LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದಲಿತ ವ್ಯಕ್ತಿಗೆ ಭದ್ರತೆ ನೀಡಲು ಮನವಿ

ಧರ್ಮಸ್ಥಳ ಕಾಡಿನಲ್ಲಿ ಮಹಿಳೆಯರ ಶವಗಳ ಅಕ್ರಮ ವಿಲೇವಾರಿ

 

ಬಳ್ಳಾರಿ: ಧರ್ಮಸ್ಥಳದ ಕಾಡಿನಲ್ಲಿ ನೂರಾರು ಮಹಿಳೆಯರ ಮೃತ ದೇಹಗಳ ಅಕ್ರಮ ವಿಲೇವಾರಿ ಕುರಿತು ಸಾಕ್ಷಿದಾರನಾಗಿರುವ  ಬಡ, ದಲಿತ ವ್ಯಕ್ತಿಗೆ ಭದ್ರತೆ ನೀಡಿ ಪ್ರಕರಣವನ್ನು  ಶೀಘ್ರವಾಗಿ ತನಿಖೆಗೆ ಒಳಪಡಿಸಬೇಕೆಂದು ಕುರಿತು ಕರ್ನಾಟಕ ಸಮತಾ ಸೈನಿಕ ದಳವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಬಳ್ಳಾರಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಮನವಿ ಸಲ್ಲಿಸಿರುವ ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಕಾರ್ಯಾಧ್ಯಕ್ಷ ಪೃಥ್ವಿರಾಜ್ ದೊಡ್ಡಮನೆ ಅವರು, ಧÀರ್ಮಸ್ಥಳದ ಸೌಜನ್ಯ ಎಂಬ ಯುವತಿಯ ಮಾನಭಂಗ ಹಾಗೂ ಹತ್ಯೆ ಕುರಿತು ಹಲವಾರು ವರ್ಷಗಳಿಂದ ನಡೆಯುತ್ತಿರುವ ಹೋರಾಟಗಳ ಹಾಗೂ ನಿಗೂಢ ನಾಪತ್ತೆ ಕೃತ್ಯಗಳ ಹಿನ್ನೆಲೆಯಲ್ಲಿ ಸದರಿ ದೇವಸ್ಥಾನದ ದಲಿತ ಸ್ವಚ್ಛತಾ ಕಾರ್ಮಿಕನು ದೇವಾಲಯದ ಬಲಾಢ್ಯ ಪ್ರಭಾವಿ ಸಿಬ್ಬಂದಿಗಳು ಆ ವ್ಯಕ್ತಿಗೆ ಜೀವ ಬೆದರಿಕೆ ಹಾಕಿದ್ದಾರೆ. ಧರ್ಮಸ್ಥಳದ ಮುಖ್ಯಸ್ಥರ ಅಪ್ಪಣೆ ಮೇರೆಗೆ ಸುಮಾರು ಎರಡು ದಶಕಗಳಿಂದ ನೂರಾರು ಯುವತಿಯರ ಮತ್ತು ಮಹಿಳೆಯರ ಮೃತ ದೇಹಗಳನ್ನು ತಾನು ಕಾಡಿನಲ್ಲಿ ಅಕ್ರಮವಾಗಿ ಹೂತು ಹಾಕಿರುವುದಾಗಿ ಸಾಕ್ಷಿ ನೀಡಲು ಮುಂದೆ ಬಂದಿದ್ದಾರೆ. ಈ ಕುರಿತು ಸಾಕ್ಷಿದಾರನಾಗಿರುವ ದಲಿತ ವ್ಯಕ್ತಿ ಧರ್ಮಸ್ಥಳದ ಪೊಲೀಸ್ ಠಾಣೆ ಹಾಗೂ ಬೆಳ್ತಂಗಡಿ ನ್ಯಾಯಾಲಯದಲ್ಲಿ ದೂರು ಹೇಳಿಕೆಗಳನ್ನು ದಾಖಲಿಸಿದ್ದಾರೆ. ಸರ್ಕಾರವು ವಿಳಂಬ ಮಾಡದೇ ತನಿಖೆ ನಡೆಸಿ ಈ ಕೊಲೆಗಳ ಹಿಂದೆ ಇರುವ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಬೆಕೆಂದು ಅವರು ಒತ್ತಾಯಿಸಿದ್ದಾರೆ.



ಕಾರ್ಮಿಕನು ಆಡಳಿತ ಮಂಡಳಿಯ ಪ್ರಭಾವ ವ್ಯಕ್ತಿಗಳಿಂದ ಬಂದ ಜೀವ ಬೆದರಿಕೆ ನಿಮಿತ್ತ ನೂರಾರು ಮಹಿಳೆಯರ ಮೃತ ದೇಹಗಳನ್ನು ಅಕ್ರಮವಾಗಿ ವಿಲೇವಾರಿ ಮಾಡಿರುವುದಾಗಿ  ಹೇಳಿದ್ದಾನೆ. ಅವರ ಕುಟುಂಬಕ್ಕೂ ಸೂಕ್ತ ಭದ್ರತೆ ಹಾಗೂ ಕುಟುಂಬದ ನಿರ್ವಹಣೆಗೆ ಆರ್ಥಿಕ ನೆರವು ನೀಡಬೇಕು. ಕರ್ನಾಟಕದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸುಮಾರು ಎರಡು ದಶಕಗಳಿಂದ ಕಾಣೆಯಾಗಿರುವ ಮಹಿಳೆಯರ ಮಿಸ್ಸಿಂಗ್ ಕಂಪ್ಲೇಂಟ್ ಕುರಿತು ಮಾಹಿತಿ ಪಡೆದು ದೂರು ನೀಡಿದ ಕುಟುಂಬದ ವರ ಡಿಎನ್‌ಎ ಮಾದರಿ ಸಂಗ್ರಹಿಸಿ ಇದನ್ನು ಧರ್ಮಸ್ಥಳದ  ಕಾಡಿನಲ್ಲಿ ಹೂತು ಹಾಕಿರುವ ಅಸ್ತಿಪಂಜರಗಳ ಡಿಎನ್‌ಎ ತಾಳೆ ಮಾಡಿ ತನಿಖೆ ಮಾಡಬೇಕು. 2003 ರಂದು ಕಾಣೆಯಾದ ಅನನ್ಯ ಭಟ್ ಎಂಬ ವೈದ್ಯ ಕೀಯ ವಿದ್ಯಾರ್ಥಿನಿಯ ತಾಯಿ ಹಿರಿಯ ನಾಗರಿಕಳಾದ ಸುಜಾತ ಭಟ್ ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅವರು ಕೋಮ ಸ್ಥಿತಿಗೆ ಹೋಗಿದ್ದಾರೆ. ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಬೇಕು. ಈ ಸಂಬAಧ ಸಾಕ್ಷಿದಾರನು ಜುಲೈ ೩ನೇ ತಾರೀಖಿನಂದು ದೂರು ನೀಡಿದ್ದರೂ ತನಿಖೆ ವಿಳಂಬವಾಗುತ್ತಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅಸಹನೆ ವ್ಯಕ್ತವಾಗುತ್ತಿದೆ. ಸರ್ಕಾರ ಕೂಡಲೇ ಪ್ರಕರಣಗಳ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರ ಓಡಾಟವನ್ನು ಕಾಡಿನಲ್ಲಿ ನಿರ್ಬಂಧಿಸಿ ಕಾವಲು ಪಡೆಯನ್ನು ನಿಯೋಜಿಸಬೇಕು.  ಗಸ್ತು ಸಿಬ್ಬಂದಿಗಳನ್ನು ನೇಮಿಸಿ ಸಾಕ್ಷಿ ನಾಶವಾಗದಂತೆ ಕ್ರಮ ವಹಿಸಬೇಕು. ನಾಡಿನ ಪ್ರಗತಿಪರ ಹೋರಾಟಗಾರರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದಂತೆ ಎಸ್ ಐ ಟಿ ತನಿಖೆಯನ್ನು ನ್ಯಾಯಾಂಗ ಹಾಗೂ ಪೊಲೀಸ್ ಇಲಾಖೆಯ ದಕ್ಷಾಧಿಕಾರಿಗಳಿಂದ ನಿರ್ದಿಷ್ಟ ಕಾಲಮಿತಿಯಲ್ಲಿ ಶೀಘ್ರವಾಗಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಸಮತ ಸೈನಿಕ ದಳ ದ ಪದಾಧಿಕಾರಿಗಳಾದ ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ್, ಸಂಡೂರಪ್ಪ, ಮುರಳಿ, ಕಲೀಲ್, ಶಾಂತ, ಲಕ್ಷ್ಮೀದೇವಿ, ರೋಹಿಣಿ ಎಂಪಿ ಕಮಲ, ಪದ್ಮ ದ್ರಾಕ್ಷಿಣಿ ಇನ್ನೂ ಅನೇಕರು ಈವೇಳೆ ಇದ್ದರು. 
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST