ನಂತರ 125 ವಿದ್ಯಾರ್ಥಿಗಳು ಭಾರತದ ಪ್ರತಿ ರಾಜ್ಯದ ವೈಶಿಷ್ಟ್ಯ ಪೂರ್ಣ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಆರ್.ಜಿ. ಪ್ರದೀಪ ಭಾಗವಹಿಸಿದ್ದರು.

ಕನಕಪುರ ರಸ್ತೆಯ ಸೋಮನಹಳ್ಳಿಯಲ್ಲಿ ಅನಂತಜ್ಞಾನ ಗಂಗೋತ್ರಿ 8ಕ್ರೀಡಾ ಕ್ಲಬ್ ಗಳನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಆರೋಗ್ಯ ಮತ್ತು ಶಕ್ತಿ ವೃದ್ಧಿಗೆ ಎ.ಪಿ.ಎಸ್ ಜ್ಞಾನ ಗಂಗೋತ್ರಿ ಕ್ಯಾಂಪಸ್ನಲ್ಲಿ ವಿವಿಧ ಕ್ರೀಡಾ ಮತ್ತು ಫಿಟ್ನೆಸ್ ಕ್ಲಬ್ಗಳನ್ನು ಉದ್ಘಾಟಿಸಲಾಯಿತು. ಈಕಾರ್ಯಕ್ರಮದಲ್ಲಿ ಮಾಜಿ ವಿದ್ಯಾರ್ಥಿನಿ, ಯೋಗಪಟು ಅಂಕಿತಾ ಎಂ. ಗೋಪಾಲ್ ಪಾಲ್ಗೊಂಡಿದ್ದರು. ಎಪಿಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಅನಂತಾಚಾರ್ ಅವರಿಗೆ ಗೌರವ ಸಲ್ಲಿಸಲಾಯಿತು.
ನಂತರ ಸಂಜೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಎಪಿಎಸ್ ಪಬ್ಲಿಕ್ ಸ್ಕೂಲ್ ಗೆ ಬೆಂಗಳೂರಿನ ಶ್ರೇಷ್ಠ ಶಾಲೆ [ ಮೋಸ್ಟ್ ಡೈನಾಮಿಕ್ ಸ್ಕೂಲ್ ಆಫ್ ಬೆಂಗಳೂರು ] ಎಂಬ ಪ್ರಶಸ್ಥಿಯನ್ನು ಸಂಸ್ಥೆಯ ಅಧ್ಯಕ್ಷ ಡಾ. ವಿಷ್ಣು ಭರತ್ ಅಲ್ಲಂಪಲ್ಲಿ ಪಡೆದುಕೊಂಡರು.