ಬಳ್ಳಾರಿ ಅಡಿಷನಲ್ ಎಸ್‌ಪಿ ಆಗಿದ್ದ ಕೆ ಪಿ ರವಿಕುಮಾರ್ ಅವರನ್ನು ಬೆಂಗಳೂರಿನ ಇಂಟಲಿಜೆನ್ಸ್ ಇಲಾಖೆಯ ಎಸ್‌ಪಿಯಾಗಿ ವರ್ಗಾಯಿಸಿ ಆದೇಶ ಹೊರಡಿಸಿದೆ.
ಇದೇ ವೇಳೆ, ರವಿಕುಮಾರ್ ಅವರ ಸ್ಥಾನದಲ್ಲಿ ನವೀನ್ ಕುಮಾರ್ ಅವರನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ.

ಈ ಹಿಂದೆ ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣೆ ಕಾರ್ಯಕ್ರಮಕ್ಕೂ ಮುನ್ನ ನಡೆದಿದ್ದ ಗಲಾಟೆ ವಿಚಾರದಲ್ಲಿ ಎಎಸ್ ಪಿ ರವಿಕುಮಾರ್ ಅವರ ಮೇಲೆ ಅನೇಕ ಆರೋಪಗಳು ಕೇಳಿ ಬಂದಿದ್ದವು.