LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮನೆಗೆ ಬೆಂಕಿ ರೀಲ್ಸ್ ನಿಂದ - ಎಸ್ಪಿ ಹೇಳಿಕೆ ಸಮಂಜಸವಲ್ಲ: ಜನಾರ್ಧನರೆಡ್ಡಿ

ಬಳ್ಳಾರಿ:  ದುಷ್ಕರ್ಮಿಗಳಿಂದ ಜಿ.ಸ್ಕ್ವೇರ್ ನಲ್ಲಿನ ನಮ್ಮ‌ಮನೆಗೆ ಬೆಂಕಿ ಹಚ್ಚಿದ ಘಟನೆ ಆಕಸ್ಮಿಕ, ಯುವಕರು ರೀಲ್ಸ್ ಮಾಡುವಾಗ ಆಗಿದ್ದು ಎಂದು ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಹೇಳಿರುವುದು ಸಮಂಜಸವಲ್ಲ ಎಂದು ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ.ಜನಾರ್ಧನರೆಡ್ಡಿ ಹೇಳಿದ್ದಾರೆ.

ನಗರದಲ್ಲಿ ಇಂದು ತಮ್ಮ‌ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ,  ಪೆಟ್ರೋಲ್ ಬಳಸದೇ ಆ ರೀತಿ ಬೆಂಕಿ ಹತ್ತಲು ಸಾಧ್ಯವಿಲ್ಲ. ಹಲವು ವರ್ಷಗಳಿಂದ ಬೆಂಕಿದ ಮನೆ ಪಾಳುಬಿದ್ದತ್ತು ಎಂದು  ಎಸ್ಪಿ ಅವರು ಹೇಳಿರುವ  ಮಾತು ಸರಿಯಾದುದಲ್ಲ.  ಎಸ್ಪಿ ರವಿಕುಮಾರ್ ಪೊಲೀಸ್ ವೇಶದಲ್ಲಿರುವ ಕ್ರಿಮಿನಲ್ ಆಗಿದ್ದಾರೆ. ರೀಲ್ಸ್ ಎಂಬುದು ಹಾಸ್ಯಾಸ್ಪದ ಎಸ್ಪಿ ಅವರು ಕೆಳ ಹಂತದ ಅಧಿಕಾರಿಗಳ ಮಾತು ಕೇಳಿ ಹಾಗೆ ಹೇಳಿದ್ದಾರೆಂದರು.

ಪೊಲೀಸರು ಹೇಳಿರುವಂತೆ ವೀಡಿಯೋ ಮಾಡಿದ್ದವರು ಬಂಧಿತರೆಂದು ಹೇಳಿಸಿದ್ದಾರೆ. ಆದರೆ ಅದು ವಾಸ್ತವ ಅಲ್ಲ. ಮಾಡಿದವರು ಬೇರೆಯವರು ಅವರು ಓಡಿ ಹೋದವರಾಗಿದ್ದಾರೆ.

ನಾವು ನೀಡಿದ ವಿಡಿಯೋಗಳನ್ನು ಆಧಾರಿಸಿ ಎಂಟು ಜನರನ್ನು ಬಂಧಿಸಿದ್ದಾರೆ ಅಷ್ಟೇ, ಅವರಿಂದ ರೀಲ್ಸ್ ಮಾಡಿದೆ ಎಂದು ಹೇಳಿಸಿದೆಂದರು.

ಬೆಂಕಿ ಹಚ್ಚಿದ್ದು ಭಯದ ವಾತಾವರಣ ಸೃಷ್ಟಿ ಮಾಡುವ ಉದ್ದೇಶವಿದೆ. ಇದಕ್ಕೆ ನಾವು ಹೆದರಲ್ಲ. ಸರ್ಕಾರ ಈ  ವಿಷಯದಲ್ಲಿ ಸರ್ಕಾರ ನಿರ್ಲಕ್ಷ ಧೋರಣೆ ತೋರುತ್ತಿದ್ದರೆ ಕೆಲ ದಿನಗಳಲ್ಲಿ ಮತ್ತೊಂದು ಘಟನೆ ಆದರೂ ಆಶ್ಚರ್ಯಪಡಬೇಕಿಲ್ಲ ಎಂದರು.

ಜ.1 ಘಟನೆ ಸಂಬಂಧ ಸತೀಶ್ ರೆಡ್ಡಿ ಮತ್ತು ಭರತ್ ರೆಡ್ಡಿ ಅವರನ್ನು ಬಂಧಿಸಬೇಕು ಎಂದು ಪುನರುಚ್ಚಿರಿಸಿದ ಅವರು. ಈ ಪ್ರಕರಣ ಮುಚ್ಚಿಹಾಕಲು ಸಿಐಡಿ ನೀಡಿದೆ ಅಷ್ಟೇ ಎಂದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಸಂಸದ  ಸಣ್ಣ ಪಕ್ಕೀರಪ್ಪ, ಪಕ್ಷದ ನಗರ ಅಧ್ಯಕ್ಷ ಜಿ.ವೆಂಕಟರಮಣ, ಡಾ.ಎಸ್.ಜೆ.ವಿ.ಮಹಿಪಾಲ್, ಕೆ.ಎಸ್.ದಿವಾಕರ್ ಮೊದಲಾದವರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST