LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕಕ್ಕೆ ಹರಿದು ಬರಲಿದೆ ಬಂಡವಾಳ ಮಹಾಪೂರ : ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕರ್ನಾಟಕ ಸರ್ಕಾರ ಅಮೇರಿಕದ ಬೋಸ್ಟನ್, ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ 10 ದಿನಗಳ ಯುಎಸ್ ರೋಡ್ ಶೋ ನಡೆಸಿದ್ದು ಅಲ್ಲಿನ ಉದ್ದಿಮೆಗಳು ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಲು ಆಸಕ್ತಿ ವಹಿಸಿವೆ ಎಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಮೇರಿಕದಲ್ಲಿ 10 ದಿನಗಳ ಕಾಲ 3 ನಗರಗಳಲ್ಲಿ 2 ಸಮ್ಮೇಳನಗಳು, 3 ಸತ್ಕಾರ ಕೂಟಗಳು, 2 ಶೈಕ್ಷಣಿಕ ಸಂಸ್ಥೆಗಳಲ್ಲಿ 120 ಸಭೆಗಳನ್ನ ನಡೆಸಲಾಗಿದೆ. ಹಿರಿಯ ನಾಯಕರ ಸರಣಿ ಸಭೆಗಳು ಮತ್ತು ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದು ರೋಡ್ ಶೋ ಭಾರತದ ಪ್ರಮುಖ ಆವಿಷ್ಕಾರ ಮತ್ತು ತಂತ್ರಜ್ಞಾನ ಕೇಂದ್ರವಾಗಿ ರಾಜ್ಯದ ಸ್ಥಾನವನ್ನು ಬಲಪಡಿಸಿದೆ ಎಂದರು. 



ಬೋಸ್ಟನ್, ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ನಗರಗಳಲ್ಲಿ ನಿಯೋಗವು ಬಹುರಾಷ್ಟ್ರೀಯ ಕಂಪನಿಗಳಿAದ ಸ್ಟಾರ್ಟ್ ಅಪ್‌ಗಳವರೆಗೆ - ಹಿರಿಯ ಉದ್ದಿಮೆ ಕಾರ್ಯನಿರ್ವಾಹಕರೊಂದಿಗಿನ ಮುಖಾಮುಖಿ ಸಭೆಗಳು, ಶೈಕ್ಷಣಿಕ ಭೇಟಿಗಳು, ತಾತ್ಕಾಲಿಕ ಉದ್ಯಮ ಕಾರ್ಯಕ್ರಮಗಳು ಮತ್ತು ಗುಪ್ತ ಉನ್ನತ ಮಟ್ಟದ ಅಧಿಕಾರಿಗಳೊಂದಿಗಿನ ದುಂಡುಮೇಜಿನ ಸಭೆಗಳು ಸೇರಿದಂತೆ ಪ್ರಮುಖ ಉದ್ಯಮ ವಲಯಗಳಲ್ಲಿ 120 ಕ್ಕೂ ಹೆಚ್ಚು ಕಂಪನಿಗಳೊAದಿಗೆ ಸಮಾಲೋಚನೆ ನಡೆಸಲಾಗಿದೆ. ಈ ರೋಡ್ ಶೋ ಅಂದಾಜು 5500 ಕೋಟಿ ರೂಪಾಯಿಯಷ್ಟು ಹೂಡಿಕೆಯನ್ನು ಸೆಳೆಯುವ ನಿರೀಕ್ಷೆ ಮೂಡಿಸಿದೆ. ಪ್ರತಿಭೆಗಳ ನೇಮಕಾತಿ, ಮೂಲಸೌಕರ್ಯ ವೆಚ್ಚ, ಆರ್ & ಡಿ ಹೂಡಿಕೆಗಳು ಮತ್ತು ಸಹಭಾಗಿತ್ವದ ಯೋಜನೆಗಳ ರೂಪದಲ್ಲಿ ಸುಮಾರು 7,200 ಜನರಿಗೆ (ಹೂಡಿಕೆ ಮತ್ತು ಸಂಭಾವ್ಯ ಜನರ ಸಂಖ್ಯೆಗಳು) ಉದ್ಯೋಗ ಸೃಷ್ಟಿ ಹಾಗೂ ಮತ್ತಷ್ಟು ಹೆಚ್ಚುವರಿ ಹೂಡಿಕೆಗಳನ್ನು ನಿರೀಕ್ಷಿಸಲಾಗಿದೆ. ರೋಡ್ ಶೋ ವೇಳೆ ಕಂಪನಿಗಳೊAದಿಗೆ ತಿಳಿವಳಿಕೆ ಪತ್ರ ಮತ್ತು ಉದ್ದೇಶ ಪತ್ರಕ್ಕೆ ಸಹಿ ಕೂಡ ಹಾಕಲಾಯಿತು ಎಂದರು.

 

ವಿದ್ಯುನ್ಮಾನ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿಯೋಗದಲ್ಲಿ ಕಾರ್ಯದರ್ಶಿ ಡಾ. ಏಕರೂಪ್ ಕೌರ್, ಹೊಸಕೋಟೆ ಶಾಸಕ ಮತ್ತು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಹುಲ್ ಶರಣಪ್ಪ ಸಂಕನೂರ್, ಎಲೆಕ್ಟಾçನಿಕ್ಸ್, ಐಟಿ ಮತ್ತು ಬಿಟಿ ಸಚಿವರ ವಯಕ್ತಿಕ ಕಾರ್ಯದರ್ಶಿ ಭೀಮಾಶಂಕರ್, ಪ್ರಧಾನ ವ್ಯವಸ್ಥಾಪಕರಾದ ನಿತಿನ್ ಚಕ್ಕಿ ಇವರುಗಳಿದ್ದು ಪ್ರಮುಖ ಸಂಸ್ಥೆಗಳು, ಸ್ಟಾರ್ಟ್ಅಪ್‌ಗಳು, ಶ್ರೇಷ್ಠತೆಯ ಕೇಂದ್ರಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಾದ್ಯAತ ತನ್ನ ಇಕೋ ಸಿಸ್ಟಂನೊAದಿಗೆ ಸಹಯೋಗ ಹೊಂದಲು ಬಯಸುವ ಕಂಪನಿಗಳಿಗೆ ರಾಜ್ಯವು ನೀಡುವ ಅವಕಾಶಗಳನ್ನು ಮನದಟ್ಟು ಮಾಡಿಕೊಟ್ಟಿತು.

ಕರ್ನಾಟಕದಲ್ಲಿನ ಪ್ರತಿಭಾ ಸಂಪನ್ಮೂಲದ ಲಭ್ಯತೆಯನ್ನು ಬಳಸಿಕೊಳ್ಳುವ ಮೂಲಕ ತಮ್ಮ ಕಾರ್ಯಾಚರಣಾ ಮಾದರಿಯನ್ನು ಜಾಗತೀಕರಿಸಲು ಅನುವು ಮಾಡಿಕೊಡುವುದು ಈ ರೋಡ್ ಶೋನ ಉದ್ದೇಶವಾಗಿತ್ತು. ವಿದ್ಯುನ್ಮಾನ ವ್ಯವಸ್ಥೆ ವಿನ್ಯಾಸ ಮತ್ತು ಉತ್ಪಾದನೆ ಹಾಗೂ ಜೈವಿಕ ತಂತ್ರಜ್ಞಾನ ವಲಯಗಳ ಮೇಲೆ ವಿಶೇಷ ಗಮನ ಹರಿಸಲಾಗಿದ್ದು, ಈ ಕ್ಷೇತ್ರಗಳಲ್ಲಿನ ಕರ್ನಾಟಕದ ಪರಾಕ್ರಮವನ್ನು ಪ್ರದರ್ಶಿಸಲಾಯಿತು. ಕರ್ನಾಟಕದ ಪ್ರಗತಿಪರ ನೀತಿಗಳು, ಬಲಿಷ್ಠ ಪ್ರತಿಭಾ ಸಂಪನ್ಮೂಲ ಮತ್ತು ಅಭಿವೃದ್ಧಿ ಹೊಂದುತ್ತಿರುವ ನವೋದ್ಯಮ ಇಕೋ ಸಿಸ್ಟಂಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಬೆಂಗಳೂರು ಮತ್ತು ರಾಜ್ಯದ ಇತರೆ ಉದಯೋನ್ಮುಖ ಸಮೂಹಗಳೆರಡರಲ್ಲೂ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಅಥವಾ ವಿಸ್ತರಿಸಲು ಜಾಗತಿಕ ಕಂಪನಿಗಳು ಗಮನಾರ್ಹ ಆಸಕ್ತಿ ಪ್ರದರ್ಶಿಸಿವೆ ಎಂದರು.



ಹೊಸಕೋಟೆ ಶಾಸಕ ಮತ್ತು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿ, ವಿಶ್ವ ಮಟ್ಟದಲ್ಲಿ ಭಾರತಕ್ಕೆ ಬರಬೇಕೆಂಬ ಆಸಕ್ತಿ ಉಳ್ಳವರು ಬೆಂಗಳೂರಿಗೆ ಬರಬೇಕೆಂದು ಅಪೇಕ್ಷೆ ಪಡುತ್ತಿದ್ದಾರೆ. ಇಲ್ಲಿನ ಮಾನವ ಸಂಪನ್ಮೂಲ ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಅವರಿಗೆ ಆಸ್ಥೆ ಇದೆ. ಕೇಂದ್ರದ ಅಸಹಕಾರದಿಂದ ಕೆಲವೊಂದು ಸಂಸ್ಥೆಗಳಲ್ಲಿ ಪ್ರಮುಖರನ್ನು ಭೇಟಿ ಮಾಡಲು ಸಮಸ್ಯೆ ಆಯಿತು. ಕೇಂದ್ರದ ಮಲತಾಯಿ ಧೋರಣೆಯಿಂದ ರಾಜ್ಯಕ್ಕೆ ಬಂಡವಾಳ ಇನ್ನಷ್ಟು ತರಲು ಹಿನ್ನಡೆ ಆಯಿತು ಎಂದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST