
ಹತ್ತಿರದ ನೊರೆ ದರ್ಗಾದಲ್ಲಿ ಧ್ವನಿವರ್ಧಕ ಮೂಲಕ ಡೆಂಗ್ಯೂ ಜ್ವರ ಕುರಿತು ಜಾಗೃತಿ ಮೂಡಿಸಿ ಮಡ್ಡಿಪೇಟೆ ಸಾರ್ವಜನಿಕರಲ್ಲಿ ಡೆಂಗ್ಯೂ ಜ್ವರ ಕುರಿತು ಭಯ ಬೇಡ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ತಿಳಿಸದರು. ಸ್ಥಳೀಯ ಇಖ್ರಾ ಶಾಲೆಯಲ್ಲಿ ಎಮ್.ಟಿ.ಎಸ್. ಸಂಧ್ಯಾ ಮಾತನಾಡಿ ಡೆಂಗ್ಯೂ ಜ್ವರ, ಲಾರ್ವ ಮುಕ್ತ ಶಾಲೆ ಅಭಿಯಾನ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸ್ಸಯ್ಯ, ಮುಖ್ಯ ಗುರುಗಳಾದ ಖಮ್ರುನ್ನಿಸಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ. ಕೆ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಂಜುಳಾ, ಆಶಾ ಕಾರ್ಯಕರ್ತೆಯರಾದ ಲಕ್ಮಿ, ಸುನೀತ ಇದ್ದರು.