
ಆಡಳಿತ ವೈದ್ಯ ಅಧಿಕಾರಿಗಳಾದ ಡಾ.ಭಾರತಿ ರವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಖುರ್ಷಿದ್ ಬೇಗಮ್ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಯನ್ನು ತಿಳಿಸಿದರು.
1987 ಜುಲೈ 11ರಂದು ವಿಶ್ವದ ಜನಸಂಖ್ಯೆ ಐದು ಬಿಲಿಯನ್ ದಾಟಿರುವ ಪ್ರಯುಕ್ತ ಜನಸಂಖ್ಯಾ ಹೆಚ್ಚಳದಿಂದ ಆಗುವ ಅಂತಹ ಅದೃಷ್ಟ ಪರಿಣಾಮಗಳ ಕುರಿತು ಇಂದಿನಿಂದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಯಿತು ಎಂದು ಪ್ರಾಸ್ತವಿಕ ನುಡಿಯಲ್ಲಿ ತಿಳಿಸಿದರು.

ಡಾ.ಭಾರತಿ ಮಾತನಾಡಿ, ಅಧಿಕ ಜನಸಂಖ್ಯೆಯಿಂದ ಆಗುವ ಸಾಮಾಜಿಕ ತೊಂದರೆ ಹಾಗು ಕೌಟುಂಬಿಕ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಅಂತರ ವಿಧಾನಗಳನ್ನು ಅನುಸರಿಸಲು ತಿಳಿಸಿದರು.
ನಂತರ ಪ್ರಸೂತಿ ತಜ್ಞ ವೈದ್ಯರಾದ ಡಾ.ವಿಜಯಲಕ್ಷಿ ರವರು ಅಂತರ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ವೈದ್ಯರಾದ ಡಾ ರೂಪ, ದಂತ ವೈದ್ಯರಾದ ಡಾ ಆಶಾ ದೇವಿ, ಮತ್ತು ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಬಸವರಾಜ್, ಆಸ್ಪತ್ರೆ ವಿವಿಧ ವೃಂದದ ಸಿಬ್ಬಂದಿ ಹಾಗು ಸಾರ್ವಜನಿಕರು ಉಪಸ್ಥಿತರಿದ್ದರು.