LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಲ್ಡೋಟಾ ಸಣ್ಣ ಸಸಿ ನೆಟ್ಟು ದೊಡ್ಡ ಜೀವ ತೆಗೆಯುತಿದೆ : ಪ್ರದೀಪ್

ಕೊಪ್ಪಳ: ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯಿಂದ ನಗರಕ್ಕೆ ಸಮೀಪದಲ್ಲಿ 54 ಸಾವಿರ ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡಲು ಮುಂದಾದ ಬಲ್ಡೋಟಾ (ಬಿಎಸ್ಪಿಎಲ್), 3 ಸಾವಿರ ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡಲು ಹೊರಟ ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ ಇಂಡಿಯಾ ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ 44.35 ಎಕರೆ ಕೆರೆ ಸಾರ್ವಜನಿಕರಿಗೆ ಮುಕ್ತವಾಗಿಡಲು ಆಗ್ರಹಿಸಿ, ತುಂಗಭದ್ರಾ ನದಿ ಮಾಲಿನ್ಯ ತಡೆಗಟ್ಟಬೇಕು ಎಂದು ಒತ್ತಾಯಿಸಿ 42 ದಿನಗಳಿಂದ ನಡೆದಿರುವ ಧರಣಿಗೆ ಕೊಪ್ಪಳ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಬೆಂಬಲಿಸಿದರು.

ಕೊವಿವಿ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿ ಪ್ರದೀಪಕುಮಾರ್ ಹದ್ದಣ್ಣವರ್ ಮಾತನಾಡಿ, ನಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಇರುವ ಏಕೈಕ ವೇದಿಕೆ ಈ ಹೋರಾಟವಾಗಿದೆ, ಇದೊಂದು ಸಾಂಕೇತಿಕ ಹೋರಾಟವಾಗಿರದೆ ಜನಸಾಮಾನ್ಯರ ಹೋರಾಟ ಆಗಬೇಕಿದೆ, ನಾವೆಲ್ಲರೂ ಬೆಂಬಲಿಸಬೇಕಿದೆ. ಹಾಗೇನಾದರೂ ಬಲ್ದೋಟ ವಿಸ್ತರಣೆ ಆಗಿ ಹೋರಾಟದಲ್ಲಿ ಸೋತರೆ ಅದು ನಮ್ಮ ಸಾವಿಗೆ ಸಮಾನವಾಗುತ್ತದೆ.

ಬಲ್ಡೋಟಾ ನಗರದಲ್ಲಿ ಸಣ್ಣ ಸಸಿಗಳನ್ನು ನೆಟ್ಟು, ಕೂರಲು ಸಿಮೆಂಟ್ ಸೀಟು ಹಾಕಿಸಿ ದೊಡ್ಡ ಜೀವ ತೆಗೆಯಲು ಮುಂದಾಗಿದೆ. ಅಂತಹ ಆಸೆಗಳಿಗೆ ಈಡಾಗದೇ, ಪರಿಸರ ಉಳಿಸಿಕೊಳ್ಳಲು ಮುಂದೆ ಬಂದು ಬೀದಿಗಿಳಿದು ಹೋರಾಟ ಮಾಡಬೇಕು. ರಾಜಕಾರಣಿಗಳು ಇದೆಲ್ಲವನ್ನು ನುಂಗಿ ನೀರು ಕುಡಿಯುತ್ತೇವೆ ಎನ್ನುವ ದಾವಂತದಲ್ಲಿದ್ದಾರೆ. ನಮ್ಮ ಅಭಿವೃದ್ಧಿ ಕಂಪನಿ ಕೊಡುವ ಉದ್ಯೋಗದಲ್ಲಿ ಇಲ್ಲ ಕಂಪನಿಗಳು ಉದ್ಯೋಗದ ಆಸೆ ಹುಟ್ಟಿಸಿ ಹಿಂಬದಿಯಿಂದ ಚಿತ್ರ ಹಿಂಸೆ ನೀಡಿ ತಂತ್ರಜ್ಞಾನ ಅಳವಡಿಸಿ ಉದ್ಯೋಗಗಳನ್ನು ಕಡಿತ ಮಾಡಿ ಇರುವ ಉದ್ಯೋಗಿಗಳನ್ನು ಹೊರಹಾಕುತ್ತಾರೆ. ಈ ಹೋರಾಟ ಯಶಸ್ವಿಯಾಗುವವರೆಗೆ ಜಿಲ್ಲೆಯ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಜೊತೆಗಿದ್ದು ಹೋರಾಡುತ್ತೇವೆ ಎಂದರು

ಪತ್ರಿಕೋದ್ಯಮದ ವಿದ್ಯಾರ್ಥಿ ಶರಣಪ್ಪ ಆಡಿನ್ ಮಾತನಾಡಿ, ನಮ್ಮ ಹೋರಾಟಗಳನ್ನು ಇಲ್ಲಿನ ರಾಜಕಾರಣಿಗಳು ಕಡೆಗಣಿಸುತ್ತಿದ್ದಾರೆ ಇವರಿಗೆ ನಾವು ಪಾಠ ಕಲಿಸಬೇಕಾಗಿದೆ ಇಷ್ಟೊಂದು ಜನರ ಜೀವಕ್ಕೆ ಮಾರಕವಾಗಿದ್ದರು. ಈ ವಿಚಾರದಲ್ಲಿ ಸರ್ಕಾರದಲ್ಲಾಗಲಿ ವಿಧಾನಸೌಧದಲ್ಲಾಗಲಿ ಏನನ್ನು ಮಾತನಾಡುತ್ತಿಲ್ಲ ನಾವು ಇವರ ಬಗ್ಗೆ ಯಾವುದೇ ಮುಲಾಜಿ ಕಾಯುವುದು ಬೇಡ ಕೂಡಲೇ ಇವರನ್ನು ಪ್ರಶ್ನೆ ಮಾಡಲು ಮುಂದಾಗೋಣ ರಸ್ತೆಯಲ್ಲಿ ನಿಲ್ಲಿಸಿ ಕೇಳೋಣ ಎಂದರು.

ಧರಣಿಯಲ್ಲಿ ನಿವೃತ್ತ ಅಧಿಕಾರಿ ಘಟ್ಟನಗೌಡ ಬಿ. ಪಾಟೀಲ್, ಸಾಹಿತಿ ಈಶ್ವರ ಹತ್ತಿ, ಜಂಟಿ ಕ್ರಿಯಾ ವೇದಿಕೆಯ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನೀವೃತ್ತ ಪ್ರಾಚಾರ್ಯ ಎಸ್.ಬಿ.ರಾಜೂರ, ಕವಿವಿ ವಿದ್ಯಾರ್ಥಿ ಬಸವರಾಜ ಬಡಿಗೇರ್, ರವಿ ಕಾಂತನವರ, ಕಾಶಿಂ ನಾಗೇಶನಹಳ್ಳಿ, ವೀರಣ್ಣ ಪಲ್ಲೇದ್,  ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ವೀರಪ್ಪ ಹೊಸಮನಿ ಹಾಲವರ್ತಿ, ಯಶೋದ ಗಡ್ಡೇರ್, ಉಮೇಶ ಗಣಪಾ, ಹನುಮಂತಪ್ಪ ಗೊಂದಿ, ನಾಗರಾಜ್ ಜೋಶಿ, ಭೀಮಪ್ಪ ಯಲಬುರ್ಗಿ, ಮಂಗಳೇಶ ರಾಠೋಡ್, ಪಂಪಣ್ಣ ಗಿಣಿಗೇರಿ, ಎ.ಎಂ.ಮದರಿ, ಬಸವರಾಜ ಶೀಲವಂತರ, ಮಹಾದೇವಪ್ಪ ಮಾವಿನಮಡು, ಮಖ್ಬೂಲ್ ರಾಯಚೂರು, ಶಿವಪ್ಪ ಹಡಪದ, ಶರಣು ಗಡ್ಡಿ, ಬಸವರಾಜ ನರೇಗಲ್ ಪಾಲ್ಗೊಂಡರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST