಾಗೂ ಅನೇಕ ಮಠಾಧೀಶರುಗಳು ಭಾಗವಹಿಸಿದರು.

ಡಾ. ವಸಂತ ಮುರುಳಿ, ಅಧ್ಯಕ್ಷರು, ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ, ಹಾಗೂ ವಿಶ್ವಕರ್ಮ ಸಮಾಜದ ಎಲ್ಲಾ ಮುಖಂಡರುಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು, ಈ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST