ಚಿತ್ರದುರ್ಗ: ಜಿಲ್ಲೆಯ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಸಹ ನಿರ್ದೇಶಕರು ಹಾಗೂ ಪ್ರಾಂಶುಪಾಲರಾಗಿ ಎ.ಹನುಮಕ್ಕ ಅವರು ನೇಮಕ ಹೊಂದಿದ್ದಾರೆ. ಹಾಗಾಗಿ ಬಳ್ಳಾರಿ ಜಿಲ್ಲೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ 2010-2012ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಅವರಿಗೆ ಶಾಲು ಹಾಕಿ, ಹೂವಿನ ಗುಚ್ಛವನ್ನು ನೀಡಿ ಗೌರವಿಸಿ, ಸನ್ಮಾನಿಸಿದರು.
ಹಾಗೇ 14 ಸೆಪ್ಟೆಂಬರ್ 2025, ಭಾನುವಾರ ನಡೆಯುವ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನ ಮಾಡಲಾಯಿತು.
ಈ ಸಮಯದಲ್ಲಿ ಹಳೆಯ ವಿದ್ಯಾರ್ಥಿಗಳಾದ ಗ್ರಾಮ ಲೆಕ್ಕಾಧಿಕಾರಿ ಜಯರಾಮ್, ಟ್ರಾಫಿಕ್ ಇನ್ಸ್ಪೆಕ್ಟರ್ ಪಲ್ಲವಿ, ಶಿಕ್ಷಕಿ ಬಿಂದುಶ್ರೀ, ಪತ್ರಕರ್ತರು ಹಾಗೂ ಉಪನ್ಯಾಸಕ ಗಿರೀಶ್ ಕುಮಾರ್ ಗೌಡ ಬಳ್ಳಾರಿ ಹಾಜರಿದ್ದರು.