LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಭೀಕರ ಅಪಘಾತ : ಸ್ಥಳದಲ್ಲೇ ಬೈಕ್ ಸವಾರ ಸಾವು

ಸಿರುಗುಪ್ಪ : ತಾಲೂಕಿನ ಬಾಗೇವಾಡಿ ಗ್ರಾಮದ ಅಂದಾಜು 50 ವರ್ಷದ ಅಯ್ಯಪ್ಪ ಮೃತ ದುರ್ದೈವಿ.

ಪತ್ನಿ ಹಾಗೂ ಮೂರು ಮಕ್ಕಳನ್ನು ಅಗಲಿದ ಮೃತರು ಡಿಶ್ ಅಯ್ಯಪ್ಪ ಎಂದೇ ಚಿರ ಪರಿಚಿತರಾಗಿದ್ದರು. ಸಮಾಜ ಸೇವೆ ಮಾಡುತ್ತಾ ಎಲ್ಲರೊಂದಿಗೆ ಬೆರೆಯುತ್ತಾ ವಿಶ್ವಾಸದಿಂದ ಇರುತ್ತಿದ್ದರು.

ಶನಿವಾರ ರಾತ್ರಿ ಇಬ್ರಾಪುರ ಗ್ರಾಮದ ದೌಲಸಾಬ್ ರೈಸ್‌ಮಿಲ್ ಬಳಿ ಬೈಕಿನಲ್ಲಿ ತೆರಳುವಾಗ ಟ್ರ್ಯಾಕ್ಟರ್ ಯುನಿಕಾರ್ನ್ ದ್ವಿಚಕ್ರಕ್ಕೆ ಬಡಿದು ಆಯತಪ್ಪಿ ಪಕ್ಕದ ಗದ್ದೆಯಲ್ಲಿ ಸಿಕ್ಕಿ ಹಾಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೇಬರವನ್ನು‌ ಜೆಸಿಬಿ ಯಂತ್ರದ ಸಹಾಯದಿಂದ ಹೊರ ತೆಗೆಯಲಾಗಿದೆ. ಟ್ರ್ಯಾಕ್ಟರ್ ವಾಹನ ಇಬ್ರಾಂಪುರ ಗ್ರಾಮದವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ರಾತ್ರಿಯೇ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಕಾನೂನಾತ್ಮಕ ಕ್ರಮಗಳನ್ನು ತೆಗೆದು ಕೊಂಡಿದ್ದಾರೆ. ಶವವನ್ನು ಪರೀಕ್ಷೆಗಾಗಿ ಸಿರುಗುಪ್ಪ ನಗರದ ಆಸ್ಪತ್ರೆಗೆ ತಂದು‌ ಪರೀಕ್ಷೆ‌ ಮಾಡಲಾಗಿದೆ.



ಸಂತಾಪ: ಅಯ್ಯಪ್ಪ ಅವರ ಅಕಾಲಿಕ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ಸಾವು ನನಗೆ ದಿಗ್ಭ್ರಮೆ ಮೂಡಿಸಿದ್ದು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಶಾಸಕ ಬಿ.ಎಂ. ನಾಗರಾಜ ತಿಳಿಸಿದ್ದಾರೆ.

 

ಭಾನುವಾರ ಬೆಳಿಗ್ಗೆ ಬಳ್ಳಾರಿಯ ಹಿರಿಯ ಪೋಲೀಸ್ ಅಧಿಕಾರಿ ಎಸ್.ಪಿ. ಡಾ. ಶೋಭಾರಾಣಿ ಭೇಟಿ ನೀಡಿದ್ದಾರೆ. ಅಪಾರ ಪ್ರಮಾಣದ ಬಂಧು- ಬಳಗ ಮತ್ತು ಸ್ನೇಹಿತರನ್ನು ಮೃತರು ಅಗಲಿದ್ದಾರೆ. ಸಾವಿನ ಸುದ್ದಿ ಕೇಳಿ ಸಾವಿರಾರು ಜನ ಆಸ್ಪತ್ರೆ ಬಳಿಯೂ ನೆರದಿದ್ದರು.

 

ಭಾನುವಾರ ಸಂಜೆ ವೇಳೆಯಲ್ಲಿ ಮೃತರ ಅಂತಿಮ ಕಾರ್ಯಗಳು ಲಿಂಗಾಯತ ಸಂಪ್ರದಾಯದಂತೆ ವಿಧಿ ವಿಧಾನಗಳಂತೆ ಬಾಗೇವಾಡಿ ಗ್ರಾಮದಲ್ಲಿ ‌ನಡೆದವು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ