LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಕೃತಕ ಬುದ್ಧಿಮತ್ತೆ ತರಬೇತಿ ಕಾರ್ಯಕ್ರಮ

ಬೆಂಗಳೂರು: ರಾಜಾಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ಸಮಿತಿಯು `ಮಹಿಳೆಯರು ಮತ್ತು ಕೃತಕ ಬುದ್ಧಿಮತ್ತೆ' ವಿಷಯ ಕುರಿತ ಪ್ರಮಾಣಪತ್ರ ಕೋರ್ಸ್ಗೆ ಚಾಲನೆ ನೀಡಲಾಯಿತು.

 

ಈ ಕಾರ್ಯಕ್ರಮವನ್ನು ಕಾಲೇಜು ಶಿಕ್ಷಣ ಇಲಾಖೆ ಪ್ರಾರಂಭಿಸಿದ್ದು, ಡೆಲ್ ಟೆಕ್ನಾಲಜಿ ಅವರು ಪ್ರಾಯೋಜನೆಯೊಂದಿಗೆ ಲರ್ನಿಂಗ್ ಲಿಂಕ್ ಫೌಂಡೇಶನ್ ತರಬೇತಿ ನೀಡುತ್ತಿದೆ.

ಇದರ ಉದ್ದೇಶ ಮಹಿಳೆಯರಿಗೆ ಉದಯೋನ್ಮುಖ ತಂತ್ರಜ್ಞಾನಗಳ, ವಿಶೇಷವಾಗಿ `ಕೃತಕ ಬುದ್ಧಿಮತ್ತೆ' ಕ್ಷೇತ್ರದಲ್ಲಿ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವುದು ಹಾಗೂ ಡಿಜಿಟಲ್ ಭವಿಷ್ಯ ರೂಪಿಸುವಲ್ಲಿ ಮಹಿಳೆಯರ ಪಾತ್ರದ ಕುರಿತು ಜಾಗೃತಿ ಮೂಡಿಸುವುದಾಗಿದೆ. ತರಬೇತಿ ಕಾರ್ಯಕ್ರಮದ  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ  ಯತೀಶ್ ಎಸ್ ಅವರು ಇಂದಿನ ಜಗತ್ತಿನಲ್ಲಿ `ಕೃತಕ ಬುದ್ಧಿಮತ್ತೆ' ಯ ಮಹತ್ವವನ್ನು ವಿವರಿಸಿ, ಮಹಿಳೆಯರು ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೊಡುಗೆ ನೀಡಲು ಇರುವ ಅವಕಾಶಗಳನ್ನು ಎತ್ತಿ ತೋರಿಸಿದರು. ಅಲ್ಲದೆ, ಅವರು ಭಾಗವಹಿಸಿದವರನ್ನು ಎ-ಐ ಕೇವಲ ತಾಂತ್ರಿಕ ವಿಷಯವಾಗಿ ಅಲ್ಲ, ಸಮಾಜ ಪರಿವರ್ತನೆ ಮತ್ತು ಸಬಲೀಕರಣದ ಸಾಧನವಾಗಿ ನೋಡುವಂತೆ ಪ್ರೇರೇಪಿಸಿದರು.

 

ಕೃತಕ ಬುದ್ಧಿಮತ್ತೆ  ಎನ್ನುವುದು ಕಂಪ್ಯೂಟರ್ ಸೈನ್ಸ್ನ ಒಂದು ಶಾಖೆಯಾಗಿದ್ದು, ಇದು ಮಾನವರಂತೆ ಯೋಚಿಸಲು, ಕಲಿಯಲು ಮತ್ತು ತೀರ್ಮಾನ ಕೈಗೊಳ್ಳಲು ಯಂತ್ರಗಳನ್ನು ಅಥವಾ ವ್ಯವಸ್ಥೆಗಳನ್ನು ಸೃಷ್ಟಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಸರಳವಾಗಿ ಹೇಳುವುದಾದರೆ, ಸಾಮಾನ್ಯವಾಗಿ ಮಾನವ ಬುದ್ಧಿಮತ್ತೆಗೆ ಬೇಕಾಗುವ ಕಾರ್ಯಗಳನ್ನು ಕಂಪ್ಯೂಟರ್‌ಗಳು ಅಥವಾ ಸಾಫ್ಟ್ವೇರ್ ಮೂಲಕ ನೆರವೇರಿಸುವಂತೆ ವಿನ್ಯಾಸಗೊಳಿಸುವುದೇ ಎಐ ಎಂದರು.

 

ಉದ್ಘಾಟನಾ ಕಾರ್ಯಕ್ರಮದ ನಂತರ ನಡೆದ ಪ್ರವೇಶಾತಿ ಅಧಿವೇಶನದಲ್ಲಿ, ಪಠ್ಯಕ್ರಮದ ರೂಪುರೇಷೆ, ಉದ್ದೇಶಗಳು ಮತ್ತು ಕಲಿಕೆ ಫಲಿತಾಂಶಗಳ ಕುರಿತು ಸಮಗ್ರ ಅವಲೋಕನ ನೀಡಲಾಯಿತು. ವಿಶೇಷವಾಗಿ ಎ-ಐ ತಾಂತ್ರಿಕ ಜ್ಞಾನ ಹಾಗೂ ನೈತಿಕ ದೃಷ್ಟಿಕೋನ ಗಳನ್ನು ಅಭಿವೃದ್ಧಿಪಡಿಸುವತ್ತ ಒತ್ತು ನೀಡಲಾಯಿತು.



ಪ್ರಾಚಾರ್ಯರಾದ ಮೆಜರ್ ಡಾ. ವನಜಾಕ್ಷಿ ಆರ್ ಹಳ್ಳಿಯವರ ಅವರು ಎ ಐ ಯ ಪ್ರಾಮುಖ್ಯತೆ, ವಿವಿಧ ಕ್ಷೇತ್ರಗಳಲ್ಲಿ ಅದರ ಪ್ರಸ್ತುತತೆ, ಉದ್ಯೋಗಾವಕಾಶಗಳು ಮತ್ತು ಮಹಿಳೆಯರು ತಂತ್ರಜ್ಞಾನ ಆಧಾರಿತ ನವೀನತೆಯಲ್ಲಿ ಪಾಲ್ಗೊಳ್ಳುವ ಅಗತ್ಯತೆ ಕುರಿತು ಮಾರ್ಗದರ್ಶನ ನೀಡಿದರು.

 

ಮಹಿಳೆಯರು ಮತ್ತು ಕೃತಕ ಬುದ್ಧಿಮತ್ತೆ ಪ್ರಮಾಣಪತ್ರ ಕೋರ್ಸ್ನ ಉದ್ಘಾಟನೆ ಮತ್ತು ಪ್ರವೇಶಾತಿ ಕಾರ್ಯಕ್ರಮವು ಭರವಸೆಯ ಆರಂಭವಾಗಿ, ಮುಂದಿನ ಜ್ಞಾನಯಾತ್ರೆಗೆ ಉತ್ಸಾಹಭರಿತ ವಾತಾವರಣ ನಿರ್ಮಿಸಿತು.

 

ಮಹಿಳಾ ಸಬಲೀಕರಣ ಘಟಕದ ಸಂಚಾಲಕರಾದ ಡಾ. ಭಾರತಿ  ಶ್ರೀಮತಿ. ಯಶೋಧಾ ಎಸ್.ಪಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಇದರ ಸದುಪಯೋಗ ಪಡೆದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ