ಬಳ್ಳಾರಿ: ನಗರದ ವಾಲ್ಮೀಕಿ ಭವನದಲ್ಲಿ ಬಳ್ಳಾರಿ ಜಿಲ್ಲಾ ಫಿಟ್ನೆಸ್ ಅಸೋಸಿಯೇಷನ್ ನಿಂದ ಜಿ.ಕೆ.ಫೌಂಡೇಶನ್ ಸಹಯೋಗದಲ್ಲಿ ಜ.22 ಮತ್ತು 23 ರಂದು ಕಲ್ಯಾಣ ಕರ್ನಾಟಕ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಮ್ಮಿಕೊಂಡಿದೆ ಎಂದು ಜಿ.ಕೆ.ಫೌಂಡೇಶನ್ ಅಧ್ಯಕ್ಷ ಜಿ.ಕೆ.ಸ್ವಾಮಿ ಹೇಳಿದ್ದಾರೆ.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ಜ. 22 ರಂದ ದೇಹದಾರ್ಢ್ಯ ಮತ್ತು ಮೆನ್ಸ್ ಫಿಜಿಕ್ ಸ್ಪರ್ಧೆ ಪುರುಷರಿಗೆ ಹಮ್ಮಿಕೊಂಡಿದೆ.
ಜ.23 ರಂದು ಮಹಿಳೆಯರು ಮತ್ತು ಪುರುಷರಿಗೆ ಪವರ್ ಲಿಫ್ಟಿಂಗ್ ನ್ನು ಬೆಂಚ್ ಹಾಗು ಡೆಡ್ ಲಿಫ್ಟ್ ಭಾಗದಲ್ಲಿ 55 ಕಿಲೋ ದಿಂದ 75 ಕಿಲೋ ಮೇಲ್ಪಟ್ಟು ನಡೆಯಲಿದೆ.
ಈ ಸ್ಪರ್ಧೆಯಲ್ಲಿ ಕಲ್ಯಾಣ ಕರ್ನಾಟಕದ 380 ಜಿಮ್ ಗಳನ್ನು ಸಂಪರ್ಕಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಶುಲ್ಕ ರೂ 500 ನಿಗಧಿ ಮಾಡಿದೆ, ಅವರಿಗೆ ಊಟ ವಸತಿ, ವ್ಯವಸ್ಥೆ ಮಾಡಲಿದೆ. ಛಾಂಪಿಯನ್ ಗೆ 51 ಸಾವಿರ, ಬಹುಮಾನ ಇದೆ. ದೇಹದಾರ್ಢ್ಯ ಸ್ಪರ್ಧೆಗೆ ಮಾತ್ರ ಐದು ಸ್ಥಾನಕ್ಕೆ ಬಹುಮಾನ ಇದೆ. ಉಳಿದಂತೆ ಮೂರು ಬಹುಮಾನ ನೀಡಲಿದೆಂದು ತಿಳಿಸಿದರು.
ತಮ್ಮ ಸಂಸ್ಥೆಯಿಂದ ಬರುವ ಮಾರ್ಚ್ ನಲ್ಲಿ ಬೃಹತ್ ಆರೋಗ್ಯ ತಪಾಸಣಾ ಮೇಳ ಹಮ್ಮಿಕೊಳ್ಳುವುದಾಗಿಯೂ, ಮುಂಬರುವ ದಿನಗಳಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ಹಮ್ಮಿಕೊಳ್ಳಲಿದೆಂದು ಈ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ರಘು, ಜಾವಿದ್, ಚಾಂದ್, ಕಟ್ಟೇಸ್ವಾಮಿ ಇದ್ದರು.