ಇಲ್ಲಿನ ಮಲ್ಲೇಶ್ವರಂ ಟಿಟಿಡಿ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪಿ.ಆರ್.ನಾಯ್ಡು ಅವರು ಟಿಟಿಡಿ ಅಧ್ಯಕ್ಷರಾದ ಬಳಿಕ ಬ್ರಹ್ಮೋತ್ಸವಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಅನಿಲ್ ಕುಮಾರ್ ಸಿಂಘಾಲ್ ಅವರು ಟಿಟಿಡಿ ಕಾರ್ಯನಿರ್ವಹಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪ್ರತಿದಿನ ೧ ಲಕ್ಷ ೧೬ ಸಾವಿರ ಭಕ್ತರಿಗೆ ಟೋಕನ್ ನೀಡಲಾಗುತ್ತಿದೆ. ಮೊದಲಿನಂತೆ ಯಾವುದೇ ರೀತಿಯ ವಿಶೇಷ ದರ್ಶನಕ್ಕೆ ಆಸ್ಪದ ಇಲ್ಲ. ಇಲ್ಲಿ ಕೇವಲ ಭಕ್ತಿ ಇದ್ದವರಿಗೆ ಮಾತ್ರವೇ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಯಾತ್ರಿಕರನ್ನು ಗಮನದಲ್ಲಿಟ್ಟುಕೊಂಡು ತಿರುಮಲದ ಪಾವಿತ್ರ‍್ಯವನ್ನು ರಕ್ಷಿಸುವುದು ಮತ್ತು ಸಾಮಾನ್ಯ ಭಕ್ತರಿಗೆ ತೊಂದರೆ ಆಗದಂತೆ ಭಗವಂತನ ಮುಕ್ತ ದರ್ಶನವನ್ನು ಒದಗಿಸುವುದು ಪ್ರಮುಖ ಆದ್ಯತೆ ಆಗಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಅಂದು ಭಗವಂತನಿಗೆ ವಸ್ತç ಸಮರ್ಪಣೆ ಮಾಡುವ ಮೂಲಕ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಮುಂದಿನ ವಾರ್ಷಿಕ ಬ್ರಹ್ಮೋತ್ಸವಗಳಿಂದ ವಿಶೇಷ ಗಮನ ಹರಿಸುವ ಮೂಲಕ ಪೂರೈಸುವ ಗುರಿಯನ್ನು ಹೊಂದಿದ್ದೇವೆ ಎಂದ ಅವರು, ಟಿಟಿಡಿಯ ವಿವಿಧ ಇಲಾಖೆಗಳ ಎಲ್ಲಾ ಮುಖ್ಯಸ್ಥರು, ಜಿಲ್ಲಾಡಳಿತ, ಪೊಲೀಸ್ ಮತ್ತು ಟಿಟಿಡಿ ಹೆಚ್ಚುವರಿ ಇಒ ಸಿಎಚ್ ವೆಂಕಯ್ಯ ಚೌಧರಿ ಅವರೊಂದಿಗೆ ವಿವರವಾದ ಮತ್ತು ಅಂತಿಮ ಪರಿಶೀಲನಾ ಸಭೆಯನ್ನು ಪೂರ್ಣಗೊಳಿಸಲಾಗಿದೆ. ೨೦೨೫ ರ ಸಾಲಿನಲ್ಲಿ ಬ್ರಹ್ಮೋತ್ಸವಗಳನ್ನು ಸುಗಮವಾಗಿ ನಡೆಸಲು ಎಲ್ಲಾ ವ್ಯವಸ್ಥೆಗಳು ಜಾರಿಯಲ್ಲಿವೆ. ಬ್ರಹ್ಮೋತ್ಸವ ವ್ಯವಸ್ಥೆಗಳ ಕುರಿತು ಜಿಲ್ಲಾಡಳಿತದೊಂದಿಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ತಿರುಮಲದ ಪಾವಿತ್ರ‍್ಯವನ್ನು ಕಾಪಾಡಿಕೊಂಡು ಭಕ್ತರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳ ಸೂಚನೆಗಳ ಪ್ರಕಾರ ಯಾವುದೇ ಅನಾನುಕೂಲತೆ ಇಲ್ಲದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ಟಿಟಿಡಿಯ ಎಲ್ಲಾ ಶಾಖೆಗಳು, ಜಿಲ್ಲಾಡಳಿತ ಮತ್ತು ಪೊಲೀಸರೊಂದಿಗೆ ಸಮನ್ವಯದೊಂದಿಗೆ ವಿವರವಾದ ಸೂಕ್ಷ್ಮ ಮಟ್ಟದ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದರು.

ತಿರುಮಂಜನಂ:
ಬ್ರಹ್ಮೋತ್ಸವಗಳಿಗೆ ಮುನ್ನ ದೇವಾಲಯದ ಸಾಂಪ್ರದಾಯಿಕ ಶುಚಿಗೊಳಿಸುವಿಕೆ, ಕೋಯಿಲ್ ಆಳ್ವಾರ್ ತಿರುಮಂಜನA, ಆಭರಣಗಳ ಶುಚಿಗೊಳಿಸುವಿಕೆ, ವಾಹನಗಳ ಪ್ರಾಯೋಗಿಕ ಚಾಲನೆ ಪೂರ್ಣಗೊಂಡಿದೆ. ಸೆ. ೨೪ ರಂದು ಧ್ವಜಾರೋಹಣಂ ದಿನದಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಪಟ್ಟು ವಸ್ತ್ರಗಳನ್ನು ಅರ್ಪಿಸಲಿದ್ದು, ಸೆ. ೨೫ ರಂದು ಬ್ರಹ್ಮೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಸಿವಿಲ್ ಎಂಜಿನಿಯರಿAಗ್ ಕಾಮಗಾರಿಗಳಿಗಾಗಿ ರೂ. ೯.೫ ಕೋಟಿ ಮತ್ತು ವಿದ್ಯುತ್ ದೀಪಾಲಂಕಾರ ಒಳಗೊಂಡAತೆ, ರೂ. ೫.೫೦ ಕೋಟಿಯನ್ನು ವಾರ್ಷಿಕ ಬ್ರಹ್ಮೋತ್ಸವಗಳಿಗೆ ಮಂಜೂರು ಮಾಡಲಾಗಿದೆ. ರೂ. ೩.೫೦ ಕೋಟಿ ವೆಚ್ಚದಲ್ಲಿ ಹೂವಿನ ಅಲಂಕಾರವನ್ನು ಕೈಗೊಳ್ಳಲಾಗಿದೆ. ಸಂಪೂರ್ಣ ಅಲಂಕಾರವು ಇದರಲ್ಲಿರುತ್ತದೆ. ಆವರಣದ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು ಒಂಭತ್ತು ದಿನಗಳವರೆಗೆ ನೈರ್ಮಲ್ಯಕ್ಕಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಂಭತ್ತು ದಿನಗಳಲ್ಲಿ ಶಿಫಾರಸು ಪತ್ರಗಳ ಮೇರೆಗೆ ಕೊಠಡಿಗಳನ್ನು ರದ್ದುಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ೩೫೦೦ ಕೊಠಡಿಗಳನ್ನು ಆಫ್‌ಲೈನ್‌ನಲ್ಲಿ ಹಂಚಿಕೆ ಮಾಡಲಾಗುತ್ತದೆ. ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡುವ ನಿರ್ಧಾರದೊಂದಿಗೆ ಈ ಬ್ರಹ್ಮೋತ್ಸವ ನಡೆಯಲಿದೆ ಎಂದರು.
ಸೆ.೨೮ರಂದು ಗರುಡವಾಹನೋತ್ಸವ:
ಸೆ.೨೪ ರಂದು ಧ್ವಜಾರೋಹಣ ಬಳಿಕ ಸೆ.೨೮ರಂದು ಗರುಡೋತ್ಸವ, ೨೯ ರಂದು ರಥೋತ್ಸವ, ಅ.೧ ರಂದು ಮತ್ತು ೨ ರಂದು ಅದ್ದೂರಿ ಧಾರ್ಮಿಕ ಆಚರಣೆಗಳು ನಡೆಯಲಿವೆ. ಈ ವರ್ಷ ವಾಹನ ಸೇವೆಗಳು ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಭಕ್ತರಿಗಾಗಿ ೩೬ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುವುದು. ಗರುಡ ಸೇವಾ ದಿನವನ್ನು ಹೊರತುಪಡಿಸಿ ದಿನಕ್ಕೆ ೧.೧೬ ಲಕ್ಷ ವಿಶೇಷ ದರ್ಶನ ಟಿಕೆಟ್‌ಗಳು ಮತ್ತು ೨೫ ಸಾವಿರ ಎಸ್‌ಎಸ್‌ಡಿ ಟೋಕನ್‌ಗಳು ನೀಡಲಾಗುತ್ತಿದೆ. ಈ ಅವಧಿಯಲ್ಲಿ ಎಲ್ಲಾ ಸವಲತ್ತು ದರ್ಶನಗಳನ್ನು ರದ್ದುಗೊಳಿಸಲಾಗುತ್ತದೆ. ವಿಐಪಿ ವಿರಾಮವು ಸ್ವಯಂ ಶಿಷ್ಟಾಚಾರದ ವಿಐಪಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದರು.
೮ ಲಕ್ಷ ಲಡ್ಡುಗಳು ಸ್ಟಾಕ್:
ಭಕ್ತರು ಯಾವುದೇ ಕಾರಣಕ್ಕೂ ನಿರಾಶೆ ಹೊಂದಬಾರದು. ದೇವರ ದರ್ಶನ, ಪ್ರಸಾದದಲ್ಲಿ ಕೊರತೆ ಆಗಬಾರದು. ಈ ಕಾರಣಕ್ಕಾಗಿ ದಿನಕ್ಕೆ ೮ ಲಕ್ಷ ಲಡ್ಡುಗಳು ಬಫರ್ ಸ್ಟಾಕ್ ಆಗಿರುತ್ತವೆ. ಭಕ್ತರಿಗೆ ಮಾಹಿತಿ ನೀಡಲು ೨೦ ಸಹಾಯ ಕೇಂದ್ರಗಳು (ಹತ್ತು ಹೆಚ್ಚುವರಿ). ಪ್ರತಿ ಗ್ಯಾಲರಿಯಲ್ಲಿ ಇರುವ ಭಕ್ತರಿಂದ ಪ್ರತಿಕ್ರಿಯೆ ಸಂಗ್ರಹಿಸಲು ಟಿಟಿಡಿಯ ನಿಯಮಿತ ಅಧಿಕಾರಿಗಳ ಜೊತೆಗೆ ಶ್ರೀವಾರಿ ಸೇವಕರನ್ನು ವಿಶೇಷವಾಗಿ ನಿಯೋಜಿಸಲಾಗುವುದು. ಗರುಡ ಸೇವಾ ದಿನದಂದು ಗ್ಯಾಲರಿಗಳಲ್ಲಿ ಭಕ್ತರಿಗೆ ೧೪ ಬಗೆಯ ವಸ್ತುಗಳನ್ನು ನೀಡಲಾಗುವುದು. ಮಾತೃಶ್ರೀ ತರಿಗೊಂಡ ವೆಂಗಮಾAಬ ಅನ್ನಪ್ರಸಾದ ಸಂಕೀರ್ಣದಲ್ಲಿ ಪ್ರತಿದಿನ ಬೆಳಿಗ್ಗೆ ೮ ರಿಂದ ರಾತ್ರಿ ೧೧ ರವರೆಗೆ ಭಕ್ತರಿಗೆ ಅನ್ನಪ್ರಸಾದವನ್ನು ನೀಡಲಾಗುವುದು.
ತಿರುಮಲದ ೨೪ ಪಾರ್ಕಿಂಗ್ ಪ್ರದೇಶಗಳಲ್ಲಿ ಸುಮಾರು ೪೦೦೦ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಲಭ್ಯವಿದೆ, ತಿರುಪತಿಯಲ್ಲಿ ೨೦೦೦ ದ್ವಿಚಕ್ರ ವಾಹನಗಳು ಮತ್ತು ೫೦೦ ನಾಲ್ಕು ಚಕ್ರಗಳ ವಾಹನಗಳನ್ನು ಇರಿಸಬಹುದಾದ ಅಲಿಪಿರಿ ಲಿಂಕ್ ಬಸ್ ನಿಲ್ದಾಣ, ೧೦೦೦ ಮತ್ತು ೩೦೦ ಹೊಂದಿರುವ ನೆಹರು ಮುನ್ಸಿಪಲ್ ಮೈದಾನ, ೭೫೦ ಮತ್ತು ೨೫೦ ಹೊಂದಿರುವ ಇಸ್ಕಾನ್ ಮೈದಾನ, ೧೦೦೦ ಮತ್ತು ೧೫೦ ಹೊಂದಿರುವ ಎಸ್‌ವಿ ವೈದ್ಯಕೀಯ ಕಾಲೇಜು ಮೈದಾನ, ಭಾರತೀಯ ವಿದ್ಯಾ ಭವನ ಮೈದಾನ - ಕ್ರಮವಾಗಿ ೫೦೦ (ದ್ವಿಚಕ್ರ ಮತ್ತು ನಾಲ್ಕು ಚಕ್ರಗಳೆರಡೂ), ದೇವಲೋಕ್ ಮತ್ತು ಎಪಿ ಪ್ರವಾಸೋದ್ಯಮದ ಜೊತೆಗೆ ತಲಾ ೫೦೦ ನಾಲ್ಕು ಚಕ್ರಗಳ ವಾಹನಗಳನ್ನು ಇರಿಸಬಹುದಾದ ಮುಕ್ತ ಪ್ರದೇಶವಿದೆ. ಒಟ್ಟು ದ್ವಿಚಕ್ರ ವಾಹನಗಳಿಗೆ ೫೨೫೦ ಮತ್ತು ತಿರುಪತಿಯಲ್ಲಿ ೨೭೦೦ ನಾಲ್ಕು ಚಕ್ರಗಳ ವಾಹನಗಳಿಗೆ ಪಾರ್ಕಿಂಗ್ ಸ್ಥಳ ಲಭ್ಯವಿದೆ ಎಂದು ತಿಳಿಸಿದರು.

ಆರ್ ಟಿ ಸಿ ಬಸ್ ಸೌಲಭ್ಯ:
ತಿರುಮಲಕ್ಕೆ ಭಕ್ತರನ್ನು ಕರೆದೊಯ್ಯಲು ತಿರುಪತಿಯ ಪಾರ್ಕಿಂಗ್ ಸ್ಥಳಗಳಲ್ಲಿ ಆರ್‌ಟಿಸಿ ಬಸ್‌ಗಳು ಲಭ್ಯವಿರುತ್ತವೆ. ಇತರ ದಿನಗಳಲ್ಲಿ ೧೯೦೦ ಟ್ರಿಪ್‌ಗಳು ಮತ್ತು ಗರುಡ ಸೇವಾ ದಿನದಂದು ೩೨೦೦ ಟ್ರಿಪ್‌ಗಳು ಸಂಚರಿಸಲಿವೆ. ವಾರ್ಷಿಕ ಉತ್ಸವದ ಸಮಯದಲ್ಲಿ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ೨೦೦೦ ಟಿಟಿಡಿ ಭದ್ರತೆ ಮತ್ತು ಜಾಗೃತ ದಳ, ಸುಮಾರು ೪೭೦೦ ಪೊಲೀಸರನ್ನು ಸೇವೆಗೆ ನಿಯೋಜಿಸಲಾಗುತ್ತದೆ. ಜೊತೆಗೆ ೩೫೦೦ ಶ್ರೀವಾರಿ ಸೇವಕರು ಮತ್ತು ಟಿಟಿಡಿಯ ೪೫೦ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ೨೪ * ೭ ಕಣ್ಗಾವಲು ನಿರ್ವಹಿಸಲು ತಿರುಮಲದಲ್ಲಿರುವ ಕಮಾಂಡ್ ಕಂಟ್ರೋಲ್ ರೂಮ್‌ಗೆ ೩೦೦೦ ಸಿಸಿ ಕ್ಯಾಮೆರಾಗಳನ್ನು ಸಂಯೋಜಿಸಲಾಗಿದೆ. ವಾರ್ಷಿಕ ಬ್ರಹ್ಮೋತ್ಸವಗಳಿಗಾಗಿ ೨೩೦೦ ನೈರ್ಮಲ್ಯ ಕಾರ್ಮಿಕರ ಜೊತೆಗೆ ಸುಮಾರು ೯೬೦ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ತಿರುಮಲದ ವಿವಿಧ ಕಲ್ಯಾಣಕಟ್ಟೆಗಳಲ್ಲಿ ೧೧೫೦ ಟೋನ್ಸೂರರ್‌ಗಳು ೨೪ * ೭ ಕೆಲಸ ಮಾಡಲಿದ್ದಾರೆ. ಸಾಮಾನ್ಯ ದಿನಗಳಲ್ಲಿ ೩೫ ಸಾವಿರ ಜನರು ಮುಡಿ ಕೊಡುತ್ತಿದ್ದರು. ಬ್ರಹ್ಮೋತ್ಸವ ಸಂದರ್ಭದಲ್ಲಿ ೬೫ ಸಾವಿರಕ್ಕೂ ಹೆಚ್ಚು ಜನರು ಮುಡಿ ಕೊಡಲಿದ್ದಾರೆ. ಇದಕ್ಕಾಗಿ ೧೫೦೦ ಜನ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದರು.
ಬ್ರಹ್ಮೋತ್ಸವಗಳಲ್ಲಿ ೫೦ ವೈದ್ಯರು ಮತ್ತು ೬೦ ಅರೆವೈದ್ಯಕೀಯ ಸಿಬ್ಬಂದಿಗಳು ಮತ್ತು ಒಂದು ಡಜನ್‌ಗೂ ಹೆಚ್ಚು ಆಂಬ್ಯುಲೆನ್ಸ್ ಸೇವೆಗಳು ಸೌಲಭ್ಯ ಒದಗಿಸಲಿವೆ. ೨೮ ರಾಜ್ಯಗಳಿಂದ ಬಂದ ೩೫೦ ಸಾಂಸ್ಕೃತಿಕ ತಂಡಗಳು ಮೊದಲ ಬಾರಿಗೆ ಪ್ರದರ್ಶನ ನೀಡಲಿವೆ ಮತ್ತು ಗರುಡ ಸೇವಾ ದಿನದಂದು ೨೦ ರಾಜ್ಯಗಳಿಂದ ೩೭ ತಂಡಗಳು ತಮ್ಮ ಸಾಂಪ್ರದಾಯಿಕ ಮತ್ತು ಆಧ್ಯಾತ್ಮಿಕ ಕಲಾ ಪ್ರಕಾರಗಳನ್ನು ಪ್ರದರ್ಶಿಸಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟಿಟಿಡಿ ಸದಸ್ಯೆ ಜಯಂತಿ ಇನ್ನಿತರರು ಇದ್ದರು.
ಬೆಳಗಾವಿಯಲ್ಲಿ 100 ಕೋಟಿ ವೆಚ್ಚದಲ್ಲಿ ಟಿಟಿಡಿ ದೇವಸ್ಥಾನ:
ಸೆ.೧೬ರಂದು ನಡೆದ ಟಿಟಿಡಿ ಸಭೆಯಲ್ಲಿ ಬೆಳಗಾವಿ ಬಾಲಾಜಿ ಟ್ರಸ್ಟ್ ವತಿಯಿಂದ ಟಿಟಿಡಿ ದೇವಸ್ಥಾನ ನಿರ್ಮಾಣವಾಗಲಿದೆ. ಇದಕ್ಕಾಗಿ ೧೦೦ ಕೋಟಿ ರೂ.ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಸಾಮಾನ್ಯವಾಗಿ ಎಲ್ಲರಿಗೂ ತಿರುಪತಿ ದರ್ಶನ ದುರ್ಲಭ ಎಂದು ಹೇಳಲಾಗುತ್ತಿದೆ. ಯೋಜನೆ ರೂಪಿಸಿಕೊಂಡು ಬಂದರೆ ತಿರುಪತಿ ದರ್ಶನ ಸಾಧ್ಯ. ಆದರೂ ಗೋವಾ, ಮಹಾರಾಷ್ಟçದ ಕೊಲ್ಲಾಪುರ ಮೊದಲಾದ ಭಕ್ತರಿಗೆ ಅನುಕೂಲವಾಗಲು ಟಿಟಿಡಿ ದೇವಸ್ಥಾನ ನಿರ್ಮಾಣವಾಗಲಿದೆ ಎಂದರು.