LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶೀಘ್ರದಲ್ಲೇ ಸೇತುವೆ ನಿರ್ಮಾಣ ಕಾಮಗಾರಿ ಆರಂಭ: ಗೋಪಾಲಕೃಷ್ಣ

ನಾಯಕನಹಟ್ಟಿ : ರಾಜ್ಯ ಹೆದ್ದಾರಿ 45ರ ಮನಮೈನಹಟ್ಟಿ ಸಮೀಪದಲ್ಲಿ 2ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದ್ದಾರೆ.

ಅವರು ಬುಧವಾರ ಪಟ್ಟಣದಲ್ಲಿ 90 ಲಕ್ಷ ವೆಚ್ಚದ ವಿದ್ಯುತ್ ದೀಪಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.  ಮನಮೈನಹಟ್ಟಿ ಗ್ರಾಮದ ಬಳಿ ಹಳ್ಳದ ನೀರು ರಾಜ್ಯ ಹೆದ್ದಾರಿಯ ಮೇಲೆ ನೀರು ಹರಿಯುತ್ತಿತ್ತು. ಇದೀಗ 2 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಒಂದು ವಾರದಲ್ಲಿ ಆರಂಭವಾಗಲಿದೆ. ಪಟ್ಟಣದಲ್ಲಿ ಬಸ್ ನಿಲ್ದಾಣ ಕಾಮಗಾರಿ 50 ಲಕ್ಷ ರೂಗಳನ್ನು ಒದಗಿಸಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ.

ಮನಮೈನಹಟ್ಟಿಯಿಂದ ಕುದಾಪುರ ಲಂಬಾಣಿಹಟ್ಟಿಯವರೆಗೆ ರಸ್ತೆ ನಿರ್ಮಿಸುವಂತೆ ಈ ಎಲ್ಲ ಗ್ರಾಮಗಳ ಜನರು ಒತ್ತಾಯಿಸುತ್ತಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಿಸಿದ್ದ ರಸ್ತೆ ಸಂಪೂರ್ಣವಾಗಿ ಹಾಳಾಗಿತ್ತು. ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳವಾದ ಬೋರೇದೇವರ ದೇವಾಲಯಕ್ಕೆ ಇದು ಪ್ರಮುಖ ರಸ್ತೆಯಾಗಿದೆ.  ಮುಂದಿನ ಮೂರು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ಭಕ್ತಾದಿಗಳಿಗೆ ಮತ್ತು ಗ್ರಾಮಗಳ ಜನರಿಗೆ ಉಪಯೋಗವಾಗಲಿದೆ. ಜಾಗನೂರಹಟ್ಟಿಯಿಂದ ಕವಲೇನಹಟ್ಟಿ ನಡುವೆ 20 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ನಾಯಕನಹಟ್ಟಿಯಲ್ಲಿ ಕೆಪಿಎಸ್ ಶಾಲೆ ಆರಂಭಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಶಾಸಕರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲಿ ಸಭೆ ಜರುಗಲಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.



ಶಾಸಕರು ಇದೇ ಸಂದರ್ಭದಲ್ಲಿ ತಳಕು ಗ್ರಾಮದಲ್ಲಿ 10ಲಕ್ಷ ವೆಚ್ಚದ ಹಮಾಲರ ಸಮುದಾಯ ಭವನ ಉದ್ಘಾಟಿಸಿದರು. ಎನ್.ಮಹಾದೇವಪುರದಲ್ಲಿ 10 ಲಕ್ಷ ವೆಚ್ಚದ ಬಸ್ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಾಯಕನಹಟ್ಟಿಯ ವಾರ್ಡ ನಂ 1 ರಲ್ಲಿ 20 ಲಕ್ಷದ ಸಿಸಿ ರಸ್ತೆಯನ್ನು ಗುದ್ದಲಿ ಪೂಜೆ ನೆರೆವೆಸಿದರು

ಪಪಂ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್, ಉಪಾಧ್ಯಕ್ಷರದ ಬೋಸಮ್ಮ ಮಂಜುನಾಥ್  ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್,  ಕೌನ್ಸಿಲರ್‌ಗಳಾದ ಜೆ.ಆರ್.ರವಿಕುಮಾರ್, ಅಬಕಾರಿ ತಿಪ್ಪೇಶ್ವಾಮಿ,   ಜಗನೂರಹಟ್ಟಿ ಮಂಜುನಾಥ್  ಪಟ್ಟಣ ಪಂಚಾಯತ್ ಸರ್ವ ಸದ್ಯರುಗಳು ಇದ್ದರು ಮಾಜಿ ಕೌನ್ಸಿಲರ್‌ಗಳಾದ  ಎಸ್.ಉಮಾಪತಿ, ಬಸಣ್ಣ, ಬೋರನಾಯಕ ಹಾಗೂ ಕಾಂಗ್ರೆಸ್ ಮುಖಂಡರುಗಳು ಪಪಂ ಮುಖ್ಯಾಧಿಕಾರಿ ಓ.ಶ್ರೀನಿವಾಸ್ ಮತ್ತಿತರರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST