ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಮನವಿ
ಚಿತ್ರದುರ್ಗ : ಜಿಲ್ಲೆ ಯ ಮೊಳಕಾಲ್ಮುರು ತಾಲೂಕಿನ ಅಮಕುಂದಿ ಗ್ರಾಮದಲ್ಲಿ ನೀರಿನ ಸಮಸ್ಯೆಯಿಂದ 30-40 ಗ್ರಾಮಸ್ಥರಿಗೆ ಅಲರ್ಜಿ ಮತ್ತು ಫಂಗಲ್ ಇನ್ಸ್ಪೆಕ್ಷನ್ ಸಾಂಕ್ರಾಮಿಕ ರೋಗ ಉಂಟಾಗಿದೆ. ಆದ್ದರಿಂದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಧನಂಜಯ. ಜಿ ಅವರು ತಾಸಿಲ್ದಾರ್ ಅವರತ್ರ ಮಾತಾಡಿ ಹಾಗೂ ಆರೋಗ್ಯ ಮುಖ್ಯ ಅಧಿಕಾರಿಗಳ ಹತ್ತಿರ ಮಾತನಾಡಿ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡರು ,
ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿ ಇಲ್ಲಿನ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲನೆ ಮಾಡಿ ಹಾಗೂ ಶುದ್ಧ ಘಟಕದ ರಿಪೇರಿಯನ್ನು ಮಾಡಿಸಿಕೊಡಬೇಕೆಂದು ಹೇಳಿ ಹಾಗೂ ಚರಂಡಿಗಳನ್ನು ಸ್ವಚ್ಛ ಮಾಡಬೇಕೆಂದು ಹಾಗೂ ಅಮಕುಂದಿ ಗ್ರಾಮದಲ್ಲಿ ಎರಡು ಓವರ್ ಟ್ಯಾಂಕ್ಗಳಿದ್ದು ಅವು ಕಳಪೆ ಗುಣಮಟ್ಟ ದಿಂದ ಕೂಡಿದ್ದು, ಅವನ್ನು ತೆರವುಗೊಳಿಸಿ ಹೊಸದಾಗಿ ಓವರ್ ಹೆಡ್ ಟ್ಯಾಂಕನ್ನು ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು .
ಈ ವೇಳೆಯಲ್ಲಿ ಗ್ರಾಮದ ಮುಖಂಡರಾದ ಚನ್ನಬಸಪ್ಪ , ಹಾಗೂ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರು ನಾಗರಾಜಪ್ಪ , ಗೋಶಾಲೇ ಅಂಜನಿ, ಬಂಗಾರಪ್ಪ, ಪರಮೇಶ್ವರಪ್ಪ, ನಾಗರಾಜ್, ಹನುಮಂತಪ್ಪ, ಶ್ರೀನಿವಾಸ್ ಹಲವಾರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.