ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಖಾಸಗಿ ಕಂಪನಿ ಆಯೋಜಿಸಿದ್ದ ಸಿಂಪೋಸಿಯಮ್ ನಲ್ಲಿ ಬಿಎಂಟಿಸಿ ಬಗ್ಗೆ `ನೋ ಮೋರ್ ಬಿಎಂಟಿಸಿ, ನೋ ಮೋರ್ ಮೊನೊಪಾಲಿ ಎಂದು ಭಾಷಣ ಮಾಡಿದ್ದು ನಾಚಿಕೆಗೇಡು. ಸಾರಿಗೆ ಕ್ಷೇತ್ರದ ಪರಿಣಿತರನ್ನು ಹೊಂದಿರುವ ಸಂಸ್ಥೆಗಳು ಆಯೋಜಿಸುವ ಸಮ್ಮೇಳನಗಳಲ್ಲಿ ಮಾತನಾಡಿದರೆ ಉಭಯ ರೀತಿಯಲ್ಲಿ ಮಾಹಿತಿ ದೊರೆಯುತ್ತದೆ. ಹೊರತುಪಡಿಸಿ ಖಾಸಗಿಯವರ ಕಾರ್ಯಕ್ರಮದಲ್ಲಿ ಮಾತನಾಡಿದರೆ, ಅವರು ಸರ್ಕಾರಿ ವ್ಯವಸ್ಥೆಯನ್ನು ದೂಷಿಸುವ ಪ್ರವೃತ್ತಿಯನ್ನೇ ಹೊಂದಿದ್ದಾರೆ. ಹೀಗಾಗಿ ನಕಾರಾತ್ಮಕವಾಗಿಯೇ ಮಾತನಾಡುತ್ತಾರೆ ಎಂದರು.

ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ:
ಖಾಸಗಿಯವರು ಬಸ್ಸುಗಳ ಕಾರ್ಯಾಚರಣೆಯನ್ನು ಸೇವೆಯಾಗಿ ಪರಿಣಗಿಸುವುದಿಲ್ಲ. ವ್ಯಾಪಾರ, ವ್ಯವಹಾರದಿಂದ ನೋಡುತ್ತಾರೆ. ಯಾವ ಮಾರ್ಗದಲ್ಲಿ ಲಾಭ ಬರುತ್ತದೋ ಅಲ್ಲಿ ಮಾತ್ರ, ಬಸ್ಸುಗಳ ಕಾರ್ಯಾಚರಣೆ ಮಾಡುತ್ತಾರೆ. ಬಿಎಂಟಿಸಿ ನಿತ್ಯವೂ ೪೮ ಲಕ್ಷ ಜನರಿಗೆ ಸಾರಿಗೆ ಸೇವೆ ಒದಗಿಸುತ್ತಿದೆ. ಇದರೊಂದಿಗೆ ಮೆಟ್ರೋ, ಆಟೋ, ಓಲಾ, ಊಬರ್ ಗಳೂ ಸೇವೆ ಸಲ್ಲಿಸುತ್ತಿವೆ. ಬೆಂಗಳೂರಿನ ಜನಸಂಖ್ಯೆ ೧.೪೪ ಕೋಟಿ ಇದ್ದರೆ, ಬಿಎಂಟಿಸಿ ಬಸ್ಸುಗಳು ನಗರದ ಸುಮಾರು ೧/೩ ರಷ್ಟು ಸಂಚರಿಸುತ್ತಿವೆ. ಇದೊಂದು ಕಲ್ಯಾಣ ರಾಜ್ಯದ ಪರಿಕಲ್ಪನೆ ಆಗಿದ್ದು ನಮ್ಮ ಸರ್ಕಾರ ಸಾರ್ವಜನಿಕ ಸಾರಿಗೆಯನ್ನು ಉಳಿಸಿ, ಬೆಳೆಸಿಕೊಂಡು ಮುನ್ನಡೆಸುವ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದೆ. ಸಾರ್ವಜನಿಕ ಸಾರಿಗೆಯಲ್ಲಿ ಒಂದು ದಿನವೂ ಓಡಾಡದೇ, ಅದರ ಅನುಭವ ಪಡೆಯದೇ ಸಮಾಜದ ಎಲ್ಲ ಸಮಸ್ಯೆಗಳಿಗೂ ಇವರೇ ಸೂಕ್ತ ಪರಿಹಾರ ನೀಡುವವರೆಂಬ ಭ್ರಮೆಯಲ್ಲಿದ್ದಾರೆ ಎಂದು ತೇಜಸ್ವಿ ಸೂರ್ಯ ಮತ್ತು ಮೋಹನ್ ದಾಸ್ ಪೈ ವಿರುದ್ಧ ವಾಗ್ದಾಳಿ ನಡೆಸಿದರು.
ಮುಂಚೂಣಿಯಲ್ಲಿ ಬಿಎಂಟಿಸಿ:
ಖಾಸಗಿ ಕಂಪನಿಯಯವರು ಕಾರ್ಖಾನೆ, ಕಂಪನಿಗಳಿಗೆ ಬಾಡಿಗೆ ಆಧಾರದ ಮೇರೆ ಕಾರು, ಶಟಲ್ ಬಸ್ ಗಳು ಹಾಗೂ ಇತರೆ ಸಾರಿಗೆ ಸಂಬAಧ ವ್ಯವಸ್ಥೆಗಳನ್ನು ಮಾಡಿಕೊಡುತ್ತಾರೆ. ಇವರಿಗೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇರುವುದಿಲ್ಲ. ಪ್ರಪಂಚದ ಯಾವುದೇ ಸಾರ್ವಜನಿಕ ಸಾರಿಗೆಯು ಲಾಭದ ದೃಷ್ಟಿಯಿಂದ ನಡೆಸುತ್ತಿಲ್ಲ. ಸರ್ಕಾರದಿಂದ ಸಾರ್ವಜನಿಕ ಸಾರಿಗೆಗೆ ದೊರಕುವ ಪ್ರೋತ್ಸಾಹ ಹಾಗೂ ಸೌಲಭ್ಯಗಳಿಂದ ಸಾರ್ವಜನಿಕರಿಗೆ ನೀಡುವ ಸೇವೆಯೆಂದು ಪರಿಗಣಿಸುತ್ತಾರೆ. ಈ ಪೈಕಿ ಬೆಂಗಳೂರಿನ ಬಿಎಂಟಿಸಿ ಯಲ್ಲಿ ಒಟ್ಟು ೭೦೬೭ ಬಸ್ ಗಳಿದ್ದು, ಇದರಲ್ಲಿ ೧೭೯೯ ಬಸ್ ಗಳಲ್ಲಿ ನಿತ್ಯವೂ ೪೮ ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಚೆನೈ, ಮುಂಬಯಿ, ದೆಹಲಿ ಮತ್ತು ಕೊಲ್ಕತ್ತಾ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಮುಂಚೂಣಿಯಲ್ಲಿದೆ. ಚೆನೈನ ಎಂಟಿಸಿ ೩೬೫೧ ಬಸ್ ಗಳಲ್ಲಿ ೨೩೦ ಎಲೆಕ್ಟಿçಕಲ್ ಬಸ್ ಗಳಿವೆ. ಇವುಗಳಲ್ಲಿ ನಿತ್ಯ ೩೪ ಲಕ್ಷ ಜನ ಸಂಚರಿಸುತ್ತಿದ್ದಾರೆ. ಮುಂಬಯಿಯ ಬೆಸ್ ಸಾರಿಗೆಗೆ ೩೭೯೪ ಬಸ್ ಗಳ ಪೈಕಿ ೨೩೪೦ ಬಾಡಿಗೆ ಬಸ್, ೧೧೨೧ ಎಲೆಕ್ಟಿçಕ್ ಬಸ್ಸು ಇದ್ದು ೨೫ ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ದೆಹಲಿಯ ಡಿಟಿಸಿಯಲ್ಲಿ ೩೨೨೨ ಬಸ್ ಗಳ ಪೈಕಿ ೨೫೨೬ ಬಸ್ ಗಳಲ್ಲಿ ೨೪ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಕೊಲ್ಕತ್ತಾ ದಲ್ಲಿ ಕೇವಲ ೭೫೦ ಬಸ್ ಗಳಿದ್ದು ೬ ಲಕ್ಷ ಜನರು ಸಂಚರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
5800 ಹೊಸ ಬಸ್ ಗಳ ಸೇರ್ಪಡೆ:

ಬಿಯಾಂಡ್ ಫ್ರೀ ರೈಡರ್ಸ್ ಎಂಬ ಹೆಸರಿನಲ್ಲಿ ಸಸ್ಟೆöÊನೇಬಲ್ ಮೊಬಿಲಿಟಿ ನೆಟ್‌ವರ್ಕ್ ನವರು ದೇಶದ ೧೦ ನಗರಗಳಲ್ಲಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಬಗ್ಗೆ ಅಧ್ಯಯನ ನಡೆಸಿದ್ದು ಬೆಂಗಳೂರು-ಶೇ ೨೩, ಹುಬ್ಬಳ್ಳಿ-ಧಾರವಾಡ-ಶೇ ೨೧ ಮಹಿಳಾ ಉದ್ಯೋಗಿಗಳ ಸಂಖ್ಯೆಯು ಶಕ್ತಿ ಯೋಜನೆಯಿಂದ ಹೆಚ್ಚಳವಾಗಿದೆ ಎಂದು ತಿಳಿಸಿದೆ. ಮತ್ತೊಂದು ವರದಿಯು ಶೇ ೧೯ ಸ್ತಿçÃಯರು ಮನೆಯಿಂದ ಹೊರ ಹೋಗಿ ಕೆಲಸ ಮಾಡಲು ಆರಂಭಿಸಿದ್ದಾರೆ. ಇದರಿಂದ ರಾಜ್ಯದ ತಲಾ ಆದಾಯ ಹೆಚ್ಚಳವಾಗಲಿದೆ ಎಂದು ತಿಳಿಸಿದೆ. ಶೂನ್ಯ ಅಭಿವೃದ್ಧಿ ಶೂರರಾದ ಬಿಜೆಪಿಯವರು, ಅವರನ್ನು ಬೆಂಬಲಿಸುತ್ತಿರುವವರು ಟ್ವೀಟ್ ಮಾಡುವುದು, ಖಾಸಗಿ ಸಮ್ಮೇಳನಗಳಲ್ಲಿ ಮಾತನಾಡುವುದು ಬಿಟ್ಟರೆ ಇವರ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ೧ ಲಕ್ಷಕ್ಕೂ ಅಧಿಕ ಸಿಬ್ಬಂದಿಗಳು ಹಾಗೂ ಕುಟುಂಬದವರನ್ನು ಬೀದಿ ಪಾಲು ಮಾಡಿದ್ದರು. ಕಳೆದ ಎರಡೂವರೆ ವರ್ಷದಲ್ಲಿ ನಮ್ಮ ಸರ್ಕಾರ ಶೂನ್ಯ ನೇಮಕಾತಿಯಿಂದ ೧ ಸಾವಿರ ನೇಮಕಾತಿ, ಶೂನ್ಯ ಬಸ್ಸುಗಳ ಸೇರ್ಪಡೆಯಿಂದ ೫೮೦೦ ಹೊಸ ಬಸ್ಸುಗಳ ಸೇರ್ಪಡೆ, ಹೊಸ ಘಟಕ, ಬಸ್ ನಿಲ್ದಾಣಗಳ ನಿರ್ಮಾಣ ಹತ್ತು ಹಲವು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ರೂ.1 ಕೋಟಿ ಅಪಘಾತ ವಿಮೆ, ನಗದು ರಹಿತ ವೈದ್ಯಕೀಯ ಸೌಲಭ್ಯ ಜಾರಿ ಮಾಡಿದ್ದೇವೆ ಎಂದರು.
ಕರ್ನಾಟಕವೇ ಮುಂದು:
ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕರ್ನಾಟಕ ಅತ್ಯುತ್ತಮವಾಗಿದೆ. ದೇಶದ ಸರಾಸರಿಯೇ ೧ ಸಾವಿರ ಜನರಿಗೆ ೧.೨ ಬಸ್ಸುಗಳಿವೆ. ಈ ಪೈಕಿ ಕರ್ನಾಟಕದಲ್ಲಿ ೨೬೦೫೪ ಬಸ್ಸುಗಳಿದ್ದು ೬.೮೪ ಕೋಟಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಪ್ರತಿ ೧ ಸಾವಿರ ಜನರಿಗೆ ೩.೩೧ ಬಸ್ ಗಳ ಲಭ್ಯವಿದೆ. ತಮಿಳುನಾಡು-೨೦೯೧೨, ಜನಸಂಖ್ಯೆ-೭.೭೪, ಲಭ್ಯವಿರುವ ಬಸ್-೨.೭೦, ಮಹಾರಾಷ್ಟç: ಬಸ್ ಗಳ ಸಂಖ್ಯೆ-೧೬೯೦೦, ಜನಸಂಖ್ಯೆ-೧೨.೮ ಕೋಟಿ, ಪ್ರತಿ ೧ ಜನರಿಗೆ ೧.೩೨ ಬಸ್ ಸೌಲಭ್ಯ, ಉತ್ತರ ಪ್ರದೇಶ-೧೩,೦೩೧ ಬಸ್, ೨೪,೨೩ ಕೋಟಿ ಜನಸಂಖ್ಯೆ, ೧ ಸಾವಿರ ಜನರಿಗೆ ೦.೫೪ ಬಸ್ ಗಳ ಲಭ್ಯತೆ, ಆಂಧ್ರಪ್ರದೇಶ-ಬಸ್ಸುಗಳ ಸಂಖ್ಯೆ ೧೧೧೧೧, ೫.೩೬ ಕೋಟಿ ಜನರು, ೧ ಸಾವಿರ ಜನರಿಗೆ ೨.೦೭ ಲಭ್ಯವಿರುವ ಬಸ್ ಗಳು, ತೆಲಂಗಾಣದಲ್ಲಿ ಬಸ್ ಗಳ ಸಂಖ್ಯೆ-೯೯೧೧, ನಿತ್ಯ ಸಂಚರಿಸುವರ ಸಂಖ್ಯೆ-೩.೮೫, ೧ ಸಾವಿರ ಜನರಿಗೆ ಲಭ್ಯವಿರುವ ಬಸ್ ಗಳ ಸಂಖ್ಯೆ-೨.೫೭, ಗುಜರಾತ್ನಲ್ಲಿ - ೮೧೮೯ ಬಸ್ ಗಳು, ೬.೩೮ ಕೋಟಿ ಜನ ನಿತ್ಯ ಸಂಚರಿಸಿದರೆ ೧ ಸಾವಿರ ಜನರಿಗೆ ಲಭ್ಯವಿರುವ ಬಸ್ ಸಂಖ್ಯೆ ಶೇ ೧.೨೮, ಕೇರಳದಲ್ಲಿ-೫೫೬೬, ೩.೫೦ ಕೋಟಿ ಜನರ ಸಂಚಾರ, ೧.೫೪ ಪ್ರತಿ ಸಾವಿರ ಜನರಿಗೆ ಲಭ್ಯವಿರುವ ಬಸ್ ಸೌಲಭ್ಯ, ರಾಜಸ್ಥಾನ-೪೫೦೦ ಬಸ್ ಗಳಲ್ಲಿ ನಿತ್ಯವೂ ೮.೩೧ ಕೋಟಿ ಜನ ಸಂಚರಿಸಿದರೆ, ೦.೫೪ ಬಸ್ ಸೌಲಭ್ಯವಿದೆ. ಓಡಿಶಾದಲ್ಲಿ ೧೯೯೯ ಬಸ್ ಗಳಲ್ಲಿ ನಿತ್ಯ ೪.೬೩ ಕೋಟಿ ಜನರು ಓಡಾಡುತ್ತಾರೆ. ಈ ಪೈಕಿ ೦.೪೩ ಮಾತ್ರ ಬಸ್ ಸೌಲಭ್ಯವಿದೆ. ಬಿಹಾರದಲ್ಲಿ ೧೦೦೩ ಬಸ್ ಗಳಲ್ಲಿ ೧೩.೦ ಕೋಟಿ ಜನರು ಸಂಚರಿಸುತ್ತಿದ್ದು ೦.೦೦೭ ಬಸ್ ಲಭ್ಯತೆ ಇದೆ. ಮಧ್ಯ ಪ್ರದೇಶದಲ್ಲಿ ಸರ್ಕಾರಿ ರಸ್ತೆ ಸಾರಿಗೆ ನಿಗಮವೇ ಇಲ್ಲ. ಆದರೂ ೮.೮೪ ಕೋಟಿ ಜನರು ಸಂಚರಿಸುತ್ತಿದ್ದಾರೆ ಎಂದು ಅಂಕಿಅAಶಗಳನ್ನು ಒದಗಿಸಿದರು.

ವಿಪಕ್ಷದವರದ್ದು ಅಪಾಯಕಾರಿ ಚಿಂತನೆ:
ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಗುಜರಾತ್, ರಾಜಸ್ಥಾನ, ಓಡಿಶಾಗಳಲ್ಲಿ ಪ್ರತಿ ಸಾವಿರ ಜನರಿಗೆ ಲಭ್ಯವಿರುವ ಬಸ್ಸುಗಳ ಸಂಖ್ಯೆ ಕಡಿಮೆ ಇದೆ. ನಮ್ಮನ್ನು ಟೀಕೆ ಮಾಡುವವರು ಮೋದಿ ಅವರಿಗೆ ಹೇಳಿ ಈ ರಾಜ್ಯಗಳಲ್ಲಿ ಸಾರಿಗೆ ವ್ಯವಸ್ಥೆ ಬಲಪಡಿಸಬೇಕೆಂದು ಹೇಳಿದರು. ಜನರ ಸುಗಮ ಸಂಚಾರಕ್ಕೆ ವಿವಿಧ ಮಾದರಿಯ ಸಾರಿಗೆಗಳು ಅವಶ್ಯಕ. ಬಸ್ಸು, ಮೆಟ್ರೋ, ಆಟೋ, ಟ್ಯಾಕ್ಸಿ, ಉಪನಗರ ರೈಲು ಎಲ್ಲವೂ ಬೇಕು. ವಿಪಕ್ಷದವರು ಮತ್ತು ವಿಪಕ್ಷವನ್ನು ಬೆಂಬಲಿಸುವ ಉದ್ಯಮಿಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಮುಚ್ಚಿಬಿಡಬೇಕೆಂದು ಅಪಾಯಕಾರಿಯಾದ ಚಿಂತನೆ ಹೊಂದಿದ್ದಾರೆ. ಇದನ್ನು ಬಲವಾಗಿ ಖಂಡಿಸುತ್ತೇನೆ. `ನೋ ಮೋರ್ ಬಸಸ್ ಅಲ್ಲ, ಮೋರ್ ಅಂಡ್ ಮೋರ್ ಬಸಸ್' ಎನ್ನುವ ಮೂಲಕ ಸಪೋರ್ಟ್ ಮಾಡಬೇಕೆಂದರು.