LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಲೆಗೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ ಕಲಾವಿದೆ ಹನುಮಕ್ಕ ನಿಧನ.

ಮರಿಯಮ್ಮನಹಳ್ಳಿ : ನಾಟಕ ಅಕಾಡೆಮಿ ಸೇರಿ ಹತ್ತಾರು ಪ್ರಶಸ್ತಿ ಪಡೆದು ಬಣ್ಣದ ಲೋಕವನ್ನು ಬಿಟ್ಟು ಹಿರಿಯ ರಂಗ ಕಲಾವಿದೆ ಹಾಗೂ ಚಲನಚಿತ್ರ ನಟಿ ಡಿ.ಹನುಮಕ್ಕ  (58) ನಿಧನರಾದರು.  ಮರಿಯಮ್ಮನಹಳ್ಳಿ ಕಲಾವಿದೆ ಕಲೆಗೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದು ಇವರು ಅವಿವಾಹಿತೆಯಾಗಿದ್ದರು. ರಾಜ್ಯದ್ಯಂತ ಹೆಸರಾಂತ ಕಲಾವಿದೆ ಹನುಮಕ್ಕ ಇವರು ತೀರ್ವ ಅನಾ ರೋಗ್ಯದಿಂದ ಬಳಲುತ್ತಿದ್ದರು. ಮಿದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇವರು, ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಎರಡು ತಿಂಗಳಿಂದ ಕೋಮಾ ಸ್ಥಿತಿಯಲ್ಲಿದ್ದರು. ಸಹಜಸ್ಥಿತಿಗೆ ಬರಲು ಸಾಧ್ಯವಾಗದೆ ಕೊಪ್ಪಳ ಜಿಲ್ಲೆಯ, ಯಲಬುರ್ಗಾ ತಾಲ್ಲೂಕಿನ, ಇರ್ಕಲ್ ಗಡದಲ್ಲಿದ್ದ ಅವರ ಸಹೋದರಿ ಮನೆಯಲ್ಲಿ ಶುಕ್ರವಾರ ವಿಧಿವಶರಾಗಿದ್ದಾರೆ. ಪಾರ್ಥಿವ ಶರೀರವನ್ನು ಮರಿಯಮ್ಮನಹಳ್ಳಿ ನಿವಾಸಕ್ಕೆ ತಂದು ಪಟ್ಟಣದ ಸಾರ್ವಜನಿಕ ರುದ್ರಭೂಮಿಯಲ್ಲಿ ಸಂಜೆ ಅಂತ್ಯಸಂಸ್ಕಾರ ನಡೆಯಿತು.



ಮರಿಯಮ್ಮನಹಳ್ಳಿ ಡಿ.ದುರ್ಗಾದಾಸ ತಾಯಿ ಡಿ. ಪಾರ್ವತಮ್ಮ ಕಿರಿಯ ಮಗಳು ಡಿ. ಹನುಮಕ್ಕ. 17.11.1967ರಲ್ಲಿ ಮರಿಯಮ್ಮನಹಳ್ಳಿಯಲ್ಲಿ ಜನಿಸಿದ್ದರು. ಇವರ  ಮರಿಯಮ್ಮನಹಳ್ಳಿಯಲ್ಲಿಯೇ 9ನೇ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿದ್ದರು ನಂತರ ತಂದೆಯ ಬಣ್ಣದ ಲೋಕದ ಕಡೆ ಕಾಲಿಟ್ಟಳು. ತಂದೆ ಕನ್ನಡ ವೃತ್ತಿ ರಂಗಭೂಮಿಯ ಖ್ಯಾತ ಕಲಾವಿದ ದುರ್ಗಾದಾಸ ಅವರ ಐದನೇ ಮಗಳಾಗಿದ್ದ ಹನುಮಕ್ಕ ರಂಗಭೂಮಿಯಲ್ಲಿ ತಂದೆಯ ಜಾಡಿನಲ್ಲೇ ದಿಟ್ಟ ಹೆಜ್ಜೆಯನಿಟ್ಟು ಸಾಧನೆಯ ಗುರಿ ತಲುಪಿದ್ದರು. ಇವರು

ಹನುಮಕ್ಕ 1994ರಲ್ಲಿ ನೀನಾಸಂ ಸೇರಿ ಡಿಪ್ಲೊಮಾ ಇನ್ ಡ್ರಾಮಾ ಪದವಿ ಪಡೆದರು. 'ತುಘಲಕ್', 'ಅಗ್ನಿ ಮತ್ತು ಮಳೆ', 'ಬೆರಳೆ ಕೊರಳ್', 'ನಾಗಮಂಡಲ', ದ್ರೋಣಾಚಾರ್ಯ 'ಚಿರಬಂದವಾಡ', 'ಸ್ಮಶಾನ ಕುರುಕ್ಷೇತ್ರ', 'ಚಾಳೇಶ', 'ಜೋಕುಮಾರಸ್ವಾಮಿ', 'ಬೇಲಿ ಮತ್ತು ಹೊಲ', 'ಶರೀಫ', 'ಒಡಲಾಳ', 'ಸೂರ್ಯಶಿಕಾರಿ' ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ವಸ್ತ್ರವಿನ್ಯಾಸ, ರಂಗನಿರ್ವಹಣೆಯಲ್ಲೂ ನಿಷ್ಣಾತ ರಾಗಿದ್ದರು. 'ಫೈಲ್ ನಂ.11' ಎಂಬ ನಾಟಕ ನಿರ್ದೇಶಿಸಿದ್ದರು. ಹೀಗೆ 60ಕ್ಕೂ ವೈವಿಧ್ಯಮಯ ನಾಟಕಗಳಲ್ಲಿ ವಿಭಿನ್ನ ಪಾತ್ರಗಳನ್ನು ಅಭಿನಯಿಸಿ ಹೆಸರಾದ ಹನುಮಕ್ಕ ತನ್ನ ರಂಗಕಲಾ ಸೇವೆಯ ಮರಿಯಮ್ಮನಹಳ್ಳಿಯ ಹೆಸರನ್ನು ನಾಡಿನುದ್ದಕ್ಕೂ ಬೆಳಗಿಸಿದ್ದರು.

ಹನುಮಕ್ಕನೀನಾಸಂ ಪದವೀಧರೆಯಾಗಿ ಊರಲ್ಲಿ ನೆಲೆ ನಿಲ್ಲದೇ ಬಣ್ಣದ ಬಂಡಿಯ ನೊಗಹೊತ್ತು ಸಂಚರಿಸಿದಳು.

 

ವಿವಿಧ ತಂಡಗಳಲ್ಲಿ ಅಭಿನಯ: ರಾಜ್ಯದ ಅತ್ಯುತ್ತಮ ತಂಡಗಳಾದ ನೀನಾಸಂ, ಶಿವ ಸಂಚಾರ, ರಂಗ ನಿರಂತರ, ಶಿವ ರಂಗ, ರಂಗ ಸುಗ್ಗಿ ಟ್ರಸ್ಟ್, ರೂಪಾಂತರ, ರಂಗ ಮಂಟಪ, ಕನ್ನಡ ಕಲಾ ಸಂಘ, ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ, ರಂಗ ಬುಗುಡಿದಂಗಳ, ರಂಗ ಪರಂಪರೆ ಟ್ರಸ್ಟ್ ನಂತಹ ತಂಡಗಳೊಡಗೂಡಿ ರಾಜ್ಯ ಮತ್ತು ಹೊರ ರಾಜ್ಯದಲ್ಲೂ ನಾಟಕಗಳ ಪ್ರದರ್ಶನ ನೀಡಿದ್ದು ಎಲ್ಲಾ ಪಾತ್ರಗಳಲ್ಲೂ ಅಮೋಘ ಪ್ರತಿಭೆ ಚಿಮ್ಮಿಸಿದ್ದಾರೆ.

 

ಚಲನಚಿತ್ರದ ನಂಟು:  ಡಿ.ಹನುಮಕ್ಕ ಅವರ ನಾಟಕವೊಂದರಲ್ಲಿ ಅಭಿನಯದ  ಝಲಕ್.  ಅವರು, ಪ್ರೊ.ಸಮತಾ ಬಿ.ದೇಶಮಾನೆ ಅವರ ಆತ್ಮಕಥೆ ಆಧರಿಸಿದ 'ಮಾತಂಗಿ ದೀವಟಿಗೆ' ಚಲನಚಿತ್ರ (2022), ಮಿಥಿಲೇಶ್ ಅವರ ನಿರ್ದೇಶನದ '' (2024), . ವೀರಭದ್ರಪ್ಪ ಅವರ ಕಥೆಯಾಧರಿತ 'ಕುಬುಸ' (2024) ಚಲನಚಿತ್ರದಲ್ಲಿ ನಟಿಸಿ, ಗಮನಸೆಳೆದಿದ್ದಾರೆ. ಕಲಾರಸಿಕರ



ಪ್ರಶಸ್ತಿ, ಪುರಸ್ಕಾರ:  2017ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಮುಂಬಯಿ ಕನ್ನಡ ಸಂಘ ಹಾಗೂ ರಾಜ್ಯ ನಾಟಕ ಸ್ಪರ್ಧೆಯಲ್ಲಿ ತಲಾ ಎರಡು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ, ಕನ್ನಡ ಕಲಾ ಸಂಘದ ಟಿ.ಪಿ.ಕೈಲಾಸಂ ಪ್ರಶಸ್ತಿ, ಕೊಟ್ಟೂರು ಮತ್ತು ಕೂಡ್ಲಿಗಿಯಲ್ಲಿರಂಗ ಗೌರವ, 2023ನೇ ಸಾಲಿನ ಜೋಳದರಾಶಿ ದೊಡ್ಡನಗೌಡ ರಂಗತೋರಣ ಸೇರಿದಂತೆ ಹಲವಾರು ಗೌರವ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದರು.

 

ಸಂತಾಪ: ಹಿರಿಯ ಕಲಾವಿದೆ ಹನುಮಕ್ಕರಿಗೆ ಪದ್ಮಶ್ರೀ ಮಂಜುಮ್ಮ ಜೋಗತಿ, ಹಿರಿಯ ಕಲಾವಿದೆ ಡಾ. ಕೆ.ನಾಗರತ್ನಮ್ಮ, ನೀನಾಸಂ ಕಲಾವಿದ ಬಿಎಂಎಸ್ ಪ್ರಭು, ಲಲಿತಾ ಕಲಾರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ ಸೇರಿದಂತೆ ಪಟ್ಟಣದ ಎಲ್ಲಾ ಕಲಾವಿದರು ಹಾಗೂ ಅಪಾರ ಕಲಾವಿದರು ಕಂಬಿನಿ ಮಿಡಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST