ಕೈವಲ್ಯಾಪುರ ಅರ್ಚಕರಾದ ಅನಂತ ಪದ್ಮನಾಭ, ರಂಗರಾಜ, ವೇಣುಗೋಪಾಲ, ಮರಿಯಮ್ಮನಹಳ್ಳಿಯ ಅರ್ಚಕ ಪ್ರಸಾದ್ ಕಲ್ಯಾಣೋತ್ಸವ ನೇತೃತ್ವವಹಿಸಿದ್ದರು. ಪಟ್ಟಣದ ಭೀಮರಾಜ ಶೆಟ್ಟಿ ಇವರ ಮನೆಗೆ ಶ್ರೀನಿವಾಸರನ್ನು ಕರೆತಂದು ವರಪೂಜೆ ಕಾರ್ಯಕ್ರಮ ನಡೆಸಲಾಯಿತು.

ನಂತರ ವಾದ್ಯ ಮೇಳಗಳೊಂದಿಗೆ ಶ್ರೀವಾರಿಯನ್ನು ದೇವಸ್ಥಾನಕ್ಕೆ ಕರೆ ತಂದು ಕಲ್ಯಾಣೋತ್ಸವ ನೆರವೇರಿಸಲಾಯಿತು. ನಂತರ ಮಹಾಮಂಗಳಾರತಿ, ತೀರ್ಥ, ಪ್ರಸಾದ ಸೇವೆ ಜರುಗಿತು. ಮರಿಯಮ್ಮನಹಳ್ಳಿ ಆರ್ಯವೈಶ್ಯ ಸಮಾಜದ ಪದಾಧಿಕಾರಿಗಳು ಹಾಗೂ ಸಮಾಜದ ಸರ್ವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.