LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಬ್ಬರು ಕೊಲೆ ಆರೋಪಿಗಳ ಬಂಧನ

ಬಳ್ಳಾರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ಸೆ.೫ರಂದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಆರಂಭಿಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜಿ., ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, ಸೆ.೫ರಂದು ಮಹ್ಮದ್ ಆಸೀಫ್ ಎನ್ನುವರು ಈದ್ - ಮಿಲಾದ್ ಹಬ್ಬದ ಪ್ರಯುಕ್ತ ಮಸೀದಿಗೆ ಹೋಗಿ ಬರುವಾಗ ತಮ್ಮ ಮನೆಯ ಹಿಂಭಾಗದಲ್ಲಿ ೩೦-೩೫ ವಯಸ್ಸಿನ ವ್ಯಕ್ತಿಗೆ ಕಲ್ಲುಗಳಿಂದ ಜಜ್ಜಿ ಸಾಯಿಸಿದ್ದನ್ನು ಸಂಬAಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖಾಧಿಕಾರಿಗಳು ಶೋಧ ಆರಂಭಿಸಿದ್ದರು.



ಕೊಲೆ ಪ್ರಕರಣದಲ್ಲಿನ ಆರೋಪಿತರ ಪತ್ತೆಗಾಗಿ ಬಳ್ಳಾರಿ ನಗರ ಡಿಎಸ್‌ಪಿ ಚಂದ್ರಕಾAತ್ ನಂದರೆಡ್ಡಿ ರವರ ನೇತೃತ್ವದಲ್ಲಿ ಎಪಿಎಂಸಿ ಠಾಣೆಯ ಪಿಐ ಮೊಹಮ್ಮದ್ ರಫಿ, ಪಿಐ ಮಹಾಂತೇಶ, ಪಿ.ಎಸ್.ಐ. ಸುರೇಶಪ್ಪ, ಆರ್. ಮಲ್ಲಿಕಾರ್ಜುನ, ಸಿಬ್ಬಂದಿಯವರಾದ ಶ್ರೀನಿವಾಸರಾವ್, ಗುರುಪ್ರಸಾದ್, ಬಸವರಾಜ, ಶ್ರೀನಿವಾಸ, ಕೋನಪ್ಪ, ಕಾಸೀಂ ಸಾಬ್, ದೀಪೇಂದ್ರ, ಶಿವರಾಜ್, ದೊಡ್ಡಬಸವನಗೌಡ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಹುಸೇನ್ ನಗರದ ವಾಲ್ಮೀಕಿ ಜನಾಂಗದ ಬಾಲರಾಜ್ ತಂದೆ ಲೇಟ್ ಹೊನ್ನಪ್ಪ(೨೨) ಮತ್ತು ರೂಪನಗುಡಿ ರಸ್ತೆಯ ಹನುಮಂತ ತಂದೆ ಲೇಟ್ ಹೊನ್ನೂರಪ್ಪ@ಹೊಂಡ್ರಿ,(೨೦) ಇವರನ್ನು ಬಳ್ಳಾರಿ ಸದ್ರುದ್ದೀನ್ ಬಾಬ ದರ್ಗಾ ಎದುರುಗಡೆ ಪತ್ತೆ ಮಾಡಿ ದಸ್ತಗಿರಿ ಮಾಡಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್, ನವೀನ್ ಕುಮಾರ್ ಅವರೊಂದಿಗೆ ತನಿಖಾ ತಂಡವನ್ನು ಅಭಿನಂದಿಸಿರುವುದಾಗಿ ತಿಳಿಸಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST