LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಅರುಣಾ ಅತ್ಯಾಚಾರ ಪ್ರಕರಣ : ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

ಬಳ್ಳಾರಿ: ಕೊಪ್ಪಳ ಜಿಲ್ಲೆಯ ಹೊಸಬಂಡಿ ಹರ್ಲಾಪುರ ಗ್ರಾಮದ ನಾಗಪ್ಪ ಮತ್ತು ರೇಣುಕಮ್ಮ ದಂಪತಿಗಳ ಪುತ್ರಿ ೧೪ ವರ್ಷದ ಕುಮಾರಿ ಅರುಣಾ ಎನ್ನುವ ಬಾಲಕಿಯ ಮೇಲೆ ಮೃಗೀಯವಾಗಿ ಎರಗಿ ಅತ್ಯಾಚಾರ ನಡೆಸಿದ್ದಲ್ಲದೇ, ಅತ್ಯಂತ ಕ್ರೂರವಾಗಿ ಹತ್ಯೆಗೈದ ದುಷ್ಕರ್ಮಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ರಾಜ್ಯ ಎಸ್.ಸಿ., ಎಸ್.ಟಿ., ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಸರ್ಕಾರವನ್ನು ಒತ್ತಾಯಿಸಲಾಗಿದೆ.

 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಸಂಘಟನೆಗಳ ಮಹಾ ಒಕ್ಕೂಟದ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಈ ಕುರಿತು ಪ್ರತಿಭಟನಾ ಧರಣಿ ನಡೆಸಿ, ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ರವಾನಿಸಿ ಹತ್ಯೆಯಾದ ಬಾಲಕಿಯ ನೊಂದ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.



ಮಹಾಸಭಾದ ಜಿಲ್ಲಾ ಅಧ್ಯಕ್ಷ ಶಿವಕುಮಾರ ವೈ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ರಂಗಯ್ಯ ಇವರ ನೇತೃತ್ವದ ನಿಯೋಗದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತ,

ಕೊಪ್ಪಳ ಜಿಲ್ಲೆ ಹೊಸಬಂಡಿ ಹರ್ಲಾಪುರ ಗ್ರಾಮಕ್ಕೆ ಸೇರಿದ ನಾಗಪ್ಪ ಮತ್ತು ರೇಣುಕಮ್ಮ ದಂಪತಿಗಳು ಜೀವನೋಪಾಯಕ್ಕೆಂದು ಬೆಂಗಳೂರು ಮಾಗಡಿ ರಸ್ತೆಯ ತಾವರಕೆರೆಯಲ್ಲಿ ಗಾರೆ ಕೆಲಸದ ಕೂಲಿಗಾಗಿ ಹೋಗಿದ್ದರು. ದಂಪತಿಗಳಿಗೆ ನಾಲ್ಕುಜನ ಮಕ್ಕಳಿದ್ದು, ಮೊದಲನೇ ಮಗ ಸಂಪೂರ್ಣ ವಿಕಲಚೇತನನಾಗಿದ್ದಾನೆ. ಎರಡನೇ ಮಗ ಕಿರಾಣಿ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದಾನೆ. ಮೂರನೇ ಮಗಳೇ ಹತ್ಯೆಯಾಗಿರುವ ಅರುಣಾ. ಕಿರಿಯ ಮಗ ಸಹ ಇರುತ್ತಾನೆ. ನಾಗಪ್ಪ ಮತ್ತು ರೇಣುಕಮ್ಮ ಇವರು ಕಡುಬಡವರಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಮಕ್ಕಳನ್ನು ಓದಿಸಲು ಸಹ ಶಕ್ತಿ ಇಲ್ಲದಂತಹ ಪರಿಸ್ಥಿತಿಯಲ್ಲಿದ್ದಾರೆ. ಕೆಲಸ ತೊರೆದು ಹಾಸ್ಟೆಲ್‌ಗಳಿಗೆ ಸೇರಿಸಲು ಸಹ ಪ್ರಯತ್ನಿಸುತ್ತಿದ್ದಾರೆ. ಆದರೆ ಸೀಟ್‌ಗಳ ಲಭ್ಯತೆ ಇಲ್ಲದ ಕಾರಣ ವಿಚಾರಿಸಿ ಸುಮ್ಮನಾಗಿರುತ್ತಾರೆ. ಇದರಿಂದ ತುಂಬಾ ನೊಂದಿದ್ದಾರೆ. ಮಕ್ಕಳ ಪೋಷಣೆಗೆ ಹೊಟ್ಟೆಪಾಡಿಗಾಗಿ ಗಾರೆ ಕೆಲಸಕ್ಕೆ ಹೋಗಿದ್ದರು. ಅರುಣಾಳನ್ನು ಮನೆಯಲ್ಲಿ ಬಂಟಿಯಾಗಿರುವುದನ್ನು ಖಾತ್ರಿ ಪಡಿಸಿಕೊಂಡ ದುಷ್ಕರ್ಮಿಗಳು ಟಿ.ವಿ ನೋಡುತ್ತಿದ್ದ ವೇಳೆ ಬಾಲಕಿಗೆ ಲೈಂಗಿಕ ಹಿಂಸೆ, ಅತ್ಯಾಚಾರ ನಡೆಸಿ ಮಾರಕಾಸ್ತ್ರಗಳಿಂದ ಹಲ್ಲೆಮಾಡಿ ದಾರುಣವಾಗಿ ಕೊಲೆ ಮಾಡಿದ್ದಾರೆ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.

 

ಪೊಲೀಸರು ಆರೋಪಿಯನ್ನು ಬಂಧಿಸಿರುವುದೇನೋ ಸರಿ. ಅರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅಥವಾ ಹೆಚ್ಚಿನ ಪ್ರಮಾಣ ಶಿಕ್ಷೆಯನ್ನು ವಿಧಿಸಿ ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಹೆಣ್ಣು ಮಕ್ಕಳನ್ನು ಮುಟ್ಟಲು ಸಹ ಹೆದರಿಕೊಳ್ಳಬೇಕು. ಅಂತಹ ಶಿಕ್ಷೆ ದುಷ್ಕರ್ಮಿಗಳಿಗೆ ನೀಡಬೇಕೆಂದು ವಿನಂತಿಸಿದ್ದಾರೆ. ನಾಗಪ್ಪ ಮತ್ತು ರೇಣುಕಮ್ಮ ಶಿಕ್ಷಣ ವಂಚಿತ ಕುಟುಂಬವು ಬಡವರು, ನಿರ್ಗತಿಕರು, ಅಲೆಮಾರಿ ಸಮುದಾಯಕ್ಕೆ ಸೇರಿದ ಪರಿಶಿಷ್ಟ ಜಾತಿ ಸಿಳ್ಳೇಕ್ಯಾತರಾಗಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಸಹ ಶ್ರಮಿಸುತ್ತಿರುವ ಕುಟುಂಬವಾಗಿದೆ. ಮೃತಳ ಕುಟುಂಬಕ್ಕೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಕೇಂದ್ರ ಸರ್ಕಾರದ ನಿರ್ಭಯ ಪರಿಹಾರ ನಿಧಿಯಿಂದ ಮತ್ತು ಕರ್ನಾಟಕ ಸರ್ಕಾರದಿಂದ ದೌರ್ಜನ್ಯ ಕಾಯ್ದೆಯಡಿಯಲ್ಲಿ ಗರಿಷ್ಠ ಪರಿಹಾರ, ಕುಟುಂಬಕ್ಕೆ ಪಿಂಚಣಿ ಹಾಗೂ ಮೃತಳ ಕುಟುಂಬಕ್ಕೆ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ನೆರವಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಮಸ್ತ ಪ್ರಗತಿಪರ ಮತ್ತು ಅಲೆಮಾರಿ ಸಂಘಟನೆಗಳು ಮತ್ತು ಸಿಳ್ಳೇಕ್ಯಾತಾಸ್ ಸಮುದಾಯದ ಮುಖಂಡರ ಒತ್ತಾಯಿಸಿದ್ದಾರೆ.

 

ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಸುಬ್ಬಣ್ಣ, ಉಪಾಧ್ಯಕ್ಷ ಬಿ.ರಾಮಯ್ಯ, ಕಾರ್ಯಧ್ಯಕ್ಷ ರಾಮಾಂಜಿನಿ, ಜಿಲ್ಲಾ ಖಜಾಂಚಿ ಕೆ. ಚನ್ನಬಸಪ್ಪ, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ಜಿಲ್ಲಾ ಜಂಟಿ ಕಾರ್ಯದರ್ಶಿ ಶೈಲಾ ಸೀತಾರಾಮ್ ಇತರೆ ಸಂಘಟನೆಗಳ ಪದಾಧಿಕಾರಿಗಳಾದ ಡಿ.ಮುನಿಸ್ವಾಮಿ, ಮಹೇಶ್, ಡಿ.ಲಕ್ಷö್ಮಣ, ಶಂಕರ ಇನ್ನಿತರರು ಇದ್ದರು. 

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ