ಕರಡಿ ದಾಳಿ : ಸಂಜೀವರಾಯನಕೋಟೆಯ ರೈತನಿಗೆ ಗಂಭೀರ ಗಾಯ
ಬಳ್ಳಾರಿ : ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದರಿಂದ ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಸಂಜೀವರಾಯನಕೋಟೆ ಗ್ರಾಮದ ಕುಂಬಾರ ಕುಂಟೆಯ ಬಳಿ ಇಂದು ಬೆಳಿಗಿನ ಜಾವ ನಡೆದಿದೆ.
ರಾಜ (55) ಕರಡಿ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿ ಈತನನ್ನು ನಗರದ ಬಿಎಂಅರ್ ಸಿ ಆಸ್ಪತ್ರೆ ಗೆ ದಾಖಲಿಸಿದೆ.
ಬೆಳಿಗ್ಗೆ ಎಂದಿನಂತೆ ಸಾಕು ಕುರಿಗಳಿಗೆ ಸೊಪ್ಪು ತರಲು ಜಮೀನಿಗೆ ತೆರಳುವಾಗ ಏಕಾಏಕಿ ದಾಳಿ ಮಾಡಿರುವ ಕರಡಿ, ವ್ಯಕ್ತಿಯ ಕಚ್ಚಿ ಗಾಯಗೊಳಿಸಿದೆ. ಕಣ್ಣು ದವಡೆ ಮೂಗು ಬಾಯಿ ಮೇಲ್ಪದರ ಸಮೇತ ಕಿತ್ತು ಹೋಗಿದೆ.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.